Friday, 2nd June 2023

ಮಳೆ ಲೆಕ್ಕಿಸದೇ ಪುನೀತ್​ ಚಿತ್ರವಿರುವ ಬ್ಯಾನರ್‌’ಗೆ ಕೈಮುಗಿದ ಅಭಿಮಾನಿ

ಬೆಂಗಳೂರು: ಅಭಿಮಾನಿಯೊಬ್ಬ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪುನೀತ್​ ಅವರ ಚಿತ್ರವಿರುವ ಬ್ಯಾನರ್‌ ಮುಂದೆ ಕೈಮುಗಿದು ಕುಳಿತುಕೊಂಡಿರುವ ದೃಶ್ಯ ವೈರಲ್‌ ಆಗಿದೆ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಈ ಮಳೆಯ ನಡುವೆಯೇ ತಮ್ಮ ಪ್ರೀತಿಯ ಅಪ್ಪುವಿಗೆ ಹೀಗೊಂದು ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಡಿಯೋ ಅನ್ನು ‘ಟ್ರೋಲ್‌ ಕನ್ನಡ ಮೂವಿಸ್‌’ ಶೇರ್‌ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ನಟ ಪುನೀತ್‌ ರಾಜ್‌ಕುಮಾರ್‌ ಎಲ್ಲರನ್ನೂ ಅಗಲಿ ತಿಂಗಳಾಗುತ್ತ ಬಂದರೂ ಅವರ ಸಾವಿನ ಬಗ್ಗೆ ಇದುವರೆಗೂ ಹಲವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಿನಿಕ್ಷೇತ್ರದವರು, ಕುಟುಂಬಸ್ಥರು ಸೇರಿದಂತೆ ಸಾಮಾನ್ಯ ಜನರು ಕೂಡ ಅಪ್ಪುವಿನ ಜತೆಗಿನ ತಮ್ಮ ಒಡನಾಟ ನೆನಪಿಸಿಕೊಳ್ಳುತ್ತಿರುವ ಬೆನ್ನಲ್ಲೇ ಪುನೀತ್‌ ಅವರ ಸಮಾಧಿಯ ಮುಂದೆ ಬಂದು ಹಲವರು ರೋಧಿಸುತ್ತಿದ್ದಾರೆ.

 

error: Content is protected !!