Friday, 2nd June 2023

ಭಾರೀ ಮಳೆಗೆ ರೈಲ್ವೆ ನಿಲ್ದಾಣದ ತಡೆಗೋಡೆ ಕುಸಿತ

ಬೆಂಗಳೂರು: ರೈಲ್ವೆ ಮೇಲ್ ಸೇತುವ ಸಮೀಪವೇ ಇರುವ ತಡೆಗೋಡೆ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದೆ.

ಗೋಡೆಗೆ ಹೊಂದಿಕೊಂಡಿದ್ದ ಮನೆ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಗೋಡೆ ಕುಸಿತದ ಜೊತೆಗೆ ಮನೆಯೂ ಕುಸಿದಿದ್ದರೆ ಮಹಾ ದುರಂತವೇ ಸಂಭವಿಸುತ್ತಿತ್ತು.

ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಶೇಷಾದ್ರಿಪುರಂ ರಸ್ತೆಯಲ್ಲಿನ ರೈಲ್ವೆ ನಿಲ್ದಾಣದ ತಡೆಗೋಡೆ ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ದಿಢೀರ್ ತಡೆಗೋಡೆ ಕುಸಿತಗೊಂಡರೂ, ಗೋಡೆಯ ಮೇಲೆ ನಿರ್ಮಿಸಿದ ಮನೆ ಅದೃಷ್ಟವಶಾತ್ ಕುಸಿತಗೊಂಡಿಲ್ಲ.

ಶೇಷಾದ್ರಿಪುರಂನಿಂದ ಮೆಜೆಸ್ಟಿಕ್ ಗೆ ತೆರಳುವ ರಸ್ತೆಯಲ್ಲಿನ ತಡೆಗೋಡೆ ಕುಸಿತದಿಂದಾಗಿ, ಇದೀಗ ಗೋಡೆಯ ಮೇಲಿನ ಮನೆಯೂ ಕುಸಿತಗೊಳ್ಳುವ ಭೀತಿ ಎದುರಾಗಿದೆ.

error: Content is protected !!