Wednesday, 19th June 2024

ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 2 ಆರಂಭ

ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಪ್ರೇಕ್ಷಕರನ್ನು ರಂಜಿಸಿತ್ತು. ಮೊದಲ ಸೀಸನ್ ಮೆಗಾ ಹಿಟ್ ಬಳಿಕ ಸೀಸನ್ ೨ ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಇಡೀ ತಂಡ ಸಜ್ಜಾಗಿದೆ.

ಈಗಾಗಲೇ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ ೨ ಗ್ರ್ಯಾಂಡ್ ಒಪನಿಂಗ್ ಆಗಿದೆ. ಮೊದಲ ಸೀಸನ್ ನಲ್ಲಿ ಸೆಲೆಬ್ರೆಟಿ ತಾಯಿ ಮಕ್ಕಳಿಂದ ಕೂಡಿದ್ದ ಈ ಶೋ ಈ ಬಾರಿ ಸೆಲೆಬ್ರೆಟಿಗಳ ಜತೆ ಸಾಮಾನ್ಯ ಜನರನ್ನು ಒಳಗೊಂಡಿದೆ. ಸೀಸನ್ ೨ ಗ್ರ್ಯಾಂಡ್ ಒಪನಿಂಗ್ ಆಗಿದ್ದು, ಎರಡು ಎಪಿಸೋಡ್ ಗಳು ಪ್ರಸಾರವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸ್ಪೆಷಲ್ ಎಪಿಸೋಡ್ ಚಿತ್ರೀ ಕರಣದಲ್ಲಿ ತಂಡ ಬ್ಯುಸಿಯಾ ಗಿದ್ದು, ಹಬ್ಬದ ಸಡಗರ ಹೆಚ್ಚಿಸಲು ಅಮ್ಮ ಮಕ್ಕಳ ಹನ್ನೆರಡು ಹೊಸ ಜೋಡಿಗಳು ರೆಡಿಯಾಗಿದ್ದಾರೆ.

ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಇವರ ಜತೆಗೆ ಮೊದಲ ಸೀಸನ್ ವಿನ್ನರ್ ವಂಶಿಕಾ ನಿರೂಪಕಿಯಾಗಿ ರಂಜಿಸಲಿದ್ದಾರೆ. ಹಿಂದಿನಂತೆ ಈ ಸೀಸನ್ ನಲ್ಲಿಯೂ ನಟಿ ತಾರಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ತೀರ್ಪುಗಾರ ರಾಗಿದ್ದಾರೆ

ನನ್ನಮ್ಮ ಸೂಪರ್ ಸ್ಟಾರ್ ಮೊದಲ ಸೀಸನ್ ಬಹಳ ದೊಡ್ಡ ಹೆಸರು ಮಾಡಿತ್ತು. ಕಾರ್ಯ ಕ್ರಮದಲ್ಲಿ ಭಾಗವಹಿಸಿದವರು ಕೂಡ ಜನಪ್ರಿಯತೆ ಗಳಿಸಿಕೊಂಡಿದ್ದರು. ಹೊಸತನದಿಂದ ಕೂಡಿದ ಶೋ ಇದಾಗಿತ್ತು. ಮೊದಲ ಸೀಸನ್ ಯಶಸ್ಸೇ ಸೀಸನ್ ೨ ಆರಂಭ ಮಾಡಲು ಕಾರಣ. ಈ ಬಾರಿ ಇಡೀ ಕರ್ನಾಟಕವನ್ನು ಸುತ್ತಿ ಅಲ್ಲಿರುವ ಸ್ಥಳೀಯ ಪ್ರತಿಭೆ ಗಳನ್ನು ಗುರುತಿಸಿ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿದೆ.

– ತಾರಾ ಅನುರಾಧಾ ನಟಿ
ನಾನು ಪ್ರೊಡಕ್ಷನ್ ಮಾಡಿರಬಹುದು ಆದರೆ

ಒಂದು ತಂಡವಾಗಿ ನಾವು ಗೆದ್ದಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಶೋ ಇದೆಲ್ಲದರ ಗೆಲುವಿಗೆ ಡೈರೆಕ್ಷನ್ ತಂಡ ಕಾರಣ. ಸ್ಪರ್ಧಿಗಳು ಕೂಡ ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
– ಸೃಜನ್ ಲೋಕೇಶ್

error: Content is protected !!