Thursday, 18th July 2024

ಬೀದಿಗೆ ಬಂದ ಹು-ಧಾ ಪೊಲೀಸ್ ಕಮಿಷನರ್-ಡಿಸಿಪಿ ಕೃಷ್ಣಕಾಂತ್ ಒಳಜಗಳ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮತ್ತು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ್ ನಡುವಿನ ಒಳ ಜಗಳ ಬೀದಿಗೆ ಬಂದಿದೆ.

ಪೊಲೀಸ್ ಕಮೀಷನರ್ ವರ್ತನೆಗೆ ಬೇಸತ್ತಿರುವ ಕೃಷ್ಣಕಾಂತ್ ಅ. 3 ರಂದು ಡಿಜಿಪಿ ಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿKrishದ್ದಾರೆ. ದಿಲೀಪ್ ಅವರಿಗೆ ಕಂಟ್ರೋಲ್‌ ರೂಂ ಮುಖಾಂತರ ಪತ್ರ ಬರೆದಿರುವ ಅವತು ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ರಿಗೂ ಕಳಿಸಿದ್ದಾರೆ. ಅಲ್ಲದೇ, ಕಮಿಷನರ್‌ ಭೇಟಿಗೆ ಮುಕ್ತ ಅನುಮತಿ ಹಾಗೂ ಮಾರ್ಗದರ್ಶನ ನೀಡಲು ಸೂಚನೆ ನೀಡುವಂತೆ ಕೋರಿದ್ದಾರೆ.

ಕೃಷ್ಣಕಾಂತ್ ಬರೆದಿರುವ ಪತ್ರದಲ್ಲಿ ಏನಿದೆ?

‘ಸೂಕ್ಷ್ಮ ಪ್ರಕರಣವೊಂದರ ತನಿಖೆಯ ಉಸ್ತುವಾರಿ ಹಾಗೂ ಪ್ರಗತಿ ಕುರಿತು ಮಾತನಾಡಲು ನಿಮ್ಮ ಭೇಟಿಗೆ ಪ್ರಯತ್ನಿಸಿದೆ. ಕಚೇರಿಯ ದೂರವಾಣಿಗೆ ಕರೆ ಮಾಡಿದಾಗ ನೀವು ಬೇರೊಂದು ಕರೆಯಲ್ಲಿರುವುದಾಗಿ, ನೀವೇ ವಾಪಸ್ ಕರೆ ಮಾಡುವುದಾಗಿ ಸಿಬ್ಬಂದಿ ತಿಳಿಸಿದರು. ಕರೆ ಬರಲಿಲ್ಲ. ಮತ್ತೊಮ್ಮೆ ಕರೆ ಮಾಡಿದಾಗ, ನೀವು ಮನೆಗೆ ಹೋಗಿರುವುದಾಗಿ ಹೇಳಿದರು.

ಮನೆ ದೂರವಾಣಿಗೆ ಕರೆ ಮಾಡಿದಾಗ ನೀವು ಭೇಟಿಗೆ ನಿರಾಕರಿಸಿ, ಕರೆ ಸ್ಥಗಿತಗೊಳಿಸಿದ್ದೀರಿ. ಯಾವುದೇ ವಿಷಯವಿದ್ದರೂ ಮುಕ್ತ ವಾಗಿ ನನ್ನನ್ನು ಭೇಟಿ ಮಾಡಿ ಚರ್ಚಿಸಬಹುದು ಎಂದು ನೀವೇ ಹೇಳಿದ್ದೀರಿ. ಈಗ ಭೇಟಿಗೆ ಅವಕಾಶ ನೀಡದಿರುವುದು ಸಮಂಜಸ ವಲ್ಲ. ಕಚೇರಿ ಬಳಿ ಒಂದೂವರೆ ಗಂಟೆಯಿಂದ ಕಾದರೂ, ಭೇಟಿಗೆ ಅವಕಾಶ ನೀಡಿಲ್ಲ.

ಅಕ್ರಮ, ಅನೈತಿಕ ಚಟುವಟಿಕೆಗಳು, ಕೋವಿಡ್–19 ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸದವರ ಹಾಗೂ ಸುರಕ್ಷಿತ ಅಂತರ ಕಾಯ್ದು ಕೊಳ್ಳದವರ ವಿರುದ್ಧ ಪ್ರಕರಣ ದಾಖಲಿಸಲು, ನನ್ನನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದೀರಿ. ಅ. 2ರಂದು ಸೂಕ್ಷ್ಮ ವಿಷಯದ ತನಿಖೆಯ ಬಗ್ಗೆ ವೈರ್‌ಲೆಸ್‌ನಲ್ಲಿ ಮಾಹಿತಿ ಕೇಳಿದ್ದೀರಿ. ಆದರೆ, ಸೂಕ್ಷ್ಮ ವಿಷಯಗಳ ಚರ್ಚೆ ವೈರ್‌ಲೆಸ್ ಅಥವಾ ಪತ್ರದ ಮೂಲಕ ಸಾಧ್ಯವಿಲ್ಲ. ಭೇಟಿಗೆ ಅನುಮತಿ ಕೋರಿದೆ. ಈಗಲಾದರೂ ನಿಮ್ಮ ಭೇಟಿಗೆ ಅನುಮತಿ ನೀಡಿ, ಮಾರ್ಗದರ್ಶನ ನೀಡ ಬೇಕು’ ಎಂದು ಡಿಸಿಪಿ ಕೃಷ್ಣಕಾಂತ್ ಅವರು, ಕಮಿಷನರ್ ಹಾಗೂ ಡಿಜಿಪಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಇನ್ನು ಕೃಷ್ಣಕಾಂತ್ ಬರೆದಿರುವ ಪತ್ರದ ಬಗ್ಗೆ ಪೊಲೀಸ್ ಕಮೀಷನರ್ ಆರ್ ದಿಲೀಪ್ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!