Sunday, 23rd June 2024

ನಲ್ಲಿ ನೀರಿನ ಜಗಳ ಮಾತಿನ ರಸಗವಳ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 79

ವಿಶ್ವವಾಣಿಯ ಭಾನುವಾರದ ವಿಶೇಷ ಸಂವಾದದಲ್ಲಿ ಫಟಾಫಟ್ ಮಾತನಾಡಿದ ಕೇಳುಗರು

ನಲ್ಲಿ ನೀರಿನ ಜಗಳದ ಬಗೆ ಮಾತನಾಡಿದ ಪ್ರಭಾವತಿಗೆ ಮೊದಲ ಬಹುಮಾನ

ಲಿಫ್ಟ್’ನಲ್ಲಿ ಇಬ್ಬರು ಹೋಗುತ್ತಿದ್ದಾಗ, ತಾಂತ್ರಿಕ ಸಮಸ್ಯೆಯಿಂದ ಅದು ಕೆಟ್ಟೋದರೆ ಅಲ್ಲಿ ಸುಂದರ ಹುಡುಗ ಕಂಡಾಗ; ಮಧ್ಯರಾತ್ರಿ ಗರ್ಲ್ ಫ್ರೆಂಡ್ ಮಿಸ್ಡ್ ಕಾಲ್
ಕೊಟ್ರೆ ಹೆಂಡತಿಗೆ ಅದ್ಯಾರ ಫೋನು ಅಂದಾಗ; ಗರ್ಲ್ ಫ್ರೆಂಡ್ ಜತೆ ಮೂವಿಗೆ ಹೋದರೆ, ಆಕೆಯ ತಂದೆ ಕಾಣಿಸಿ ಬಿಟ್ರೆ; ನನ್ನ ಗಂಡ ಗೊರಕೆ ಹೊಡೆದರೆ,
ನಾನು ನಾಳೆ ಹುಡುಗಿಯಾಗಿಬಿಟ್ಟರೆ ವಿಷಯಕ್ಕೆ ಕೇಳಿ ಬಂತು ಹಾಸ್ಯಮಯ ಉತ್ತರ…

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಭಾನುವಾರ ನಡೆದ ‘ವಿಷಯ ನಮ್ಮದು, ಮಾತು ನಿಮ್ಮದು: ಫಟಾಫಟ್ ಮಾತಾಡಿ’ ಎಂಬ ಕಾರ್ಯಕ್ರಮದಲ್ಲಿ ಮೂಡಿಬಂದ ಸಾಕಷ್ಟು ವಿಷಯಗಳು ಕೇಳುಗರಿಗೆ ಹಿತವಾಗಿದ್ದವು.  ಪ್ರತಿಯೊಂದು ವಿಷಯಗಳು ತನ್ನದೆ ಶೈಲಿಯಲ್ಲಿ ಉತ್ತರಿಸಿದ್ದು ಕೇಳುಗರ ಗಮನ ಸೆಳೆದಿತ್ತು. ನಾನು ಚೆಂದಾಗಿದಿನಿ. ಅವರು ಚೆಂದಾಗಿದ್ದಾರೆ.

ಅವನ ಎತ್ತರ, ಕಣ್ಣುಗಳು ಚೆಂದಾಗಿದೆ. ಪರ್ಫ್ಯೂಮ್ ಅವನ ಕಡೆ ತಿರುಗಿ ನೋಡುವಂತಿತ್ತು. ಅವನೆ ನನ್ನ ಕಡೆ ತಿರುಗಿ ನೋಡಲಿ ಅಂತಾ ಮೊಬೈಲ್ ಮುಖಾಂತರ ನೋಡುತ್ತೇನೆ. ಆಗ ಅವನು ನೋಡಿದಾಗ ಯಾವ ಪರ್ಫ್ಯೂಮ್ ಎಲ್ಲಿ ತಗೊಂಡ್ರಿ ಅಂತೀನಿ. ಆಗ ಅವನ ಕೆಲಸದ ಬಗ್ಗೆ ಕೇಳತೀನಿ. ನಿಮ್ಮ ಈ ದಿನ ಹೇಗಿತ್ತು ಅಂತಾ ಅವನ ಬಗ್ಗೆ ತಿಳಿದುಕೊಳ್ಳುವೆ. ಕೆಲಸದ ವಿಷಯದ ಹೊಂದಾಣಿಕೆ ಇದ್ದರೆ ಭೇಟಿ ಮಾಡುವೆ. ಮದುವೆ ಆಗಿ ದ್ದರೆ ಎಲ್ಲವೂ ವಿಷಯ ಮಾತನಾಡುತ್ತೇವೆ ಎಂದು ಲಿಫ್ಟ್ ನಲ್ಲಿ ಇಬ್ಬರು ಹೋಗುತ್ತಿದ್ದಾಗ, ತಾಂತ್ರಿಕ ಸಮಸ್ಯೆಯಿಂದ ಅದು ಕೆಟ್ಟು ಹೋದರೆ ಅಲ್ಲಿ ಸುಂದರ ಹುಡುಗ ಕಂಡಾಗ ಎಂಬ ವಿಷಯಕ್ಕೆ ಶೋಭಾಕೃಷ್ಣಾ ಹೇಳಿದರು.

ನನ್ನ ಗಂಡ ವಿಪರೀತ ಗೊರಕೆ ಹೊಡೆದರೆ ಎಂಬ ವಿಷಯಕ್ಕೆ ಉತ್ತರಿಸಿದ ಲಕ್ಷ್ಮಿ ಪ್ರಸಾದ್ ಅವರು, ನನ್ನ ಗಂಡ ಕೂಡ ಗೊರಕೆ ಹೊಡೆಯುತ್ತಾರೆ. ಆಗ ನಾನೆ ಎದ್ದು ಬೇರೆ ಕಡೆ ಹೋಗುತ್ತೇನೆ. ಕೆಲವೊಂದು ಭಂಗಿಗಳಿಂದ ಗೊರಕೆ ಸಮಸ್ಯೆ ನಿವಾರಿಸಿಕೊಳ್ಳಬಹುದು. ವಿದೇಶಗಳಲ್ಲಿ ಗಂಡ ಹೆಂಡತಿ ಜಗಳ ಆಡಿ ಡೈವರ್ಸ್ ಆಗ್ತಾರೆ. ನಮ್ಮಲ್ಲಿ ಈ ಸಂಸ್ಕೃತಿ ಇಲ್ಲ. ಇದು ಸಮಸ್ಯೆಯಲ್ಲ, ಸಾಮಾನ್ಯ ವಿದ್ಯಮಾನ.

ಅಪಹಾಸ್ಯ ಮಾಡುವ ವಿಚಾರವಲ್ಲ. ಕಿವಿಗೆ ಹತ್ತಿ ಇಟ್ಟು ಮಲಗಬೇಕು ಅಷ್ಟೆ. ರೈಲಿನ ಪ್ರಯಾಣ ಮಾಡಿದಾಗ ಆ ಶಬ್ಧಕ್ಕೆ ನಿದ್ದೆ ಬರದಿದ್ದರೆ ಹತ್ತಿ ಇಟ್ಟುಕೊಳ್ಳುತ್ತೇವೆ, ಅದೇ ರೀತಿ ಗೊರಕೆಯಲ್ಲೂ ಈ ವಿಧಾನ ಅನುಸರಿಸಬೇಕು ಎಂದರು. ಗರ್ಲ್ ಫ್ರೆಂಡ್ ಜತೆ ಮೂವಿಗೆ ಹೋದರೆ  ಅವರ ತಂದೆ ಕಾಣಿಸಿಬಿಟ್ಟರೆ ಎಂಬ ವಿಷಯಕ್ಕೆ
’ಗರ್ಲ್ ಪ್ರೆಂಡ್ ಜತೆಗೆ ಒರಾಯನ್ ಮಾಲ್ ಗೆ ಹೋದೆ. ವೀಕ್ ಡೆ ದಿನ ಹೋಗಿದ್ದೆ, ಹರಟೆ ಹೊಡೆಯಲಿ ಹೋದೆ. ಪಾಪ್ ಕಾರ್ನ್, ಸಿನಿಮಾ ನೋಡುತಾ ಇದ್ವಿ. ನಗುತಾ ನಗುತಾ ಗರ್ಲ್ ಪ್ರೆಂಡ್ ಮೆಲ್ಲಗೆ ಹಿಂದಕಡೆ ನೋಡಂಗಿಲ್ಲ ಅಂದ್ರು. ಯಾಕೆ ಅಂದರೆ ನಮ್ಮಪ್ಪ ಕುಂತವ್ರೆ ಕಣೋ ಅಂದಳು.

ಆಗ ನಾನು ನಿಮ್ಮಪ್ಪ ಆಫೀಸ್ ಗೆ ಹೋಗುವರಲ್ಲ. ಸಾವಿರ ರುಪಾಯಿ ಕೊಟ್ಟು ಟಿಕೆಟ್ ಕೊಟ್ಟು ಬಂದಿದೀನಿ. ನಾನು ಇಲ್ಲಿಂದ ಎದ್ಹೋಗೊ ಚಾನ್ಸೆ ಇಲ್ಲ. ಅವಳು ಬಿಡತಾನೆ ಇಲ್ಲ. ಇಂಟ್ರವಲ್ ತನಕ ನೋಡಲು ಬಿಡಿಲ್ಲ. ಕೋಪದಿಂದ ಕಾರು ಹತ್ತಿದಳು ಎಂದು ಶ್ರೇಯಸ್ ಅವರು ನಗು ಚಟಾಕೆ ಹಾರಿಸಿದರು: ಶ್ರೇಯಾ ಮಿಂಚಿನಡ್ಕ ಅವರಿಗೆ ಕೇಳಾದ ನಿಮ್ಮ ಅಮ್ಮನಿಗೆ ತಂಗಿಯ ಬಗ್ಗೆ ಚಾಡಿ ವಿಷಯಕ್ಕೆ ಉತ್ತರಿಸಿದ ಅವರು, ಅಮ್ಮ ಯಾವಾಗಲೂ ಯನಗೆ ಬೈತಿಯಾ ಅದೆ ತಂಗಿ ಎಂತದೆ ಮಾಡಲಿ ಬೈಯ್ಯ, ಅದರ ಮಾತ್ರ ಮುದ್ದು, ಎನಗೆ ಮಾತ್ರ ಯಾವುದೂ ಇಲ್ಲ. ಎಂತಕೆ ಹಿಂಗೆ ಮಾಡತಿಯೇ, ಎನ್ನ ಮಾತ್ರ ರೂಮಿನೊಳಗೆ ಕುಳ್ಳಿರಿಸಿ ಓದುಸಿತಿ. ಅವಳಿಗೆ ಮಾತ್ರ ಎಂತಾ ಹೇಳುವುದು. ತಂಗಿ ಎನ್ನ ಮಾಡಿದರೂ ಬೈಯಲ್ಲ ಎಂತಕೆ. ಇದಕ್ಕೆ ಎನಗೆ ಇಷ್ಟ ಆಗುದಿಲ್ಲ.

ಇದು ಒಂದು ದಿನವಲ್ಲ ಯಾವಾಗಲೂ ಇಷ್ಟೆ ಅಂದರು. ಕಾಗದ ವಿಮಾನ ಗಂಡು ಮಕ್ಕಳು ಕಾಲೇಜಿನಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ಹೇಳಲಾಗದ ವೇದನೆಯನ್ನು ಹುಡುಗೀಯರಿಗೆ ಕಾಳಿದಾಸನ ಮೇಘ ಸಂದೇಶದಂತೆ ಈಗಿನ ಕಾಗದ ವಿಮಾನ. ಆದರೆ ಚಿಕ್ಕಮಕ್ಕಳು ಆಟ ಮಾಡಲು ಬಳಸುತ್ತಾರೆ. ದೊಡ್ಡವರಾದ ಮೇಲೆ ಅದನ್ನು ಬೇರೆ ರೀತಿ ಬಳಸಕೊಳ್ತಾರೆ. ಹುಡುಗಿ ಎದುರಿಗೆ ಹೇಳುವ ಧೈರ್ಯ ಇರಲ್ಲ. ಈ ಕಾಗದ ವಿಮಾನ ಹುಡುಗರ ಮನಸ್ಸಿನಲ್ಲಿರಿವ
ತುಮಲುಗಳನ್ನು ಹೇಳಲು ಅನುಕೂಲ ಎಂದು ಮಾಧುರಿ ಭಾವೆ ತಿಳಿಸಿದರು.

ನಾನು ನನ್ನ ಹೆಂಡತಿ ಬಣ್ಣಿಸುವ ಸಮಯ ಬಂದರೆ, ಗುರುಗಳಿಗೆ ನೀವು ಪಾಠ ಹೇಳುವ ಸಮಯ, ನಾನು ನಿರೂಪಕಿ, ಬೆಳ್ಳಗೆ ದನ ಬಿಟ್ರೆ ಹೇಗೆ, ನನ್ನ ಗಂಡ ಕಿವುಡನಾದರೆ, ಮಗು ಆಟದ ಸಾಮಾನಿಗೆ ಹಠ ಮಾಡಿದರೆ, ಸಿಎಂ ಬೊಮ್ಮಾಯಿ ಅವರು ನಿಮ್ಮ ಜತೆ ಊಟಕ್ಕೆ ಕೂತರೆ ಮಾತುಕಥೆ ಹೇಗಿರುತ್ತೆ , ನಿಮ್ಮ ಸ್ನೇಹಿತರೆ ನಿಮ್ಮನ್ನು ಗೇಲಿ ಮಾಡಿದಾಗ ಹೀಗೆ ಹಲವಾರು ವಿಷಯಗಳಿಗೆ ತುಂಬಾ ಸೊಗಸಾಗಿ ಉತ್ತರಿಸಿದರು.

ಹಳ್ಳಿಗಳಲ್ಲಿ ನಲ್ಲಿ ಜಗಳಕ್ಕೆ ನಿಂತರೆ ಹೇಗಿರುತ್ತೆ ಗೊತ್ತಾ! ಬೆಳಗ್ಗೆಯಿಂದ ನಲ್ಲಿ ಹತ್ತಿರ ಇದ್ದು ನೀರಿಗಾಗಿ ಕಾಯ್ತಾ ಸುಸ್ತಾಗಿದ್ದೇನೆ. ಕರೆಂಟ್ ಇದ್ರೆ ನೀರಿಲ್ಲ, ನೀರಿದ್ರೆ ಕರೆಂಟ್ ಇರಲ್ಲ. ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ನೀರಿಗೆ ಕಾದಿದ್ದೀನಿ. ಯಾವನ್ಲಾ ಅವನು ವಾಟರ್ ಮ್ಯಾನ್ ನೀರು ಬಿಡದೆ ಇರೋನು?. ಬಾರೋ ಹೊರಗೆ.
ಬಿಡೋದು ಅರ್ಧ ಇಂಚು ನೀರು. ಇದೊಳ್ಳೆ ಕಥೆ -ನಮ್ಮ ವ್ಯಥೆ. ಎರಡು ನಲ್ಲಿ ಒಡಕಲು, ಇನ್ನೊಂದು ನಲ್ಲಿಯಲ್ಲಿ ನೀರೆ ಬರಲ್ಲ. ಎದುರು ಮನೆ ಸಾಕಮ್ಮನದೆ ನಲ್ಲಿನಾ. ಅವಳೆ ನೀರು ಹಿಡಕೊಂಡು ಹೋದ್ರೆ ನಾವೇನು ಮಾಡೋದು. ಪಂಚಾಯಿತಿ ಮನೆ ಹಾಕಸ್ಕೊಂಡು ಬಂದ ಬಿಟ್ಳು ಇಲ್ಲಿ ನೀರೆ ಖಾಲಿ ಮಾಡೊಕೆ. ಬಾರಮ್ಮ ಪಂಚಾಯಿತಿಗೆ. ಯಾರೆ ನೀನು ಇವಾಗ ಬಂದು ಬಿಟಿದಿಯಾ ಬಲೇ ಇದಿಯಾ ಎಂದು ಹಳ್ಳಿಗಳಲ್ಲಿ ನಲ್ಲಿ ಜಗಳಕ್ಕೆ ನಿಂತರೆ ಎಂಬ ವಿಷಯಕ್ಕೆ ಹಳ್ಳಿ ಸೊಗಡಿನಲ್ಲಿ ಪ್ರಭಾವತಿ ಅವರು ನೀಡಿದ ಉತ್ತರ.

ಬಹುಮಾನ ವಿಜೇತರು
ಮೊದಲ ಬಹುಮಾನ: ಪ್ರಭಾವತಿ (ನಲ್ಲಿ ನೀರಿಗೆ ಜಗಳ)
ಎರಡನೇ ಬಹುಮಾನ: ಶ್ರೇಯಸ್ (ಗರ್ಲ್ ಪ್ರೆಂಡ್ ಜತೆ ಸಿನಿಮಾ ಹೋದಾಗ ಆಕೆ ತಂದೆ ಎದುರಾದಾಗ)
ಮೂರನೆ ಬಹುಮಾನ: ಲಕ್ಷ್ಮಿ ಪ್ರಸಾದ್ (ಗಂಡ ಗೊರಕೆ ಹೊಡೆದರೆ ಏನು ಮಾಡುವಿರಾ)
ಪ್ರೋತ್ಸಾಹಕ ಬಹುಮಾನ: ಸೌಮ್ಯ ಪಾಟೀಲ್ (ಆನ್‌ಲೈನ್ ತರಗತಿ), ಮಾಧುರಿ ಭಾವೆ (ಕಾಗದದ ವಿಮಾನ)
ತೀರ್ಪುಗಾರರು: ಶಿಶಿರ ಹೆಗಡೆ, ಕಿರಣ್ ಉಪಾಧ್ಯಾಯ

Leave a Reply

Your email address will not be published. Required fields are marked *

error: Content is protected !!