Saturday, 27th July 2024

ನ್ಯೂಜಿಲೆಂಡ್‌ಗೆ ಟಿ 20 ಸರಣಿ ಕೈವಶ

ಹ್ಯಾಮಿಲ್ಟನ್: ಸಿಡೊನ್ ಪಾರ್ಕ್‌ನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ದದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್‌ ಒಂಬತ್ತು ವಿಕೆಟ್‌ಗಳ ಜಯ ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೈದರ್ ಅಲಿ 8ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಫಿಕ್ ಶೂನ್ಯಕ್ಕೆ ಔಟಾದರು. ಮೊಹಮ್ಮದ್ ರಿಜ್ವಾನ್ 22ರನ್ ಗಳಿಸಿದ್ದು, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಔಟಾದರು.

ಮೊಹಮ್ಮದ್ ಹಫೀಸ್ 99 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಒಟ್ಟಾರೆ ಪಾಕಿಸ್ತಾನ ತಂಡ 6 ವಿಕೆಟ್ ನಷ್ಟಕ್ಕೆ 163ರನ್ ಗಳ ಮೊತ್ತ ದಾಖಲಿ ಸಿತು.

ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದಲ್ಲಿ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 21ರನ್ ಗಳಿಸಿದ್ದು, ಫಹೀಮ್ ಅಶ್ರಫ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಟಿಮ್ ಸೈಫರ್ಟ್ 63 ಎಸೆತಗಳಲ್ಲಿ (84) ಹಾಗೂ ನಾಯಕ ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ (57) ಇವರ ಭರ್ಜರಿ ಜೊತೆಯಾಟದಿಂದ ನ್ಯೂಜಿಲ್ಯಾಂಡ್ ತಂಡ ಕೇವಲ 1 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಈ ಮೂಲಕ ಪಾಕಿಸ್ತಾನದ ವಿರುದ್ದ ಮೂರು ಟಿ ಟ್ವೆಂಟಿ ಸರಣಿಯಲ್ಲಿ 2-0 ಮುನ್ನಡೆಯಲ್ಲಿದ್ದು ಸರಣಿ ಕೈವಶಮಾಡಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!