Saturday, 27th July 2024

ಭೀಕರ ರಸ್ತೆ ಅಪಘಾತ : 15 ಅಡಿ ಹಾರಿಬಿದ್ದ ವಿದ್ಯಾರ್ಥಿನಿಯರು

ರಾಯಚೂರು : ಕಾರು ಬೈಕ್ ಡಿಕ್ಕಿಯಾದ ಹಿನ್ನಲೆ ಬೈಕ್ ಸವಾರ ಮತ್ತು ಇಬ್ಬರು ಕಾಲೇಜು ವಿದ್ಯಾರ್ಥಿರು ಸಿನಿಮಾ ದೃಶ್ಯ ಮೀರಿಸುತ್ತೆ ಈ ಆಕ್ಸಿಡೆಂಟ್​ನಲ್ಲಿ 15 ಅಡಿ ಹಾರಿಬಿದ್ದ ವಿದ್ಯಾರ್ಥಿನಿಯರು ಬೈಕ್​ ಕಾರ್​​​​ ಅಪಘಾತದ ಭಯಾನಕ ದೃಶ್ಯ ಗಂಭೀರ ಗಾಯಗಳಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ಜು.18 ರಂದು ನಗರದ ಸ್ಟೇಷನ್ ರಸ್ತೆಯ ರಾಮಮಂದಿರ ಪಕ್ಕದ ರಾಘವೇಂದ್ರ ಪೆಟ್ರೋಲ್ ಬಂಕ್ ಹತ್ತಿರ ರೈಲು ನಿಲ್ದಾಣದ ಕಡೆಯಿಂದ ವೇಗವಾಗಿ ಬಂದ ಕಾರಿಗೆ ಬಸ್ ನಿಲ್ದಾಣದ ಕಡೆಯಿಂದ ಬಂದ ಬೈಕ್ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ಡಿಕ್ಕಿಯ ರಭಸಕ್ಕೆ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ.

ವಿದ್ಯಾರ್ಥಿನೀಯರು ಡಿಕ್ಕಿಯ ಹೊಡೆತಕ್ಕೆ ಗಾಳಿಯಲ್ಲಿ 15 ಅಡಿ ಹಾರಿದ್ದಾರೆ.

ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದ್ದು, ಬೈಕ್ ಚಾಲಕನಿಗೆ ಕೈ ಮತ್ತು ಕಾಲು ಮುರಿದಿದ್ದು, ಅಪಘಾತದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಕೈ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಗೆ ಹಲ್ಲು ಮುರಿದಿದೆ ಎಂದು ತಿಳಿದು ಬಂದಿದ್ದು ಪ್ರಕರಣವನ್ನು ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿದೆ.

 

Leave a Reply

Your email address will not be published. Required fields are marked *

error: Content is protected !!