Saturday, 27th July 2024

ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಯೋಜನೆ ಬೇಡ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ೧೭ ದಿನಗಳ ನಂತರ ಹೊರತೆಗೆಯಲಾಗಿದೆ. ಯಾವೊಬ್ಬ ಕಾರ್ಮಿಕರಿಗೂ ಪ್ರಾಣಾಪಾಯವಾಗದೇ ವಾಪಸ್ಸು ಬಂದಿದ್ದು, ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲ ನೀಡಿದಂತಾಗಿದೆ.

ಆದರೆ ಈ ಘಟನೆ ಅಭಿವೃದ್ಧಿಯ ಅಟ್ಟಹಾಸದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಸರಕಾರ ಕೈಗೊಳ್ಳುವ ಯೋಜನೆಗಳು ಎಷ್ಟು ಅಪಾಯಕಾರಿ ಎಂಬುದು ಸಾಬೀತುಪಡಿಸಿದೆ. ಉತ್ತರಾಖಂಡದಲ್ಲಿ ಚಾರ್‌ಧಾಮ್ ಪ್ರದೇಶದಲ್ಲಿ ಯಾತ್ರಾ ಸ್ಥಳಗಳಿಗೆ ಭಕ್ತರು ಹೋಗಲು ಅನುಕೂಲವಾಗಲೆಂದು ಅವು
ಗಳನ್ನು ಅಗಲವಾದ ರಸ್ತೆಗಳ ಜತೆಗೆ ಸೇರ್ಪಡೆ ಮಾಡುವ ಉದ್ದೇಶದ ಈ ಯೋಜನೆಯ ಬಗ್ಗೆ ತಜ್ಞರ ಆಕ್ಷೇಪವಿದ್ದರೂ, ಪರಿಸರದ ಮೇಲೆ ಇದರಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಅಧ್ಯಯನ ಮಾಡದೇ ಹಮ್ಮಿಕೊಳ್ಳಲಾಗಿತ್ತು. ವಾಸ್ತವವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ೬೯೦
ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ೫೫ ಸಾವಿರ ಮರಗಳನ್ನು ಕಡಿಯಲಾಗುತ್ತದೆ.

೨ ಕ್ಯೂಬಿಕ್ ಮಿಟರ್‌ನಷ್ಟು ಮಣ್ಣನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬೇಕಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಈ ರೀತಿ ಅಗೆದು ಮಣ್ಣನ್ನು
ತೆಗೆಯುವುದು ಅಲ್ಲಿ ಸುರಂಗ ನಿರ್ಮಾಣ ಮಾಡುವುದು ಅಲ್ಲಿನ ಸೂಕ್ಷ್ಮ ಪ್ರದೇಶದ ಮೇಲೆ ವಿಪರೀತ ಒತ್ತಡವನ್ನು ಉಂಟು ಮಾಡುತ್ತದೆ. ಹಿಮಾಲಯದ ಪರ್ವತ ಪ್ರದೇಶದಲ್ಲಿ ಇಂತಹ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುವ ಒತ್ತಡದಿಂದ ಅನೇಕ ಬಾರಿ ಪ್ರತಿಕೂಲ ಪರಿಣಾಮಗಳು ಉಂಟಾಗಿವೆ. ಆದರೂ ಸರಕಾರ ಅಭಿವೃದ್ಧಿ ಯೋಜನೆಗಳ ಕುರಿತ ತನ್ನ ಧೋರಣೆಯನ್ನು ಬದಲಿಸುತ್ತಿಲ್ಲ. ಪ್ರಕೃತಿಯ ಮೇಲೆ ಮನುಷ್ಯ ತನ್ನ ಅನು ಕೂಲಕ್ಕಾಗಿ ನಡೆಸುತ್ತಿರುವ ದಾಳಿಯಿಂದ ಉಂಟಾಗಿರುವ ಅಸಮತೋಲನ ವನ್ನು ಸರಿಪಡಿಸಲು ಹಿಮಾಲಯ ಪರ್ವತ ಶ್ರೇಣಿಗಳು ವಿಫಲವಾಗುತ್ತಿವೆ.

ನಿಸರ್ಗದ ಜತೆಗಿನ ಈ ಸಂಘರ್ಷದಲ್ಲಿ ಕೊನೆಗೆ ಸೋಲುವುದು ಮನುಷ್ಯನೇ. ಸೋಲು ಗೊತ್ತಿದ್ದರೂ ಮನುಷ್ಯ ಪ್ರಕೃತಿಯ ಮೇಲೆ ತನ್ನ ದಾಳಿಯನ್ನು
ಮುಂದುವರಿಸಿzನೆ. ಇನ್ನು ಮುಂದಾದರೂ ಹಿಮಾಲಯದ ತಪ್ಪಲಿನಂಥ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಯೋಜನೆಯನ್ನು ಕೈಗೊಳ್ಳುವ
ಮುನ್ನ ಸರಕಾರ ಹಲವಾರು ಬಾರಿ ಯೋಚಿಸಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಾದರೆ ಅಂತಹ ಯೋಜನೆಗಳನ್ನು ಕೈಬಿಡಬಿಡಬೇಕು.

Leave a Reply

Your email address will not be published. Required fields are marked *

error: Content is protected !!