Tuesday, 23rd April 2024

ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟೀಸರ್

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ‘ರಾಬರ್ಟ್’ ಮಾರ್ಚ್ 11 ರಂದು ಅದ್ಧೂರಿ ಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಹಾಡುಗಳು ಅಭಿಮಾನಿಗಳ ಮನದಲ್ಲಿ ಕಿಚ್ಚಾಯಿಸಿವೆ.

ಈ ನಡುವೆಯೆ ‘ರಾಬರ್ಟ್’ ತಂಡ ಸಿನಿಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಅದು ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಸುಳಿವು ನೀಡಿದೆ. ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ
ಸಂಭ್ರಮ ಹಾಗಾಗಿ ಅಂದೇ ‘ರಾಬರ್ಟ್’ ಚಿತ್ರದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ದರ್ಶನ್ ಹೊಸ ಗೆಟಪ್ ನೋಡಿ ಫಿದಾ ಆಗಿರುವ ಅಭಿಮಾನಿಗಳು ಈಗ ಟೀಸರ್ ಕಣ್ತಂಬಿಕೊಳ್ಳಲು ಕಾತರ ರಾಗಿದ್ದಾರೆ. ಹಾಗಾಗಿ ‘ರಾಬರ್ಟ್’ ಟೀಸರ್ ಮೂಲಕವೂ ಧೂಳ್ ಎಬ್ಬಿಸಲಿದೆ. ‘ರಾಬರ್ಟ್’ ಅವತಾರ ತಾಳಿರುವ ದರ್ಶನ್ ಜತೆಯಾಗಿ ಆಶಾಭಟ್ ನಟಿಸಿದ್ದಾರೆ. ವಿನೋದ್ ಪ್ರಭಾಕರ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡೈನಾಮಿಕ್ ಸ್ಟಾರ್ ದೇವರಾಜ್, ತೆಲುಗಿನ ಜಗಪತಿ ಬಾಬು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ‘ರಾಬರ್ಟ್’ ಮಾರ್ಚ್ 16 ರಂದು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *

error: Content is protected !!