Saturday, 27th July 2024

ಮೊದಲ ಟಿ20 ಪಂದ್ಯ ಗೆದ್ದ ಭಾರತ, ಮಿಂಚಿದ ಭುವಿ

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ 38 ರನ್‌ಗಳ ಭರ್ಜರಿ ಜಯ ಗಳಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1 -0 ಮುನ್ನಡೆ ಗಳಿಸಿದೆ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಶಿಖರ್ ಧವನ್ 46, ಸಂಜು ಸ್ಯಾಮ್ಸನ್ 27, ಸೂರ್ಯಕುಮಾರ್ 50 ಮತ್ತು ಇಶಾನ್ ಕಿಶನ್ ಅಜೇಯ 20 ರನ್ ಗಳಿಸಿದರು. ಗುರಿ ಬೆನ್ನತ್ತಿದ ಶ್ರೀಲಂಕಾ ಭಾರತ ತಂಡದ ಬಲಿಷ್ಠ ಬೌಲಿಂಗ್‌ ದಾಳಿಯ ಎದುರು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲ್‌ಔಟ್‌ ಆಯಿತು. 3.3 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟ ಭುವನೆಶ್ವರ್ ಕುಮಾರ್ 4 ವಿಕೆಟ್‌ ಪಡೆದು ಭಾರತಕ್ಕೆ ಭರ್ಜರಿ ಜಯ ತಂದರು. ಅವರಿಗೆ ಉತ್ತಮ ಸಾಥ್ ನೀಡಿದ ದೀಪಕ್ ಚಹರ್‌ (24ಕ್ಕೆ 2) ಎರಡು ವಿಕೆಟ್‌ ಪಡೆದರು.

ಪೃಥ್ವಿ ಶಾ ಮತ್ತು ವರುಣ್ ಚಕ್ರವರ್ತಿ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ಪರ 18. 3 ಓವರುಗಳಲ್ಲಿ 126 ರನ್ ಗಳಿಸಿತು. ಆವಿಷ್ಕಾ 26, ಚರಿತ್ ಅಸಲಂಕ 44, ದೆಸುನ್ ಶನಕ 16 ರನ್ ಗಳಿಸಿದರು. 

Leave a Reply

Your email address will not be published. Required fields are marked *

error: Content is protected !!