Sunday, 8th September 2024

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಗಡೀಪಾರು

ಸೈಪಾನ್: ಅಮರಿಕದ ಬೇಹುಗಾರಿಕೆ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಆರೋಪಿ ಎಂದು ಸಾಬೀತಾಗಿದ್ದು, ಅವರನ್ನು ಗಡೀಪಾರು ಮಾಡಬೇಕೆಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಸತತ ಮೂರು ಗಂಟೆಗಳ ವಿಚಾರಣೆ ಬಳಿಕ, ಅಮೆರಿಕದ ರಕ್ಷಣೆ ಸಚಿವಾಲಯಕ್ಕೆ ಸಂಬಂಧಿಸಿದ ದಾಖಲೆಯನ್ನು ಜೂಲಿಯನ್ ಅಸಾಂಜೆ ಸೋರಿಕೆ ಮಾಡಿದ್ದಾರೆಂದ, ಇಂದು ಒಂದು ಗಂಭೀರ ಅಪರಾಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ವೇಳೆ, ಅಸ್ಸಾಂಜೆ, ಸಂವಿಧಾನದ ಮೊದಲ ತಿದ್ದುಪಡಿಯಂತೆ, ಇದೊಂದು ವಾಕ್ ಸ್ವಾತಂತ್ರ‍್ಯವಾಗಿದ್ದು, ಈ ಮೂಲಕ ತಾನು ಎಸಗಿದ್ದು ಅಪರಾಧವಲ್ಲ ಎಂದು ವಾದ ಮಂಡಿಸಿದರು.

ಓರ್ವ ಪತ್ರಕರ್ತನಾಗಿ, ನನ್ನದೇ ಆದ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದು, ಪ್ರಕಟಣೆಗೆ ಬಳಸಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆದಾಗ್ಯೂ, ನಾನು ಅಮರಿಕದ ಬೇಹುಗಾರಿಕೆ ಕಾನೂನು ಉಲ್ಲಂಘಿಸಿಸುವ ಮೂಲಕ ಗಂಭೀರ ಅಪರಾಧ ಎಸಗಿದ್ದೇನೆಂದು ತಪ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಇದೇ ವೇಳೆ ಹೇಳಿದರು.

ಅಸ್ಸಾಂಜೆ ಅವರ ತಪ್ಪೊಪ್ಪಿಗೆಗೆ ನ್ಯಾಯಾಲಯವು ಸಮ್ಮತಿಸಿದ್ದು, ಈಗಾಗಲೇ ಹಲವು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದು, ಬಿಡುಗಡೆ ಮಾಡುವಂತೆ ಆದೇಶಿಸಿತು.

ಈ ಆದೇಶದ ಬೆನ್ನಲ್ಲೇ, ಜೂಲಿಯನ್ ಅಸಾಂಜೆ, ಖಾಸಗಿ ಜೆಟ್ ನಲ್ಲಿ ಅಮೆರಿಕದ ಆಸ್ಟ್ರೇಲಿಯಾ ರಾಯಭಾರಿ ಜತೆಗೆ ಸೈಪಾನ್‌ ಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಅನಂತರ ಕ್ಯಾನ್ ಬೆರಾಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.

 

 

Leave a Reply

Your email address will not be published. Required fields are marked *

error: Content is protected !!