Wednesday, 19th June 2024

ಇಂದು ಚೆನ್ನೈ ಗೆದ್ದರೆ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ

ಹಮದಾಬಾದ್: ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡದಲ್ಲಿ ಅನುಭವಿ ಬೌಲರ್‌ಗಳ ಕೊರತೆ ಇದೆ. ಮುಸ್ತಫಿಜುರ್ ರೆಹಮಾನ್, ದೀಪಕ್ ಚಾಹರ್ ಮತ್ತು ಮಥೀಷ ಪಥಿರಾಣ ಅವರು ಲಭ್ಯರಿಲ್ಲ. ತುಷಾರ್ ದೇಶಪಾಂಡೆ ಹಾಗೂ ರಿಚರ್ಡ್ ಗ್ಲೀಸನ್ ಅವರ ಮೇಲೆ ನಿರೀಕ್ಷೆ ಇದೆ.

ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಜಡೇಜ ಆಲ್‌ರೌಂಡ್ ಆಟವೇ ಜಯಕ್ಕೆ ಕಾರಣವಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿಯೂ ಋತುರಾಜ್, ಡ್ಯಾರಿಲ್ ಮಿಚೆಲ್, ಶಿವಂ ದುಬೆ ಹಾಗೂ ಜಡೇಜ ಅವರನ್ನೇ ತಂಡವು ನೆಚ್ಚಿಕೊಳ್ಳಬೇಕಾಗಿದೆ. ಮೋಯಿನ್ ಅಲಿ ಕೂಡ ರನ್‌ ಗಳಿಸಿದರೆ ತಂಡದ ಬಲ ಹೆಚ್ಚಲಿದೆ. ಧರ್ಮಶಾಲಾದಲ್ಲಿ ಪಂಜಾಬ್ ಎದುರು 167 ರನ್‌ಗಳ ಸಾಧಾರಣ ಗುರಿಯೊಡ್ಡಿಯೂ ಚೆನ್ನೈ ಗೆದ್ದಿತ್ತು.

ಟೂರ್ನಿಯ ಮೊದಲ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿಯೂ ಚೆನ್ನೈ ಜಯಿಸಿತ್ತು.

Leave a Reply

Your email address will not be published. Required fields are marked *

error: Content is protected !!