Wednesday, 19th June 2024

ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು: ತಡವಾಗಿ ಆರಂಭಗೊಂಡ ಕೋರ್ಟ್‌ ಕಲಾಪ

ನವದೆಹಲಿ: ಸುಪ್ರೀಂ ಕೋರ್ಟ್ ನ ವಿವಿಧ ಪೀಠಗಳು ತಮ್ಮ ವೇಳಾಪಟ್ಟಿ ಸಮಯದಿಂದ ಒಂದು ಗಂಟೆ ತಡವಾಗಿ ಕೆಲಸ ಪ್ರಾರಂಭಿಸಲಿದೆ. ಸರ್ವೋಚ್ಚ ನ್ಯಾಯಾಲಯದ ಅನೇಕ ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು ಕಾಣಿಸಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.

ಅನೇಕ ಸಿಬ್ಬಂದಿಗಳು ಸೋಂಕಿಗೆ ಒಳಗಾಗಿದ್ದರಿಂದ, ನ್ಯಾಯಾಧೀಶರು ತಮ್ಮ ನಿವಾಸಗಳಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯನಿರ್ವಹಿಸಲಿದ್ದಾರೆ. ನ್ಯಾಯಾಲಯದ ಕೊಠಡಿಗಳು ಸೇರಿದಂತೆ ಇಡೀ ನ್ಯಾಯಾಲಯದ ಆವರಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!