Sunday, 23rd June 2024

ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ ನಿಧನ

ಹಾವೇರಿ: ಗಾಂಧಿವಾದಿ ಹಾವೇರಿ ತಾಲೂಕಿನ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿ ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ವಾರ್ಧಾ ಸಮೀಪದ ಪವನಾರಿನ ಗಾಂಧಿ ಆಶ್ರಮದಲ್ಲಿ ಚೆನ್ನಮ್ಮ ಹಳ್ಳಿಕೇರಿ ಕೊನೆಯುಸಿರೆಳೆದಿದ್ದಾರೆ.

ಆಚಾರ್ಯ ವಿನೋಬಾ ಭಾವೆಯವರ ಶಿಷ್ಯೆ, ಒಡನಾಡಿಯಾಗಿ ಚೆನ್ನಮ್ಮ ಹಳ್ಳಿಕೇರಿ ದೇಶ ಸೇವೆಯಲ್ಲಿ ನಿರತರಾಗಿದ್ದರು. 92ರ ಹರೆಯದ ಚೆನ್ನಮ್ಮ ನವರು ವಯೋಸಹಜ ಖಾಯಲೆಗಳಿಂದ ಬಳಲುತ್ತಿದ್ದರು. ಆಚಾರ್ಯ ಗಾಂಧಿ ಪ್ರಣೀತ ವಿಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. 1931ರಲ್ಲಿ ಜನಿಸಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ ಚೆನ್ನಮ್ಮ ಹಳ್ಳಿಕೇರಿ ಮಹತ್ತರ ಪಾತ್ರ ವಹಿಸಿದ್ದರು.

ಗಣ್ಯರು ಸೇರಿದಂತೆ ಜನಸಾಮಾನ್ಯರು, ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಹಿರಿಯ ಸರ್ವೋದಯ ಕಾರ್ಯಕರ್ತೆ ಶ್ರೀಮತಿ ಚೆನ್ನಮ್ಮ ಹಳ್ಳಿಕೇರಿಯವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ. ಅವರಿಗೆ 2016ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ದೊರೆತಿತ್ತು. ಅವರು ಸಮಾಜಕ್ಕೆ ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿ ಬದುಕಿದ್ದವರು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!