Saturday, 27th July 2024

2.40 ಲಕ್ಷ ಮೌಲ್ಯದ ಹೆರಾಯಿನ್, ಕೊಕೈನ್ ವಶ: ನೈಜೀರಿಯಾ ಪ್ರಜೆಯ ಬಂಧನ

ಬೆಂಗಳೂರು: ಸರ್ವೀಸ್ ರಸ್ತೆಯೊಂದರಲ್ಲಿ ಮಾದಕ ವಸ್ತು ಹೆರಾಯಿನ್ ಮತ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದು, 2.40 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ಮತ್ತು ಕೊಕೈನ್ ವಶಪಡಿಸಿಕೊಂಡಿದ್ದಾರೆ.

ಜೈಕ್ನಾ ಅಲಿಯಾಸ್ ಜೇಮ್ಸ್ (27) ಬಂತ ನೈಜೀರಿಯಾ ಪ್ರಜೆ. ಜಯಂತಿನಗರದ ಈಸ್ಟರ್ ಎನ್‍ಕ್ಲೈವ್‍ನಲ್ಲಿ ನೆಲೆಸಿದ್ದನು. ನಗರ ದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‍ಗಳನ್ನು ಹತ್ಯೆ ಮಾಡಲು ನೀಡಿದ್ದ ಸೂಚನೆ ಮೇರೆಗೆ, ಗೋವಿಂದಪುರ ಠಾಣೆ ಪೊಲೀಸರು ತಂಡಗಳನ್ನು ಮಾಡಿಕೊಂಡು ಪತ್ತೆಕಾರ್ಯದಲ್ಲಿ ತೊಡಗಿದ್ದರು.

ಅಂಬೇಡ್ಕರ್ ಮೈದಾನದ ಸರ್ವೀಸ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಮಾದಕ ವಸ್ತುಗಳು, 500ರೂ. ಹಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈತನ ವೀಸಾ ದಾಖಲಾತಿಗಳನ್ನು ಪರಿಶೀಲಿಸದೆ ವಾಸಿಸಲು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರುಗಳನ್ನು ಸಹ ವಿಚಾರಣೆ ನಡೆಸಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ನಿರ್ದೇಶನದಲ್ಲಿ ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

Leave a Reply

Your email address will not be published. Required fields are marked *

error: Content is protected !!