Sunday, 16th June 2024

ಏನಿದು ಮಾನ್ವಿ ಪುರಸಭೆ ಮಳಿಗೆ ವಿವಾದ..!!

ರೈತಪರ-ದಲಿತಪರ ಸಂಘಟನೆಯ ನಿಲುವುಗಳೇನು..??

ಆನಂದ ಸ್ವಾಮಿ ಹಿರೇಮಠ

ಮಾನ್ವಿ : ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸ್ಥಳೀಯ ಪುರಸಭೆ ಇಲಾಖೆಯ ಒಟ್ಟು ನಲ್ವತ್ತು ವಾಣಿಜ್ಯ ಮಳಿಗೆಗಳಿವೆ, ಅವುಗಳಲ್ಲಿ ಈಗಾಗಲೇ ನಲ್ವತ್ತು ಬಾಡಿಗೆದಾರರು ವ್ಯಾಪಾರ ಮಾಡುವುದಕ್ಕೆ ಸುಮಾರು ೮-೧೦ ವರ್ಷಗಳು ಕಳೆದಿದ್ದು ಬಾಡಿಗೆಯ ಕಾಲಾವಧಿಯೂ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಇಲಾಖೆಯಿಂದ ಕಳೆದ ಏಳೆಂಟು ತಿಂಗಳ ಹಿಂದೆಯೇ ಒಂದು ಮಳಿಗೆಗೆ 7500/- ರೂಪಾಯಿಯಂತೆ ಮರು ಟೆಂಡರ್ ಕರೆಯ ಲಾಗಿತ್ತು, ಈಗಾಗಲೇ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕನಿಷ್ಠ 27 ಜನರು ಈ ಟೆಂಡರಿನಲ್ಲಿ ಭಾಗವಹಿಸಿ ನಮ್ಮಯ ಮಳಿಗೆಯನ್ನು ತಾವೇ ಪಡೆಯುವಲ್ಲಿ ಯಶಸ್ವಿಯಾಗಿದ್ದು ಉಳಿದ 13 ಜನರು ಭಾಗವಹಿಸಿಲ್ಲ ಅಥಾವ ಭಾಗ ವಹಿಸಿದರು. ಈ ಹರಾಜು ಪ್ರಕ್ರಿಯೆಯಲ್ಲಿ ಕಟ್ಟಡ ಪಡೆಯಲು ಯಶಸ್ವಿಯಾಗದವರು ಈಗ ಬಾಡಿಗೆ ಕಟ್ಟಡ ಬಿಟ್ಟುಕೊಡಲು ಸಿದ್ದವಿಲ್ಲದಿರುವುದೇ ಈ ವಿವಾದಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಈ ಪುರಸಭೆ ಮಳಿಗೆ ಹರಾಜಿನಲ್ಲಿ ಭಾಗವಹಿಸಿ ಟೆಂಡರ್ ಪಡೆದ ಫಲಾನುಭವಿಗಳು ತಮ್ಮ ಮಳಿಗೆ ತಮಗೆ ನೀಡುವಂತೆ ದಲಿತಪರ ಸಂಘಟನೆಯ ನೇತೃತ್ವದಲ್ಲಿ ಹೋರಾಟವನ್ನು ಹಮ್ಮಿಕೊಂಡು ಪುರಸಭೆ ಅಧಿಕಾರಿಗಳಿಗೆ ಹಾಗೂ ರಾಯಚೂರು ಜಿಲ್ಲಾ ಸಹಾಯಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾ ದರೂ ಕೂಡ ಅವರಿಗೆ ದಕ್ಕದಿರುವುದಕ್ಕೆ ಕಳೆದ ನಾಲ್ಕು ತಿಂಗಳಿಂದ ಹೋರಾಟವನ್ನು ಮಾಡುತ್ತಿದ್ದಾರೆ…

ಆದರೆ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರು ಹೇಳುವಂತೆ ಪುರಸಭೆ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಹಲವಾರು ಜನರು ತಮ್ಮ ವೈಯಕ್ತಿಕ ಹಿತಶಕ್ತಿಗಾಗಿ 1500 ನೂರರಿಂದ 6000 ಸಾವಿರದವರೆಗೆ ಇರಬೇಕಾಗಿದ್ದ ವಾಣಿಜ್ಯ ಮಳಿಗೆ ಕಟ್ಟಡವನ್ನು 15 ಸಾವಿರದಿಂದ 37 ಸಾವಿರದವರೆಗೆ ಏರಿಕೆ ಮಾಡಿ ಬಡವರನ್ನು ಹತ್ತಿಕ್ಕುವ ಕೆಲಸ ಮಾಡುವುದಲ್ಲದೆ, ಸರ್ಕಾರದ ನಿಯಮದಂತೆ ಟೆಂಡರ್ ಆಗಿರುವ ತಿಂಗಳೊಳಗೆ ಬಾಕಿ ಮೊತ್ತವನ್ನು ಪಾವತಿಸಿಲ್ಲ ಹಾಗೂ ಈ ಟೆಂಡರ್ ಅವಧಿಯ ಸಮಯ ಪೂರ್ಣಗೊಂಡು ನಿಯಮ ಉಲ್ಲಂಘನೆ ಯಾಗಿರುವ ಕಾರಣದಿಂದ ಮರು ಟೆಂಡರ್ ಕರೆಯುವಂತೆ ಪುರಸಭೆಗೆ ಹಾಗೂ ಜಿಲ್ಲಾಡಳಿತಕ್ಕೆ ಹೋರಾಟದ ಮೂಲಕ ಮನವಿ ಮಾಡಿದ್ದಾರೆ.

ಈಗಾಗಲೇ ಸ್ಥಳಕ್ಕೆ ಜಿಲ್ಲಾ ಸಹಾಯಕ ಆಯುಕ್ತ ರಜನಿಕಾಂತ್ ಚೌವ್ಹಾನ್ ಅವರು ಆಗಮಿಸಿ ವಾಣಿಜ್ಯ ಮಳಿಗೆಯನ್ನು ತೆರವು ಮಾಡುವಂತೆ ತಿಳಿಸಿದರೂ ಕೂಡ ವ್ಯಾಪಾರಸ್ಥರು ಹಾಗೂ ರೈತ ಸಂಘಟನೆಯ ಮುಖಂಡರ ತೀವ್ರ ವಿರೋಧಿಸಿದ ಹಿನ್ನೆಲೆಯಲ್ಲಿ ನಾಲ್ಕು ದಿನದ ಕಾಲಾವಕಾಶ ವನ್ನು ನೀಡಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ತೆರಳಿದ್ದಾರೆ.

*

ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಹರಾಜು ಪ್ರಕ್ರಿಯೆಯಲ್ಲಿ ಬಾಡಿಗೆಯನ್ನು ಹೆಚ್ವಿಸಲಾಗಿದೆ, ಹಾಗೂ ಹರಾಜು ಪ್ರಕ್ರಿಯೆಯಾಗಿ ಏಳೆಂಟು ತಿಂಗಳು ಕಳೆದು ಕಾನೂನು ನಿಯಮಗಳು ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಠೇವಣಿ ಹಣವನ್ನು ಜಪ್ತಿ ಮಾಡಿ ಮರು ಟೆಂಡರ್ ಕರೆಯಬೇಕು ಇಲ್ಲವಾದಲ್ಲಿ ರೈತ ಸಂಘದಿಂದ ಉಗ್ರ ಸ್ವರೂಪದ ಹೋರಾಟ ವನ್ನು ರೂಪಿಸಲಾಗುತ್ತದೆ.
ಶ್ರೀ ಅಶೋಕ ನಿಲೋಗಲ್
ಜಿಲ್ಲಾಧ್ಯಕ್ಷರು ಕೆ. ಆರ್.ಎಸ್ ರೈತ ಸಂಘ

ಪುರಸಭೆಯಿಂದ ವಾಣಿಜ್ಯ ಮಳಿಗೆಗಾಗಿ ಟೆಂಡರ್ ಕರೆದಾಗ ಹರಾಜಿನಲ್ಲಿ ಭಾಗವಹಿಸಿ ಮಳಿಗೆಯಲ್ಲಿ ಪಡೆದವರಿಗೆ ಬಿಟ್ಟುಕೊಡಬೇಕು ಇಲ್ಲವಾದರೆ ಠೇವಣಿ ಹಣವನ್ನು ವಾಪಸು ನೀರು ಮರು ಟೆಂಡರ್ ಕರೆಯಬೇಕು, ಇದರಲ್ಲಿ ಪ್ರಭಾವಿ ಕಾಂಗ್ರೆಸ್ ಸಚಿವರ ಹಾಗೂ ಕೈ ನಾಯಕರ ಹಸ್ತಕ್ಷೇಪವಿದ್ದು ಮುಂದುವರೆದರೆ ನಮ್ಮ ದಲಿತಪರ ಸಂಘಟನೆಯಿಂದ ಸ್ವಾಭಿಮಾನದ ರಥಯಾತ್ರೆಯೊಂದಿಗೆ ಬೆಂಗಳೂರು ಮುಖ್ಯಮಂತ್ರಿಯ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ.
ಶ್ರೀ ಪ್ರಭುರಾಜ್ ಕೊಡ್ಲಿ
ದಲಿತಪರ ಸಂಘಟನೆಯ ಸಂಚಾಲಕರು

Leave a Reply

Your email address will not be published. Required fields are marked *

error: Content is protected !!