Saturday, 27th July 2024

ರಾಜ್ಯೋತ್ಸವ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಆಯ್ಕೆ

ದಗ: ‘ತೊಗರಿ ತಿಪ್ಪ’ ನಾಟಕದ ಮೂಲಕ ಮನೆ ಮಾತಾಗಿರುವ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇಳಕಲ್ಲನ ವಿಜಯಮಹಾಂತೇಶ್ವರ ಕಲೆ, ವಿಜ್ಞಾನ, ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಶಂಭು ಬಳಿಗಾರ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿ ಗ್ರಾಮದವರು.

1952 ಏಪ್ರಿಲ್ 1ರಂದು ಶಿಗ್ಲಿಯ ಬಳಿಗಾರ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ ನಂತರ ಉನ್ನತ ವಿದ್ಯಾಭ್ಯಾಸವನ್ನು ಧಾರವಾಡ, ಹೈದರಾಬಾದ್ ಮತ್ತು ಕಲಬುರಗಿಯಲ್ಲಿ ಮುಗಿಸಿ ಇಳಕಲ್ಲಿನಲ್ಲಿ ಉಪನ್ಯಾಸಕರಾದವರು.

ಇವರಿಗೆ ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಒಲವು. ಆಕರ್ಷಕವಾಗಿ ಮಾತನಾಡುವ ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಕನ್ನಡ ಜಾನಪದವನ್ನು ಇವರ ಮಾತಿನಲ್ಲೇ ಕೇಳಿ ಆನಂದಿಸಬೇಕು. ಜಾನಪದ ಸಾಹಿತ್ಯವನ್ನು ತಿಳಿ ಹಾಸ್ಯದೊಂದಿಗೆ ಜನರ ಹತ್ತಿರಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ.

‘2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದು ತುಂಬ ಖುಷಿ ತರಿಸಿದೆ’ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!