Sunday, 21st April 2024

‘ಮೇಕೆ’ಗೆ ಅಡ್ಡಗಾಲು

ಬೆಂಗಳೂರಿಗೆ ಸಮರ್ಪಕವಾಗಿ ನೀರನ್ನು ಪೂರೈಸುವಲ್ಲಿ ಮಹತ್ವವಾಗಿರುವ ಮೇಕೆ ದಾಟು ಜಲಾಶಯ ನಿರ್ಮಾಣಕ್ಕೆ ತಮಿಳು
ನಾಡು ರಾಜಕಾರಣಿಗಳಿಂದ ಅಡ್ಡಿ ಉಂಟಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರ್ಯವನ್ನು ತಡೆಹಿಡಿಯುವಲ್ಲಿ ಪ್ರಯತ್ನಗಳು ಆರಂಭಗೊಂಡಿವೆ.

ಒಂದೆಡೆ ಕರ್ನಾಟಕದಿಂದ ಅನುಷ್ಠಾನ ಕಾರ್ಯಗಳು ವೇಗವಾಗಿ ಸಾಗುತ್ತಿದ್ದರೆ, ತಮಿಳುನಾಡಿನ ಡಿಎಂಕೆ ಪಕ್ಷ ಯೋಜನೆ ತಡೆ ಹಿಡಿಯುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದೆ. ಈ ಹಿಂದೆ ಕಾವೇರಿ ಜಲಹಂಚಿಕೆ ವಿವಾದದಂತೆಯೇ, ಇದೀಗ ಮೇಕೆದಾಟು ವಿಚಾರದಲ್ಲಿಯೂ ತಮಿಳುನಾಡಿನಿಂದ ವಿರೋಧಗಳು ವ್ಯಕ್ತವಾಗುತ್ತಿರುವುದು ಯೋಜನೆ ಅನುಷ್ಠಾನಕ್ಕೆ ಅಲ್ಪ
ಪ್ರಮಾಣದ ಅಡ್ಡಿಯುಂಟಾಗುತ್ತಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ತಮಿಳುನಾಡಿಗೆ ಹಾನಿ ಆಗುವು ದಿಲ್ಲ. ಅಗತ್ಯವಿರುವಷ್ಟು 177ಟಿಎಂಸಿ ನೀರನ್ನು ನೀಡುತ್ತೇವೆ, ಉಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಜಲಾಶಯ ದಲ್ಲಿ ಸಂಗ್ರಹವಾಗುತ್ತದೆ ಎನ್ನುವುದು ಕರ್ನಾಟಕ ರಾಜ್ಯದ ಸ್ಪಷ್ಟನೆ.

ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಕಿರು ಜಲಾಶಯ ನಿಮಾಣಕ್ಕೆ ಜಾಗದ ಅಳತೆ ಕಾರ್ಯವೂ ಮುಗಿದಿದೆ. ಮುಳುಗಡೆಗೊಳ್ಳಬಹುದಾದ ರಾಜ್ಯದ 6ಜನವಸತಿ ಹಾಗೂ 6ಧಾರ್ಮಿಕ ಸ್ಥಳವನ್ನು ಒಳ್ಳೆಯ ಉದ್ದೇಶಕ್ಕಾಗಿ ತೆರವುಗೊಳಿಸಲು ಜನರು ಸಹ ಒಪ್ಪಿಗೆ ನೀಡಿ, ಪರ್ಯಾಯ ವ್ಯವಸ್ಥೆಗೆ ಕೋರಿ ದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆದ ನಂತರ ಇದೀಗ ತಮಿಳುನಾಡಿನ ಡಿಎಂಕೆ ಪಕ್ಷವು ರೈತರ ಹಿತಾಸಕ್ತಿಗೆ ದಕ್ಕೆಯಾಗುವುದಾಗಿ ಆರೋಪಿಸಿ, ಯೋಜನೆ ತಡೆಯುವಂತೆ ಪ್ರಧಾನಿಯವರಿಗೆ ಮನವಿ ಸಲ್ಲಿಸಿದೆ.

ಇದರಿಂದ ವೇಗವಾಗಿ ಸಾಗುತ್ತಿದ್ದ ಕಾರ್ಯಕ್ಕೆ ಅಡ್ಡಿ ಉಂಟಾಗಿರುವುದು ವಿಪರ್ಯಾಸ. ಈ ಯೋಜನೆ ಮತ್ತೊಂದು ಕಾವೇರಿ ವಿವಾದ ಆಗದಂತೆ ಸುಲಭವಾಗಿ ಬಗೆಹರಿಸಬೇಕಾದ ಜವಾಬ್ದಾರಿ ಇದೀಗ ಪ್ರಧಾನಿ ಮೋದಿಯವರ ಮೇಲಿದೆ.

Leave a Reply

Your email address will not be published. Required fields are marked *

error: Content is protected !!