Sunday, 21st April 2024

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕ್ರಮಗಳೇನು?

ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರಕ್ಷಕ ಇಲಾಖೆಯ ಮಾದಕವಸ್ತು ನಿಯಂತ್ರಣ ಬ್ಯೂರೋ ಇತ್ತೀಚೆಗೆ ಕೆಲವರು ಚಿತ್ರ ನಟ – ನಟಿಯರನ್ನು ಬಂಧಿಸಿತು. ವಿಚಾರಣೆ ಆರಂಭಗೊಂಡ ನಂತರ ಸಾಕಷ್ಟು ಮಾಹಿತಿ ಬೆಳಕಿಗೆ ಬಂದಿದ್ದು, ಹಲವರ ವಿಚಾರಣೆಗಳು ಸಹ ನಡೆಯುತ್ತಿವೆ.

ರಾಜ್ಯದಲ್ಲಿ ಇದೀಗ ಬೆಳಕಿಗೆ ಬಂದಿರುವ ಚಿತ್ರನಟರ ಮಾದಕ ವ್ಯಸನ ಪ್ರಕರಣದ ಕಾವು ದಿನೇ ದಿನೇ ಹೆಚ್ಚುತ್ತಿದೆ. ಈ ಸಂದರ್ಭ
ದಲ್ಲಿ ಬಹುತೇಕರಿಂದ ಕೇಳಿಬರುತ್ತಿರುವ ಮಾತು ಡ್ರಗ್ಸ್‌ ಮುಕ್ತ ಕರ್ನಾಟಕ. ಇಂಥ ಒಂದು ಕಲ್ಪನೆ ಉತ್ತಮವಾದದ್ದು, ಆದರೆ ಅನುಷ್ಠಾನ ಹೇಗೆ ಎಂಬುದು ಮುಖ್ಯವಾಗಿ ಯೋಚಿಸಬೇಕಿರುವ ಸಂಗತಿ. ಆದರೆ ಡ್ರಗ್ಸ್ ಮುಕ್ತ ಕರ್ನಾಟಕ ಕಲ್ಪನೆಯನ್ನು ಸಾಕಾರ ಗೊಳಿಸುವುದು ಹೇಳಿದಷ್ಟು ಸುಲಭವೇ? ಅದನ್ನು ಅನುಷ್ಠಾನ ಹೇಗೆ? ಜನರು ಹಾಗೂ ಜನಪ್ರತಿನಿಧಿಗಳ ಪಾತ್ರವೇನು? ಆರಕ್ಷಕ ಇಲಾಖೆಯ ಜವಾಬ್ದಾರಿ, ಎಲ್ಲದರ ಕುರಿತು ಚಿಂತನೆಯ ಅಗತ್ಯವಿದೆ.

ಇತ್ತೀಚೆಗೆ ಬಿಜೆಪಿ ಯುವಮೋರ್ಚಾದಿಂದ ಡ್ರಗ್ಸ್‌‌ ಮುಕ್ತ ಅಭಿಯಾನಗಳು ಆರಂಭಗೊಂಡಿವೆ. ಗೃಹಸಚಿವರು ಸಹ ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ ಎಂದು ಆರಕ್ಷಕ ಇಲಾಖೆಗೆ ಬಲ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಐಜಿಪಿ ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಮಾದಕ ವ್ಯಸನ ನಿಯಂತ್ರಣಕ್ಕೆ ಸೂಚನೆ ನೀಡಿದ್ದಾರೆ. ಮಾದಕ ವಸ್ತು ಮುಕ್ತ ಬೆಂಗಳೂರು ನಿರ್ಮಿಸುವು ದಾಗಿ ಬೆಂಗಳೂರು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ. ಎಲ್ಲರ ಗುರಿಯೂ ಸಹ ಮಾದಕವಸ್ತು ಮುಕ್ತ ಕರ್ನಾಟಕ ಸ್ಥಾಪನೆ.

ಅನುಷ್ಠಾನಕ್ಕಾಗಿ ಮೊದಲು ಗಡಿಗಳಲ್ಲಿ ಡ್ರಗ್ಸ್‌ ಸಾಗಾಣಿಕೆ ತಡೆಯಬೇಕು. ಎರಡನೆಯದಾಗಿ ರಾಜ್ಯದಲ್ಲಿ ಸಂಗ್ರಹವಿರುವ ಡ್ರಗ್ಸ್‌ ಗಳನ್ನು ವಶಕ್ಕೆ ಪಡೆ ಯಬೇಕು. ಡ್ರಗ್ಸ್‌ ಸೇವಿಸಿದ ಆರೋಪಿಗಳು, ಪ್ರಚೋದಿಸಿದ ಆರೋಪಿಗಳ ಬಂಧನ – ವಿಚಾರಣೆ ಮಹತ್ವ ವಾದರೂ, ಅದಕ್ಕಿಂತ ಮುಖ್ಯವಾಗಿ ಕಿಂಗ್‌ಪಿನ್‌ಗಳ ಬಂಧನದಿಂದ ಮಾತ್ರವೇ ನಿರ್ಮೂಲನೆ ಸಾಧ್ಯ.

Leave a Reply

Your email address will not be published. Required fields are marked *

error: Content is protected !!