Friday, 21st June 2024

ನೀ ಏಕೆ ಬಂದೆ ಎನ್ನ ಮನದೊಳಗೆ !

ಅಪರ್ಣಾ ಎ.ಎಸ್.

ಸದ್ದಿಲ್ಲದೆ ಬಂದೆ ನೀ ಮಧುರ ಭಾವನೆಯ ಹಿಡಿದು ಇಷ್ಟು ದಿನ ನಾ ಕಾದಿದ್ದಕ್ಕೂ ಬದುಕು ಸಾರ್ಥಕ!

ಹೇ ಮನದ ಇನಿಯಾ – ಮತ್ತೆ ಶುರು ಆಯ್ತು ಇವಳ ವರಾತ ಅಂತ ಅಂದುಕೊಳ್ಳದೇ ಸುಮ್ಮನೆ ಓದು ಅಷ್ಟೇ..

‘ನಾನೇನು ಕವಿ ಕಾಳಿದಾಸನಂತೆ ಕಾವ್ಯ ಬರೆಯುವುದೂ ಇಲ್ಲ.. ಅನಗತ್ಯವಾಗಿ ನಿನ್ನ ತಲೆ ಹಾಳು ಮಾಡುವುದು ಇಲ್ಲ.’ ಹೀಗೆ ತಾನೇ ಪ್ರತಿ ಬಾರಿಯೂ ನಿನ್ನ ಪತ್ರಗಳ ಪ್ರಾರಂಭ. ಈ ಬಾರಿ ಮೊದಲ ಬಾರಿಗೆ ನನ್ನ ಪತ್ರವನ್ನೂ ಓದು. ನೀನೇ ಹೇಳುತ್ತಿದ್ದಿಯ. ಇನ್ನೇನು ಪತಿ ಪತ್ನಿಯಾಗುವುದರಲ್ಲಿದ್ದೇವೆ, ಒಂದೂ ಪತ್ರ ನಿನ್ನಿಂದ ಬಂದಿಲ್ಲ ಅಂತ. ಹೀಗಾಗಿಯೇ ಅನಂತಾನಂತ ಪ್ರೀತಿಯನ್ನು ಮೊಗೆದು ಇಲ್ಲಿ ಸುರಿದಿರುವೆ.

ಅಂದು ಅದ್ಯಾವ ಘಳಿಗೆಗೆ ನಾನು ಮನೆ ಬಿಟ್ಟಿzನೋ ಅರಿವೇ ಇರಲಿಲ್ಲ. ಕಾಲೇಜು ತಲುಪಿದ್ದಷ್ಟೇ ನನ್ನ ಅರಿವಿಗೆ. ಏನೋ ಮನಸ್ಸು ಕೆಡುಕನ್ನೇ ಪ್ರತಿಧ್ವನಿಸುತಿತ್ತು. ಆದರೂ ಏನೂ ಇಲ್ಲ ಏನೂ ಆಗುವುದಿಲ್ಲ ಅನ್ನುವ ಭಂಡ ಧೈರ್ಯದೊಂದಿಗೆ ಕಾಲೇಜಿಗೆ ಬಂದು ಅಂಜಿಕೆಯ ಮಧ್ಯೆಯೇ ಪಾಠಗಳಲ್ಲಿ ತೊಡಗಿಸಿಕೊಂಡಿz. ಮಧ್ಯಾಹ್ನದ ಊಟ ಮಾಡಲು ಕಾಲೇಜಿನ ಹೊರಗಿನ ಕ್ಯಾಂಟೀನ್‌ಗೆ ಬಂದು ಇನ್ನೇನು ಒಂದು ತುತ್ತು ತಿನ್ನಬೇಕು ಆಗ ಅದ್ಯಾಕೋ ತಲೆ ತಿರುಗಿದಂತಾಗಿ ಬಿದ್ದದ್ದಷ್ಟೇ.

ಅರಿವು ಕಣ್ಣು ಬಿಟ್ಟಾಗ ಮಸುಕು ಮಸುಕು ಕಣ್ಣ ಮುಂದೆ ಬಿಟ್ಟಗಣ್ಣಿನೊಂದಿಗೆ ನೀನು ನಿಂತಿದ್ದೆ. ಅದು ಹನಿಗಣ್ಣು ಬೇರೆ. ಅರೇ..ಯಾರಿವರು? ನಾನು ಯಾಕಿಲ್ಲಿರುವೆ ಎಂದು ಗೊಂದಲಕ್ಕೆ ಬಿದ್ದಾಗ ತಿಳಿಯಿತು – ಆಸ್ಪತ್ರೆಯಲ್ಲಿರುವೆ ಎಂದು. ಅಂದು ಆಸ್ಪತ್ರೆ ಯಲ್ಲ ಕಂಡಿದ್ದು ನಿನ್ನ ಮುಖ. ಅಂದಿನಿಂದ ಇಂದಿನವರೆಗೂ ನನ್ನ ಸಂಪೂರ್ಣ ಆರೈಕೆಯತ್ತ ಗಮನಹರಿಸಿದ್ದೆ.

ಮೊದಲೆಲ್ಲಾ ಕಿರಿ ಕಿರಿ ಅಂತನಿಸುತ್ತಿದ್ದದ್ದು ಆ ಬಳಿಕ ಅದ್ಯಾಕೋ ಹಿತವಾಗಿತ್ತು. ಅಲ್ಲಾ ಗೆಳೆಯಾ ಈ ರೀತಿ ಕಾರಣವೇ ತಿಳಿಯದೇ ನನ್ನ ಮನಸಿನ ಪುಟಕ್ಕೆ ಕೇವಲ ಒಂದು ಕ್ಷಣದಲ್ಲಿ ಕಾಲಿರಿಸುವುದಕ್ಕೆ ನಿನಗೆ ಅನುಮತಿ ನೀಡಿದ್ದಾದರೂ ಯಾರು?

ಕ್ಯಾಂಟೀನ್ ಊಟವೇ ಪ್ರೀತಿ!

ಹೀಗೆ ಸಾವಿರ ಬಾರಿ ಕೇಳಬೇಕೆನಿಸಿದರೂ ಕೇಳಲಾರದಂತಹ ಮಧುರ ಅನುಭೂತಿ ನಿನ್ನ ಮುದ್ದು ಮೊಗ ಕಂಡಾಗಲೆಲ್ಲಾ.

ಇಷ್ಟೆಲ್ಲಾ ಆದ ಬಳಿಕ ಮತ್ತೆಂದೂ ನಾನು ಕ್ಯಾಂಟೀನ್ ಬಿಟ್ಟು ಹೊಟೇಲ್‌ನ ಊಟದ ಕಡೆ ಗಮನಹರಿಸಿದವಳೇ ಅಲ್ಲ. ನೀನ್ಯಾ ವತ್ತು ನನ್ಗೆ ಉಳಿದ ಪ್ರೇಮಿಗಳ ಹಾಗೆ ಆಕಾಶದ ನಕ್ಷತ್ರ, ಬೀದಿ ಬದಿಯ ಪಾನಿಪುರಿ 5 ಸ್ಟಾರ್ ಹೋಟೆಲ್‌ನ ತಿಂಡಿ ತೀರ್ಥದ ಅಭ್ಯಾಸ ಮಾಡಿಸಿರೋನೆ ಅಲ್ಲ. ಅಚ್ಚ ಅಸಲು ಅಮ್ಮ ಮಾಡಿದ ತಿಂಡಿ ತಿನಿಸುಗಳನ್ನೇ ದೊಡ್ಡ ಬಟ್ಟಲಿನಲ್ಲಿ ಸದ್ದಿಲ್ಲದೆ ಬಂದೆ ನೀ ಮಧುರ ಭಾವನೆಯ ಹಿಡಿದು ಇಷ್ಟು ದಿನ ನಾ ಕಾದಿದ್ದಕ್ಕೂ ಬದುಕು ಸಾರ್ಥಕ!

ತಂದು ತಿನ್ನು ತಿನ್ನು ಅಂತ ಕಾಡಿದವನು. ಅಷ್ಟೇ ಅಲ್ಲದೆ ಮನೆಯಲ್ಲಿ ಏನೇ ಮಾಡ್ಲಿ, ಏನೇ ತರಲಿ ಅದರಂದು ಪಾಲು ಮಾತ್ರ ನನ್ನದೇ ಆಗಿರ್ತಿತ್ತು. ಇಷ್ಟು ಮಾತ್ರ ಸಾಕಾಗಲ್ವಾ ನಂಗೆ ನೀನ್ ನನ್ನ ಇಷ್ಟ ಪಡ್ತಿದ್ನಾ ಅನ್ನೋಕೆ. ಹಾಗಂತ ಎಲ್ಲಾ ಫ್ರೆಂಡ್ಸು ಹಿಂಗೆ ಮಾಡ್ತಾರೆ ಅಂತ ವಾದ ಮಾಡೋಕೆ ಬರ್ಬೇಡ. ಯಾರು ಕೂಡಾ ಅಪರಾತ್ರಿಲಿ ಉಪವಾಸ ಇದ್ದೀನಿ ಅಂತ ಗೊತ್ತಾಗಿ, ಹೊತ್ತಲ್ಲದ ಹೊತ್ತಲ್ಲಿ ಹಿತ್ತಲಿನ ಬೇಲಿ ಹಾರಿ ಆ ತರಚು ಗಾಯಾನು ಲೆಕ್ಕ ಇಟ್ಕೊಳ್ಳದೇ ನಂಗೆ ತಿನ್ನೋಕೆ ಅಂತ ಬುತ್ತಿ ತರ್ತಿರಲಿಲ್ಲ.

ಮತ್ತೇ ಅದು ಎರು ಮಾಡ್ತಾರೆ ಅಂತ ವಾಗ್ವಾದ ಮಾಡೋದು ಬೇಡ. ನಂಗೆ ನೀನೇನು ತೀರಾ ಅಪರಿಚಿತ ಅಲ್ಲ. ನೀನೆ ಬೇಡ ಎಂದರೂ ಕೇಳದೇ ಮನೆಯಲ್ಲಿ ಅಮ್ಮ ಮಾಡಿದ್ರು, ಅಕ್ಕನ ಮನೆಯಲ್ಲಿ ಇವತ್ತು ವಿಶೇಷ, ಭಾವನಿಗೆ ಸರ್ಕಾರಿ ಕೆಲಸ ಆಯ್ತು ಇವತ್ತು ನನ್ನ ಅಣ್ಣನ ಮಗನ ನಾಮಕರಣ, ಹುಟ್ಟಿದ ದಿನ ಸಾವಿರ ಕಾರಣದೊಂದಿಗೆ ಏನೋ ಒಂದು ಹಬ್ಬದೂಟ ತಂದು ಕೊಟ್ಟು ಸಾಕುತ್ತಿದ್ದೆ. ಯಾವತ್ತೂ ನೀನು ಎಲ್ಲೆ ಮೀರಿ ವರ್ತಿಸಿದ್ದೇ ಕಂಡಿಲ್ಲ. ಬದಲಾಗಿ ಚಿನ್ನಕ್ಕಿಂತ ಜೋಪಾನ ಮಾಡುತ್ತಿದ್ದೆ.

ಅಪರಂಜಿಯಂತಹ ನಿನ್ನ ಪ್ರೀತಿಯನ್ನು ಯಾವ್ಯಾವುದಕ್ಕೋ ಹೋಲಿಸಿ ಗುಲಗಂಜಿಯಂತೆ ಮಾಡುವುದಿಲ್ಲ. ಒಂದು ದಿನವೂ
ರೋಡ್ ಸೈಡ್ ಪಾನಿಪುರಿ, ಕಾಫಿ ಡೆ ಅಂತ ಅನಗತ್ಯ ಮರ ಸುತ್ತಿದ್ದೂ ಇಲ್ಲ. ಆದರೆ ಒಂದೇ ಒಂದು ಕಣ್ಣ ನೋಡದಲ್ಲಿ ಸಾವಿರ ಮಾತು ಹೇಳುವ, ಒಂದೇ ಒಂದು ಸ್ಪರ್ಶದಲ್ಲಿ ಸಾವಿರ ಭಾವ ನೀಡುವ ನಿನ್ನ ಹೇಗೇಗೋ ಹೋಳಿಕೆ ಮಾಡಿ ಕೆಳಗಿಳಿಸುವಂತಹ ದರ್ದು ನನಗಿನ್ನೂ ಬಂದಿಲ್ಲ. ಇನ್ನು ಇಷ್ಟೆಲ್ಲಾ ಹೇಳುವ ಮುಂಚೆ ನಿನ್ನಲ್ಲಿ ಪ್ರೀತಿಯಾಗಿ ಇನ್ನೇನು ಹಂಚಿಕೊಳ್ಳಬೇಕು ಹಾಗೆ ನಂದು ಒಂದಿಷ್ಟು ಮಾತುಗಳು ಹೇಳಲಾಗದೆ ಬಾಕಿ ಉಳಿದಿವೆ.

ನನ್ನ ದಿಂಬಿನಡಿಯ ಡೈರಿಯ ಪುಟಗಳಲ್ಲಿ. ಪ್ರತಿ ದಿನ ಒಂದೊಂದು ಹೊಸತನ್ನು ಕಂಡು ಅದನ್ನೇ ಕಲ್ಪಿಸಿಕೊಂಡು ನಿನ್ನ ಬಗ್ಗೆ ಬರೆಯುವುದೇ ನನ್ನ ಚಾಳಿಯಾಗಿ ಹೋಗಿದೆ ಇತ್ತೀಚೆಗೆ. ಅದ್ಹೇಗೋ ಇಂದು ಹೇಳುವುದು ನಾಳೆ ಹೇಳುವುದು ಎಂದು ದಿನ ಮುಂದು ಮಾಡಿದ್ದಷ್ಟೇ ಭಾಗ್ಯ ನನ್ನ ಪಾಲಿಗೆ.

ಎರಡು ವರ್ಷದ ತಪನೆ
ಆದ್ರೆ ಇಂದು ಈ ತಪನೆಗೆ ಒಂದು ಇತ್ಯರ್ಥ ಮಾಡಲೇಬೇಕು. ಪ್ರತಿ ದಿನ ಒಂದೊಂದು ಹೊಸತನ್ನು ಕಂಡು ಅದನ್ನೇ ಕಲ್ಪಿಸಿ ಕೊಂಡು ನಿನ್ನ ಬಗ್ಗೆ ಬರೆಯುವುದೇ ನನ್ನ ಚಾಳಿಯಾಗಿ ಹೋಗಿದೆ ಇತ್ತೀಚೆಗೆ. ಅದ್ಹೇಗೋ ಇಂದು ಹೇಳುವುದು ನಾಳೆ ಹೇಳುವುದು ಎಂದು ದಿನ ಮುಂದು ಮಾಡಿದ್ದಷ್ಟೇ ಭಾಗ್ಯ ನನ್ನ ಪಾಲಿಗೆ. ಆದ್ರೆ ಇಂದು ಈ ಎರಡು ವರ್ಷಗಳ ಕಾಲದ ತಪನೆಗೆ ಒಂದು ಇತ್ಯರ್ಥ ಮಾಡಲೇಬೇಕು ಅಂತ ನಿರ್ಧರಿಸಿ. ಈ ಪ್ರೇಮದೋಲೆ ನಿನಗಾಗಿ ಬರಿಯುತ್ತಾ ಕೂತಿದ್ದೀನಿ ನೋಡು.

ಅಲ್ಲ ಹುಡುಗಾ ಕೇವಲ ಭವಿಷ್ಯದ ಹತ್ತು ಹಲವು ಕನಸು ಕಲ್ಪನೆಗಳ ಮುಳುಗಿದವಳಿಗೆ ಅದ್ಯಾವಾಗ ನೀ ನನ್ನ ಹಿಂದೆ ಸೈಕಲ್
ಹೊಡೀತಾ ಇದ್ಯಾ ಅಂತ ಗೊತ್ತಾಯ್ತು ಅಂತ ನಿಂಗೆ ಯೋಚನೆ ಆಗೋ ವೇಳೆ ನಿಮ್ಮನೆಯೋರು ನಮ್ಮನೆ ಮುಂದೆ ತಾಂಬೂಲ ತಟ್ಟೆ ಹಿಡ್ಕೊಂಡು ನಿಂತಿರ್ತಾರೆ. ಅಷ್ಟು ಮ್ಯಾಜಿಕ್ ನೀನಿಲ್ಲದಾಗಲೇ ನಾ ಮಾಡಿ ಬಂದಿರುವೆ. ಹೇಗೆ ನಿನ್ನ ಯೋಚನೆ ನಂಗೆ ಬಂತು ಅಂತಾನಾ ಆವತ್ತು ರೋಸ್ ಹಿಡ್ಕೊಂಡು ನಂಗೆ ಪ್ರಪೋಸ್ ಮಾಡೋಕೆ ಅಂತ ಆ ಆಂಜನೇಯ ಗುಡಿ ಹಿಂದೆ ಒಂದೇ ಸಮನೆ ಉರು ಹೊಡೀತಾ ನಿಂತಿದ್ದೇ ಅಲ್ವಾ ಆಗ್ಲೇ ಗೊತ್ತಾಯಿತು.

ಆಹ್! ಕಳ್ಳನ ಮನಸಲಿ ಆಗ್ಲೇ ನನ್ನ ಭಾವಚಿತ್ರ ಪ್ರಿಂಟ್ ಆಗಿದೆ ಅಂತ. ಆದ್ರೂ ಹುಡುಗ ನಾನು ಹೇಗೆ ನಿನ್ನ ಕೇಳಲಿ ಹೇಳಲಿ ಹೇಯ್ ಹುಡುಗಿ ನೀನೇನು ಮನಸಲ್ಲಿ ಅಂದುಕೊಂಡಿದ್ಯಾ ಅನ್ನೋದು ನಂಗೆ ಗೊತ್ತು. ಅದೇ ನನ್ನ ಮನಸಲ್ಲಿ ಇರೋ ಯೋಚ್ನೆ ಅಂತ. ಅದ್ಕೆ ಇಷ್ಟು ದಿನ ಕಾಯ್ತಾ ಇದ್ದೆ. ಈಗ ನೋಡು ನಿಮ್ಮಮ್ಮನೇ ನನ್ನ ಕಂಡು ಮಾತಾಡಿ ಇಷ್ಟೆ ಹೇಳೋವಾಗ ನಾ ಅಂದು ಕೊಂಡಿದ್ದು ಸತ್ಯ ಅಂತ ಅರಿವಾಯ್ತು. ಇನ್ನೆನೂ ಹೇಳೋದು ಬೇಕಾಗಿಲ್ಲ. ನಿಂಗೆ ನಾನು ಇಷ್ಟ ಅನ್ನೋದು ನೀ ಅಷ್ಟು ಕಷ್ಟ ಪಟ್ಟು ತಡೆಹಿಡಿದ್ರು ನಂಗೆ ಗೊತ್ತಾಗಿ ಹೋಗಿದೆ. ನಿನ್ನೆದುರು ಬಂದು ಇಷ್ಟೆಲ್ಲ ಮಾತಾಡೋಕೆ ಆ ನಿನ್ನ ತುಂಟ ಕಣ್ಣು ಬಿಡೋ ದಿಲ್ಲ – ಅದ್ಕೆ ಈ ಪ್ರೇಮ ಪತ್ರ.

error: Content is protected !!