Saturday, 27th July 2024

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಪ್ರೋಟೋಕಾಲ್

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಪಿಚ್ ಕ್ಯುರೇಟರ್ ಗಳಿಗೆ ಮಹತ್ವದ ಸೂಚನೆ ನೀಡಿದೆ.

ಈ ಬಾರಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಬ್ಯಾಟ್ಸ್ ಮನ್ ಗಳ ಅಬ್ಬರಕ್ಕೆ ಕಡಿವಾಣ ಬೀಳಬಹದು. ಬೌಲರ್ ಗಳ ಆರ್ಭಟ ಜೋರಾಗಿ ಕೇಳಲಿದ್ದು, ಈ ಮಹತ್ವದ ಟೂರ್ನಿಗಾಗಿ ಐಸಿಸಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಈ ಪ್ರೋಟೋ ಕಾಲ್ ನಲ್ಲಿ ಪಿಚ್ ಕ್ಯುರೇಟರ್ ಗಳಿಗೆ ಮಹತ್ವದ ಸೂಚನೆ ನೀಡಿದೆ.

ವಿಶ್ವಕಪ್ 2023ರಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಟಾಸ್ ಮತ್ತು ಇಬ್ಬನಿಯ ಪ್ರಭಾವವನ್ನು ಕಡಿಮೆ ಮಾಡಲು ಪಿಚ್ ಕ್ಯುರೇಟರುಗಳಿಗೆ ‘ಪ್ರೊಟೊಕಾಲ್’ ಬಿಡುಗಡೆ ಮಾಡಿದೆ. ಅದರಂತೆ ಟೂರ್ನಿ ನಡೆಯುವ ಕ್ರೀಡಾಂಗಣಗಳ ಪಿಚ್ ನಲ್ಲಿ ಹೆಚ್ಚು ಹುಲ್ಲು ಇಡುವಂತೆ ಸಲಹೆ ನೀಡಲಾಗಿದೆ.

ಭಾರತೀಯ ಪರಿಸ್ಥಿತಿಗಳು ಸಾಮಾನ್ಯವಾಗಿ ಸ್ಪಿನ್ಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆದರೆ ಸೀಮರುಗಳು ಆಟದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಪಿಚ್ಗಳಲ್ಲಿ ಸಾಧ್ಯವಾದಷ್ಟು ಹುಲ್ಲು ಬಿಡುವಂತೆ ಐಸಿಸಿ ಪಿಚ್ ಕ್ಯುರೇಟರ್ಗಳನ್ನು ಕೇಳಿದೆ. ಇದರರ್ಥ ಆಡುವ ಹನ್ನೊಂದು ಮಂದಿಯ ಆಟಗಾರರ ಬಳಗದಲ್ಲಿ ಹೆಚ್ಚಿನ ವೇಗಿಗಳನ್ನು ಹೊಂದಲು ತಂಡಗಳು ಉತ್ಸುಕರಾಗಿರುತ್ತವೆ.

Leave a Reply

Your email address will not be published. Required fields are marked *

error: Content is protected !!