Saturday, 27th July 2024

ಪಾಕ್ ಬೆಂಬಲಿತ ಭಯೋತ್ಪಾದಕರ ದಾಳಿ ಸಾಧ್ಯತೆ

ವಿಶ್ವದ ಎಲ್ಲಾ ದೇಶಗಳೂ ಪಾಕಿಸ್ತಾನದ ಮೇಲೆ ಒತ್ತಡ ತರಬೇಕಾದ ಅನಿವಾರ್ಯ ಸ್ಥಿತಿಯನ್ನು ಭಾರತ ನಿರ್ಮಿಸಬೇಕಿದೆ. ಅಂದಾಗ ಮಾತ್ರ, ನೆರೆಯ ದೇಶದ ಈ ರೀತಿಯ ಕಿರುಕುಳವನ್ನು ತಡೆಯಲು ಸಾಧ್ಯವಿದೆ.

ಪಾಕಿಸ್ತಾನದ ಸೈನ್ಯದ ಬೆಂಬಲ ಹೊಂದಿರುವ ಐಎಸ್‌ಐ ಸಂಸ್ಥೆೆಯು ಹಿಂಸಾತ್ಮಕ ಕೃತ್ಯ ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಂಡಿದೆ.

ಪಾಕಿಸ್ತಾಾನದಲ್ಲಿ ತರಬೇತಿ ಪಡೆದಿರುವ ಭಯೋತ್ಪಾಾದಕರು ಭಾರತದ ವಿಮಾನ ನಿಲ್ದಾಾಣಗಳ ಮೇಲೆ ದಾಳಿ ನಡೆಸಬಹುದೆಂಬ ಎಚ್ಚರಿಕೆಯ ಹಿನ್ನೆೆಲೆಯಲ್ಲಿ, ಎಲ್ಲೆೆಡೆ ರೆಡ್‌ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿಿನ ಪ್ರಮಾಣದ ಶಸ್ತ್ರಾಾಸ್ತ್ರಗಳನ್ನು ಹೊಂದಿರುವ ಭಯೋತ್ಪಾಾದಕರು ದೆಹಲಿಯನ್ನು ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ದೆಹಲಿಯ ಅಥವಾ ಸನಿಹದ ವಿಮಾನ ನಿಲ್ದಾಾಣಗಳ ಮೇಲೆ ಆತ್ಮಹತ್ಯಾಾ ದಾಳಿ ನಡೆಸಬಹುದು ಎಂಬ ಗುಪ್ತಚರ ವರದಿ ಲಭ್ಯವಾಗಿದ್ದು, ಭಾರತದಾದ್ಯಂತ ಎಚ್ಚರಿಕೆಯನ್ನು ವಹಿಸಲಾಗುತ್ತಿಿದೆ. ಕೇಂದ್ರ ಸರಕಾರವು ಕಾಶ್ಮೀರಕ್ಕೆೆ ನೀಡಿದ್ದ ವಿಶೇಷ ಸ್ಥಾಾನಮಾನ 370 ನೇ ವಿಧಿ ರದ್ದು ಪಡಿಸಿದ್ದಕ್ಕೆೆ ಪ್ರತೀಕಾರವಾಗಿ, ಪಾಕಿಸ್ತಾಾನದಿಂದ ನುಸುಳಿ ಬಂದ ಭಯೋತ್ಪಾಾದಕರು ಈ ಕೃತ್ಯವನ್ನು ನಡೆಸಬಹುದೆಂಬ ವರದಿಯೇ ಕಳವಳ ಉಂಟು ಮಾಡುತ್ತಿಿದೆ.

ಈ ಹಿಂದೆಯೂ ಇತರ ನೆಪ ಮಾಡಿಕೊಂಡು ಪಾಕಿಸ್ತಾಾನ ಪ್ರಚೋದಿತ ಭಯೋತ್ಪಾಾದಕರು ಮುಂಬಯಿ ದಾಳಿ, ಪಾರ್ಲಿಮೆಂಟ್ ದಾಳಿ ಮೊದಲಾದ ದುಷ್ಕೃತ್ಯಗಳನ್ನು ನಡೆಸಿದ್ದರು. ಕೆಲವು ದಿನಗಳ ಹಿಂದೆ, ಆರು ಮಂದಿ ಭಯೋತ್ಪಾಾದಕರು ಸಮುದ್ರ ಮಾರ್ಗವಾಗಿ ಬಂದು, ಕೊಯಮತ್ತೂರು ಮೊದಲಾದ ನಗರಗಳನ್ನು ಪ್ರವೇಶಿದ್ದಾಾಗಿಯೂ, ಯಾವುದೇ ಸಂದರ್ಭದಲ್ಲೂ ದಕ್ಷಿಿಣ ಭಾರತದ ನಗರಗಳಲ್ಲಿ ದಾಳಿ ನಡೆಸಬಹುದೆಂದೂ ಮತ್ತೊೊಂದು ಗುಪ್ತಚರ ವರದಿ ಹೇಳುತ್ತದೆ. ಪಶ್ಚಿಿಮ ಕರಾವಳಿಯಲ್ಲಿ ಅನಾಥವಾಗಿ ಕಂಡು ಬಂದ ಕೆಲವು ದೋಣಿಗಳ ಮೂಲಕ ಪಾಕಿಸ್ತಾಾನದಿಂದ ಭಯೋತ್ಪಾಾದಕರು ದೇಶದೊಳಗೆ ನುಸುಳಿರಬಹುದು ಎಂಬ ವರದಿಯಲ್ಲಿ ಸಾಕಷ್ಟು ಸತ್ಯಾಾಂಶ ಇರುವಂತೆ ಕಂಡು ಬರುತ್ತಿಿದೆ.

ಪಾಕಿಸ್ತಾಾನ ಬೆಂಬಲಿತ ಜೈಶ-ಇ-ಮೊಹಮ್ಮದ್ ಸಂಘಟನೆಯ ಸದಸ್ಯರಿಗೆ ಪಾಕಿಸ್ತಾಾನದಲ್ಲಿ ಮತ್ತು ಪಿಒಕೆಯಲ್ಲಿ ತರಬೇತಿ ದೊರೆಯುತ್ತಿಿರುವ ಸುದ್ದಿ ಈಗ ಹಳೆಯದು. ಪಾಕಿಸ್ತಾಾನದ ಸೈನ್ಯದ ಬೆಂಬಲ ಹೊಂದಿರುವ ಐಎಸ್‌ಐ ಸಂಸ್ಥೆೆಯು ಹಿಂಸಾತ್ಮಕ ಕೃತ್ಯ ನಡೆಸಲು ಭಯೋತ್ಪಾಾದಕರಿಗೆ ತರಬೇತಿ ನೀಡುತ್ತಿಿರುವ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಂಡಿದ್ದು, ಪಾಕಿಸ್ತಾಾನವು ಭಯೋತ್ಪಾಾದನೆಯನ್ನು ಒಂದು ಅಧಿಕೃತ ಪಾಲಿಸಿಯನ್ನಾಾಗಿ ಆಚರಣೆಯಲ್ಲಿಟ್ಟಿಿರುವುದು ಸಹ ರಹಸ್ಯವಾಗಿ ಉಳಿದಿಲ್ಲ. ಬಾಲಕೋಟ್‌ನ ಭಯೋತ್ಪಾಾದಕ ತರಬೇತಿ ಶಾಲೆಗಳನ್ನು ನಮ್ಮ ದೇಶದ ಯುದ್ಧವಿಮಾನಗಳು ನಾಶಗೊಳಿಸಿದ್ದು ಒಂದೆಡೆಯಾದರೆ, ಅದೇ ಜಾಗದಲ್ಲಿ ಭಯೋತ್ಪಾಾದಕರ ತರಬೇತಿ ಪುನಃ ಆರಂಭವಾಗಿದೆ ಎಂದೂ ವರದಿಯಾಗಿದೆ.

ಭಯೋತ್ಪಾಾದಕರನ್ನು ತಯಾರಿಸುವ ಪಾಕಿಸ್ತಾಾನದಂತಹ ದೇಶವನ್ನು ಮಗ್ಗುಲಲ್ಲಿ ಹೊಂದಿರುವ ಅನಿವಾರ್ಯ ಸಂಕಟ ನಮ್ಮದಾಗಿರುವುದು ಒಂದೆಡೆಯಾದರೆ, ನಮ್ಮ ದೇಶಕ್ಕೆೆ ಸದಾ ಕಾಲ ತೊಂದರೆ ಕೊಡುವಲ್ಲಿ ತಾನು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾಾನ ಬಹಿರಂಗವಾಗಿ ಹೇಳಿಕೊಳ್ಳುತ್ತಿಿರುವುದು ಮತ್ತಷ್ಟು ಕಳವಳಕ್ಕೆೆ ಕಾರಣವಾಗಿದೆ. ನಮ್ಮ ದೇಶಕ್ಕಿಿಂತ ಸಾಕಷ್ಟು ಚಿಕ್ಕದೆನಿಸಿರುವ, ಸಂಪನ್ಮೂಲಗಳಲ್ಲೂ ಕಿರಿದಾಗಿರುವ ಪಾಕಿಸ್ತಾಾನದ ಕಿರುಕುಳವನ್ನು ಭಾರತವು ಇಷ್ಟು ವರ್ಷ ಸಹಿಸಿಕೊಂಡಿದ್ದೇ, ಆ ದೇಶಕ್ಕೆೆ ತನ್ನ ಚಾಳಿಯನ್ನು ಮುಂದುವರಿಸಲು ಪ್ರೋೋತ್ಸಾಾಹ ನೀಡಿದಂತಾಗಿದೆ. ಪಾಕಿಸ್ತಾಾನವು ಭಯೋತ್ಪಾಾದಕರಿಗೆ ತರಬೇತಿ ನೀಡುವ ಮತ್ತು ಅವರನ್ನು ನಮ್ಮ ದೇಶಕ್ಕೆೆ ಕಳುಹಿಸುವ ಚಟುವಟಿಕೆಯನ್ನು ತಡೆಯುವಲ್ಲಿ ನಮ್ಮ ದೇಶ ಕಾರ್ಯಪ್ರವೃತ್ತವಾಗಬೇಕಿದೆ. ಭಯೋತ್ಪಾಾದಕರನ್ನು ತರಬೇತಿಗೊಳಿಸುವ ಕಾರ್ಯವನ್ನು ನಿಲ್ಲಿಸಬೇಕೆಂದು ವಿಶ್ವದ ಎಲ್ಲಾಾ ದೇಶಗಳೂ ಪಾಕಿಸ್ತಾಾನದ ಮೇಲೆ ಒತ್ತಡ ತರಬೇಕಾದ ಅನಿವಾರ್ಯ ಸ್ಥಿಿತಿಯನ್ನು ಭಾರತ ನಿರ್ಮಿಸಿದಾಗ ಮಾತ್ರ, ನೆರೆಯ ದೇಶದ ಈ ರೀತಿಯ ಕಿರುಕುಳವನ್ನು ತಡೆಯಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!