Friday, 19th July 2024

ಬೆಂಗಳೂರು ಗ್ರಾಮಾಂತರ: ಬೆಂಕಿ ಕೆನ್ನಾಲಿಗೆಗೆ ಹೋಟೆಲ್​ ಸುಟ್ಟು ಭಸ್ಮ

ಬೆಂಗಳೂರು: ದೇವನಹಳ್ಳಿ ಹೊರವಲಯದ(ಬೆಂಗಳೂರು ಗ್ರಾಮಾಂತರ ಜಿಲ್ಲೆ) ಹೆದ್ದಾರಿ ಬದಿಯ ಹೋಟೆಲ್​ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ, ಕೆನ್ನಾಲಿಗೆಗೆ ಹೋಟೆಲ್​ ಸುಟ್ಟು ಭಸ್ಮವಾಗಿದೆ.

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಗುರುವಾರ ಹೋಟೆಲ್​ನಲ್ಲಿ ಆಕಸ್ಮಿಕ ಬೆಂಕಿ ಬಿದ್ದು, ಇಡೀ ಹೋಟೆಲ್​ ಧಗಧಗಿಸಿ ಹೊತ್ತಿ ಉರಿಯಿತು.

ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿ ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅದೃಷ್ಟವಶಾತ್ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಹಕರು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.

Leave a Reply

Your email address will not be published. Required fields are marked *

error: Content is protected !!