Saturday, 10th June 2023

ಟಿಡಿಪಿ ನಾಯಕನ ಕತ್ತು ಸೀಳಿ ಹತ್ಯೆ

ಗುಂಟೂರು: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಟಿಡಿಪಿ ನಾಯಕನ ಭೀಕರ ಹತ್ಯೆಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪಲ್ನಾಡಿಯಲ್ಲಿ ತೆಲುಗುದೇಶಂ ಪಕ್ಷದ ಮುಖಂಡ ಹಾಗೂ ದಾಚೆಪಲ್ಲಿ ಮಂಡಲದ ಮಾಜಿ ಸರ್ಪಂಚ್ ಪುರಮ್‌ ‌ಸೆಟ್ಟಿ ಅಂಕುಲು ಕೊಲೆಯಾದವರು. ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ದಾಚೆಪಲ್ಲಿ ಅವರನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದಕ್ಕೆ ಎಳೆ ದೊಯ್ದಿರುವ ದುಷ್ಕರ್ಮಿಗಳು ಅವರ ಗಂಟಲನ್ನು ಸೀಳಿ ಕೊಲೆ ಮಾಡಿದ್ದಾರೆ.

ಇವರನ್ನು ವೈಎಸ್‌ಆರ್‌ಸಿಪಿ ಪಕ್ಷದ ನಾಯಕರೇ ಕೊಲೆ ಮಾಡಿದ್ದಾರೆ ಎಂದು ಟಿಡಿಪಿ ಮುಖಂಡರು ಆರೋಪಿಸುತ್ತಿದ್ದಾರೆ.

error: Content is protected !!