Friday, 18th October 2024

ಸಂಕೀರ್ಣ ಮನಸ್ಥಿತಿಗೆ ಸುಲಭ ಪರಿಹಾರ ಸ್ವಯಂ ಅರಿವು

ಶ್ವೇತಪತ್ರ

shwethabc@gmail.com

ನಿಮ್ಮಲ್ಲಿ ಸ್ವಯಂ ಅರಿವು ಹೆಚ್ಚಾಗಿದ್ದರೆ ನಿಮ್ಮದೇ ಬಗೆಗಿನ ನೆಗೆಟಿವ್ ಅಂಶಗಳ ಅರಿವು ನಿಮ್ಮವಾಗಿರುತ್ತದೆ. ಅದನ್ನು ಒಪ್ಪಿಕೊಳ್ಳುವ ಸವಾಲು ನಿಮ್ಮದೇ ಆಗಿರುತ್ತದೆ. ಅದನ್ನು ವಿವೇಕಯುತವಾಗಿ ನಿಭಾಯಿಸಬೇಕು ಅಷ್ಟೇ. ಸ್ವಯಂ ಅರಿವೆಂದರೆ ನಮ್ಮೊಳಗಿನ ಆಲೋಚನೆ ಭಾವನೆಗಳನ್ನು ಗುರುತಿಸಿ ವಾಸ್ತವಕ್ಕೂ ಅವುಗಳಿಗೂ ಸಂಬಂಧ ಸರಿದೂಗುತ್ತದೆಯೆ ಎಂದು ಅವಲೋಕಿಸುವುದು.

ಆಫೀಸಿನ ಡೆಸ್ಕ್‌ನಲ್ಲಿ ಆರಾಮದಲ್ಲಿ ಕುಳಿತಿದ್ದೀರಿ. ನಿಮ್ಮ ಆ ತಿಂಗಳ ಸೇಲ್ಸ ಉತ್ತಮವಾಗಿದೆ. ನಿಮ್ಮೊಳಗೆ ಒಂದು ನಿರಾಳತೆ, ಸಂತೃಪ್ತಿ. ಇದಕ್ಕಿದ್ದ ಹಾಗೆ ನಿಮ್ಮ ಫೋನ್ ರಿಂಗಣಿಸುತ್ತದೆ. ನೀವು ಫೋನ್ ಕಾಲ್ ರಿಸೀವ್ ಮಾಡಿದ ಕೂಡಲೇ ಆ ಕಡೆಯಿಂದ ಒಂದು ಕೋಪದ ಧ್ವನಿ; ಅದು ನಿಮ್ಮ ಕ್ಲೈಂಟಿನದ್ದು. ನೀವು ಕಳುಹಿಸಿಕೊಟ್ಟಿದ್ದ ಪ್ರಾಡಕ್ಟ್ ಸರಿಯಾದ ಸಮಯಕ್ಕೆ ತಲುಪಲಿಲ್ಲ ವೆಂದು ಕೆಂಡಾಮಂಡಲವಾಗಿದ್ದಾರೆ.

ಮತ್ತೊಬ್ಬ ಸಪ್ಲೈಯರ್ ನಿಂದ ಪ್ರಾಡಕ್ಟ್ ತರಿಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಷ್ಟು ಹೊತ್ತಿನ ನಿಮ್ಮ ನಿರಾಳತೆ ಯಲ್ಲಿ ವ್ಯತ್ಯಾ ಸವಾಗಿದೆ. ನಿಮ್ಮ ಹೃದಯ ಬಡಿತ ಜೋರಾಗಿದೆ, ನೀವು ಬೆವರಿಲಿಕ್ಕೆ ಶುರುವಿಟ್ಟು ಕೊಂಡಿದ್ದೀರಿ, ಉಸಿರಾಟ ಹೆಚ್ಚಾಗಿದೆ, ಮನಸ್ಸಿನಲ್ಲಿ ಏನೋ ಒಂಥರಾ ಆತಂಕ. ಇಂತಹ ಅದೆಷ್ಟೋ ಪರಿಸ್ಥಿತಿಗಳನ್ನು ಬದುಕಿನುದಕ್ಕೂ ನಾವು ಎದುರಿಸಬೇಕು.

ಇವೆಲ್ಲವುಗಳಿಗೆ ಸುಲಭ ಪರಿಹಾರ ಸ್ವಯಂ ಅರಿವು. ಬೇರೆ ಬೇರೆಯ ಸ್ತರಗಳಲ್ಲಿ ನಮ್ಮನ್ನು ನಾವು ಅರಿಯುವ ಪ್ರಕ್ರಿಯೆಯೇ ಈ ಸ್ವಯಂ ಅರಿವು. ನಮ್ಮ ದೇಹ, ಮನಸ್ಸು, ನಮ್ಮ ಶರೀರ ಭಾಷೆ, ನಮ್ಮ ಭಾವನೆಗಳು, ನಮ್ಮ ಆದ್ಯತೆಗಳು, ಉದ್ದೇಶಗಳು, ಗುರಿಗಳು ಮೌಲ್ಯಗಳು, ನಮ್ಮ ಜ್ಞಾನ ಇವುಗಳೊಟ್ಟಿಗೆ ನಾವು ಇತರರ ಎದುರಿಗೆ ಹೇಗೆ ಕಂಡು ಬರುತ್ತೇವೆ ಎನ್ನುವುದಿದೆಯಲ್ಲ ಅಲ್ಲಿ ಸ್ವಯಂ ಅರಿವಿನ ಪಾತ್ರ ಮುಖ್ಯವಾಗಿ ತೋರಿಬರುತ್ತದೆ. ಸ್ವಯಂ ಅರಿವು ನಮ್ಮಲ್ಲಿ ಹೆಚ್ಚಿದಷ್ಟೂ ಬಹಳ ಸುಲಭವಾಗಿ ನಾವು ಮತ್ತೊಬ್ಬರೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತೇವೆ.

ಜತೆಗೆ ನಮ್ಮ ಪ್ರತಿಕ್ರಿಯೆ -ಪ್ರಕ್ರಿಯೆಗಳಲ್ಲಿ ಸೂಕ್ಷ್ಮತೆಯನ್ನು ಕಂಡುಕೊಳ್ಳುತ್ತೇವೆ. ನಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳಲು ನಮ್ಮ ಅನುಭವದ ಬಗೆಗಿನ ಸ್ವಯಂ ಅರಿವೇ ಪ್ರಧಾನವಾದದ್ದು. ಜೀವಕೋಶದ ಮಟ್ಟಿಗೆ ಹೇಳುವುದಾದರೆ ದೇಹದ ಶಕ್ತಿಯ ಅಂಶವೇ ಭಾವನೆ ಆದರೆ ಮನೋವೈಜ್ಞಾನಿಕವಾಗಿ ಭಾವನೆಗಳು ಮಾಹಿತಿ ಕೇಂದ್ರದ ಅಂಶಗಳು ಅವು ಮುಖ್ಯವಾದ ವಿಷಯಗಳ
ಕುರಿತಾದ ಮಾಹಿತಿಯನ್ನು ನಮಗೆ ಒದಗಿಸಿಕೊಡುತ್ತವೆ.

ಹಾಗಾಗಿ ಎಲ್ಲ ಭಾವನೆಗಳು ನಾವು ಬಿತ್ತರಿಸುವ ಮಾಹಿತಿಗೆ ಅನುಸಾರವಾಗಿ ಪಾಸಿಟಿವ್ ಆಗೇ ಇರುವಂತಹುವು ನಾವು
ಗ್ರಹಿಸುವ ವಿಚಾರಗಳು ಸ್ವರಕ್ಕೆ ಶ್ರುತಿ ಸೇರಿದ ಹಾಗೆ ಸೇರುವುದನ್ನು ಕಲಿಯಬೇಕು ಆಗ ನಮ್ಮ ಆಲೋಚನೆ ವಿವೇಚನೆ ಭಾವನೆಗಳು ಆರೋಗ್ಯಕರವಾಗಿರುತ್ತವೆ ಇಲ್ಲಿಯೂ ಸ್ವಯಂ ಅರಿವಿನ ಜಾಗೃತಿ ಬಹಳ ಮುಖ್ಯವಾಗಿರುತ್ತದೆ.

ಸಂವೇದನೆಗಳ ಅರಿಯಿರಿ!
ಸಂವೇದನಗಳ ಬಗ್ಗೆ ಭಾವನೆಗಳ ಬಗ್ಗೆ ಅರಿಯುವುದೇ ಬೇರೆ ಅದನ್ನು ವ್ಯಕ್ತಪಡಿಸುವುದೇ ಬೇರೆ ಕೆಲವೊಮ್ಮೆ ಕೆಲ ವಿಚಾರ ಗಳಿಗೆ ನಾವು ಪ್ರತಿಕ್ರಿಯಿಸಬೇಕಾದರೆ ಬಹಳ ಪ್ರಜ್ಞಾಪೂರ್ವಕ ಯೋಚಿಸಿ ಪ್ರತಿಕ್ರಿಯಿಸಿರುತ್ತೇವೆ. ಈ ರೀತಿಯ ಎಚ್ಚರಿಕೆಯ ಆಯ್ಕೆ ನಮ್ಮಿಂದ ಸಾಧ್ಯವಾಗಿರುವುದು ನಾವು ಅನುಭವಿಸುತ್ತಿರುವ ಭಾವನೆಗಳ ಅರಿವು ನಮಗಿದ್ದಾಗ ಮಾತ್ರ.

ಭಾವನೆಗಳ ಬಗೆಗಿನ ಈ ಅರಿವು ನಮ್ಮ ವರ್ತನೆಯಲ್ಲಿ ಹೊಸ ಸಾಧ್ಯತೆಗಳನ್ನು ಮೂಡಿಸುತ್ತದೆ. ನಮ್ಮೊಳಗೆ ಏನಾಗುತ್ತಿದೆ ಎಂಬ ಅರಿವು ನಮಗಿಲ್ಲದೆ ಹೋದರೆ ನಮ್ಮ ಪ್ರತಿಕ್ರಿಯೆ ನಿರ್ಲಿಪ್ತವಾಗಿರುವುದಷ್ಟೇ ಅಲ್ಲ ಯಾವುದೇ ಒಳ್ಳೆಯ ಕಾರಣವೂ ಅದಕ್ಕಿಲ್ಲವಾಗಿಬಿಡುತ್ತದೆ. ಉದಾಹರಣೆಗೆ ನಮ್ಮ ದಿನ ಯಾವುದೋ ನೆಗೆಟಿವ್ ಆದ ಅನುಭವದೊಂದಿಗೆ ಶುರುವಾಯಿತು ಎಂದಿಟ್ಟುಕೊಳ್ಳೋಣ.

ಆ ನೆಗೆಟಿವಿಟಿ ಇಡೀ ದಿನ ನಮ್ಮಲ್ಲಿ ಕಿರಿಕಿರಿಯನ್ನು, ಅಹಿತ ಭಾವವನ್ನು ಉಂಟು ಮಾಡಿಬಿಡುತ್ತದೆ. ಜತೆಗೆ ಆ ದಿನ
ಬೇರೆಯವರೊಟ್ಟಿಗಿನ ನಮ್ಮ ನಡವಳಿಕೆಯಲ್ಲೂ ವ್ಯತ್ಯಾಸಗಳು ಉಂಟಾಗಬಹುದು. ಅದು ನಮ್ಮ ಗಮನಕ್ಕೆ ಬಾರದೆ ಯಾರಾದರೂ ನಮ್ಮ ಕಿರಿಕಿರಿಯನ್ನು ನಮ್ಮದೇ ಗಮನಕ್ಕೆ ತಂದರೆ ಆಗ ಅರಿವಿನ ಬಗೆಗೆ ಆಶ್ಚರ್ಯ ಮೂಡುತ್ತದೆ. ಒಮ್ಮೆ ನಮ್ಮ ಅನುಭವಗಳನ್ನು ನಾವು ಗುರುತಿಸುವುದು ಸಾಧ್ಯವಾದರೆ ಯೋಚಿಸುವ ಮೆದುಳಿ ನೊಳಗೆ ನಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ಸೇರಿಸಿ ಪ್ರಜ್ಞಾಪೂರ್ವಕವಾಗಿ ನೆಗೆಟಿವ್ ಮೇಲ್ನೋಟವನ್ನು ಪಾಸಿಟಿವ್ ಆಗಿಸಿಕೊಳ್ಳಬಹುದು.

ಕೆಲವೊಮ್ಮೆ ಸ್ವಯಂ ಅರಿವು ನಮ್ಮ ಗಮನಕ್ಕೆ ಬಾರದೇ ಹೋದರೆ ನಾವುಗಳು ತೊಂದರೆಗೆ ಸಿಲುಕುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೇಗೆಂದರೆ ಎಂದೋ ಕಲಿತ ಕಲಿಕೆಯೊಂದು ಹಳೆಯ ನೆನಪಾಗಿ ಉಳಿದುಬಿಟ್ಟಿರುತ್ತದೆ. ಇವತ್ತಿನ ಯಾವುದೋ ಸಂದರ್ಭಕ್ಕೆ ಅದೇ ಹಳೆಯ ಕಲಿಕೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಿ ಬಿಟ್ಟಿರುತ್ತದೆ. ಇಂತಹ ನಡವಳಿಕೆಯ ಸೂಕ್ಷ್ಮತೆಗೆ ಸ್ವಯಂ
ಅರಿವು ಸೂತ್ರಧಾರನಾಗಿರುತ್ತದೆ. ಅದಕ್ಕೆ ಈ ಸ್ವಯಂ ಅರಿವು ನಮ್ಮ ವರ್ತನೆಯ ಸ್ವಾತಂತ್ರ್ಯ ಹಾಗೂ ಸ್ವಯಂ ನಿಯಂತ್ರಣದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.

ನಮ್ಮ ಸಂವೇದನೆಗಳು ಅಥವಾ ಭಾವನೆಗಳು ಗಟ್ಟಿಗೊಳ್ಳದ ಹೊರೆತು ನಮ್ಮನಾಗುತ್ತಿದೆ ಎಂಬ ಅರಿವು ನಮಗಿರುವುದಿಲ್ಲ. ನಿಜ ಹೇಳಬೇಕೆಂದರೆ ನಾವು ಯೋಚಿಸುತ್ತಿರುವುದಕ್ಕೂ ಅನುಭವಿಸುತ್ತಿರುವುದಕ್ಕೂ ಎಷ್ಟೋ ಬಾರಿ ಅಸಲಿಗೆ ಸಂಬಂಧವೇ ಇರುವುದಿಲ್ಲ. ಇವೆರಡರ ಹೊಂದಾಣಿಕೆಯ ಪ್ರಕ್ರಿಯೆಯಾಗಿ ಸ್ವಯಂ ಅರಿವು ಗಟ್ಟಿಗೊಳ್ಳಬೇಕು.

ಭಾವನೆಗಳ ಭಾಷೆ!
ನಿಮ್ಮ ಭಾವನೆಗಳನ್ನು ವಿವರಿಸುವುದಕ್ಕೆ ನೀವು ಯಾವೆಲ್ಲ ಪದಗಳನ್ನು ಬಳಸುತ್ತೀರಾ? ನನ್ನನ್ನೂ ಸೇರಿದಂತೆ ನಮ್ಮಲ್ಲಿ ಅನೇಕರು ಖುಷಿ, ಕೋಪ, ಬೇಜಾರು, ಸಂತೋಷ, ಭಯ ಹೀಗೆ ನಮ್ಮ ಅನುಭವಗಳ ಆಧಾರದಲ್ಲಿ ನಮ್ಮ ಭಾವನೆಗಳಿಗೆ
ಹೆಸರು ನೀಡುತ್ತೇವೆ. ನಮ್ಮ ಭಾವನೆಗಳನ್ನು ವಿವರಿಸುವುದಕ್ಕೆ ನಮಗೊಂದು ಭಾಷೆ ಬೇಕು. ಇಲ್ಲವೇ ಒಂದು ಚೌಕಟ್ಟು ಬೇಕು. ಏಕೆಂದರೆ ನಮ್ಮ ಭಾವನೆಗಳಿಗಾಗಿ ದೊಡ್ಡದಾದ ಶಕ್ತಿ ಇರುತ್ತದೆ. ಈ ಶಕ್ತಿಯನ್ನು ನಾವು ಹಿಗ್ಗಿಸಿ, ತಗ್ಗಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಅನುವು ಮಾಡಿಕೊಡಬಹುದಾಗಿರುತ್ತದೆ. ನಮ್ಮದೇ ಭಾವನೆಗಳು ನಮ್ಮನ್ನು ವಿಚಲಿತ ರನ್ನಾಗಿಸುತ್ತವೆ. ಜತೆಗೆ ನಮ್ಮಲ್ಲಿ ಅಭದ್ರತೆಯನ್ನು

ತಂದೊಡುತ್ತವೆ. ಹಾಗಾಗಿ ನಮ್ಮ ಭಾವನೆಗಳನ್ನು ಸಂವಹಿಸುವಾಗ ನಾವು ಅವುಗಳನ್ನು ಉತ್ತಮವಾಗಿಸಿಕೊಳ್ಳಬೇಕು. ಈ
ಪ್ರಕ್ರಿಯೆ ಬೇರೆಯವರ ಜತೆಗಿನ ನಮ್ಮ ಸಂಬಂಧವನ್ನು ಸೌಹಾರ್ದಯುತವಾಗಿಸುತ್ತದೆ. ಜನರ ಜತೆ ಹೆಚ್ಚು ಕನೆಕ್ಟ್
ಆಗಲು ಸಹಕಾರಿಯಾಗುತ್ತದೆ.

ಒಂದಿಷ್ಟು ಆಪ್ತ ಸಲಹೆಗಳು
೧) ಅನಿಸಿದ್ದನ್ನು ಬರೆಯಿರಿ. ಬರೆಯುವ ಡೇರಿಗೊಂದು ಚೆಂದದ ಹೆಸರಿಡಿ ಬರವಣಿಗೆಯಲ್ಲಿ ಪ್ರಶ್ನೆಗಳಿರಲಿ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಿಮ್ಮದಾಗಿರಲಿ.

೨) ಕೆಲಸಗಳಲ್ಲಿ ನಿರ್ಜೀವವಾಗಿ ತೊಡಗಿಸಿಕೊಳ್ಳುವುದಕ್ಕಿಂತ ಆ ಕೆಲಸ ಮಾಡುವಾಗ ನಿಮ್ಮ ಒಳಗೊಂದು ಖುಷಿ ಇರಲಿ,
ಜೀವಂತಿಕೆ ಇರಲಿ, ಕೆಲಸದ ಬಗ್ಗೆ ವ್ಯಾಮೋಹವಿರಲಿ.

೩) ಸ್ವಯಂ ಕುತೂಹಲ, ಸ್ವಯಂ ಅವಲೋಕನವನ್ನು ರೂಡಿಸಿಕೊಳ್ಳಿ. ಯಾರೋ ಮೂರನೆಯ ವ್ಯಕ್ತಿಯನ್ನು ಅವಲೋಕಿಸು ವಂತೆ ನಿಮ್ಮನ್ನು ನೀವು ಅವಲೋಕಿಸಿಕೊಳ್ಳಿ. ಇದು ಭಾವನೆಗಳನ್ನು ನಿಯಂತ್ರಿಸಲು ಸಹಕಾರಿ.
೪) ದಿನದ ೧೫ ರಿಂದ ೨೦ ನಿಮಿಷ ನಿಮ್ಮದೇ ಸೆಲ ರೆಫ್ಲೆಕ್ಷನ್ ಆಗಿರಲಿ. ಅಂದರೆ ಈ ಸಮಯದಲ್ಲಿ ಮೌನದಿಂದಿರಿ
ಹಿತವಾಗಿರಿ. ನೆಮ್ಮದಿಯಾಗಿರುವ ಪ್ರಯತ್ನ ಮಾಡಿ. ಇದು ನಿಮ್ಮೊಳಕ್ಕೆ ಅರಿವನ್ನು ತುಂಬಿಸುತ್ತ ಬೂಸ್ಟರ್ ಡೋಸ್‌ನಂತೆ
ಕೆಲಸ ಮಾಡುತ್ತದೆ.

೫) ಪ್ರತಿದಿನದ ಬೆಳಗು ನಿಮ್ಮಲ್ಲಿ ಎರಡು ವಿಚಾರಗಳನ್ನು ಮೂಡಿಸಲಿ. ಒಂದು ಈ ಹೊತ್ತು ನನ್ನೊಳಗೆ ಯಾವುದೇ ವಿಷಯಕ್ಕೂ ಸಂದರ್ಭಕ್ಕೂ ಎಂತಹದೇ ವಿಚಾರವೇ ಬರಲಿ, ವಿಪರೀತವೆನಿಸುವ ಭಾವನೆಗಳು ಹೊರ ಬರದಿರಲಿ ಎಂದು.
ಮತ್ತೊಂದು ಕೆಲವೊಂದು ಭಾವಗಳು ಹೊರಬರಲಿ ತೊಂದರೆ ಇಲ್ಲ ಎಂದು. ಇದರಿಂದ ನೀವು ಜೀವಿಸುವ ಪ್ರತಿಕ್ಷಣಗಳಿಗೂ ನೀವು ಗಮನ ನೀಡಬಹುದು.

೬) ನನ್ನೊಳಗೆ ಆತಂಕ ಮೂಡುತ್ತಾ ಇದೆ; ಯಾಕೋ ಈ ವಿಚಾರವನ್ನು ಎದುರಿಸಲು ನನ್ನೊಳಗೆ ಶಕ್ತಿ ಕಡಿಮೆಯಾಗು
ತ್ತಿದೆ ಎಂಬಂಥ ಅನಿಸಿಕೆ ನಿಮ್ಮನ್ನು ಆವರಿಸಿದ ಕೂಡಲೇ ಆ ವಿಚಾರವನ್ನು ಸರಿದೂಗಿಸಲು ಪ್ರಯತ್ನಿಸಿ. ಸತತ ಕೆಲಸದ
ನಡುವೆ ಎರಡು ಮೂರು ನಿಮಿಷಗಳ ಕಾಲ ಸೃಜನಾತ್ಮಕತೆಗೊಂದು ಪುಟ್ಟ ವಿರಾಮವಿರಲಿ.

ನಿಮ್ಮಲ್ಲಿ ಸ್ವಯಂ ಅರಿವು ಹೆಚ್ಚಾಗಿದ್ದರೆ ನಿಮ್ಮದೇ ಬಗೆಗಿನ ನೆಗೆಟಿವ್ ಅಂಶಗಳ ಅರಿವು ನಿಮ್ಮವಾಗಿರುತ್ತದೆ. ಅದನ್ನು
ಒಪ್ಪಿಕೊಳ್ಳುವ ಸವಾಲು ನಿಮ್ಮದೇ ಆಗಿರುತ್ತದೆ. ಅದನ್ನು ವಿವೇಕಯುತವಾಗಿ ನಿಭಾಯಿಸಬೇಕು ಅಷ್ಟೇ. ಸ್ವಯಂ
ಅರಿವೆಂದರೆ ನಮ್ಮೊಳಗಿನ ಆಲೋಚನೆ ಭಾವನೆಗಳನ್ನು ಗುರುತಿಸಿ ವಾಸ್ತವಕ್ಕೂ ಅವುಗಳಿಗೂ ಸಂಬಂಧ ಸರಿದೂಗುತ್ತ
ದೆಯೆ ಎಂದು ಅವಲೋಕಿಸುವುದು. ನಾವೆಲ್ಲ ಬಹಳ ಮುಖ್ಯವಾಗಿ ಮೈಗೂಡಿಸಿಕೊಳ್ಳಬೇಕಾದ ಮನೋವೈಜ್ಞಾನಿಕ
ಗುಣವಿದು. ಇದು ನಮ್ಮೊಳಗಿನ ಭಾವನೆಗಳನ್ನು ನಿಯಂತ್ರಿಸುತ್ತದೆ, ದ್ವಂದ್ವಗಳನ್ನು ನಿವಾರಿಸುತ್ತದೆ, ನಮ್ಮದೇ ಸ್ಟ್ರೆಂತ್ ಹಾಗೂ ವೀಕ್ನೆಸ್‌ಗಳನ್ನು ಗುರುತಿಸಿಕೊಳ್ಳಲು ಸಹಕಾರಿಯಾಗಿ ನಿಲ್ಲುತ್ತದೆ.

ನಮ್ಮಲ್ಲಿ ಅನೇಕರಿಗೆ ವಿಕರ್ಷಣೆ ಹೆಚ್ಚು, ತಲೆ ತುಂಬಾ ಬೇಡದ ಹೊರೆಗಳನ್ನು ಹೊತ್ತು ಓಡಾಡುತ್ತಿರುತ್ತೇವೆ. ಇದಕ್ಕೂ ಉತ್ತರ ಸ್ವಯಂ ಅರಿವು. ಸ್ವಯಂ ಅರಿವು ಬೇಕಿರುವುದನ್ನು ಒಳಗೊಳ್ಳುತ್ತ ಬೇಡದಿರುವುದನ್ನು ತೊಡೆದು ಹಾಕುತ್ತದೆ. ಈ ತೊಡೆದು ಹಾಕುವ ಪ್ರಕ್ರಿಯೆ ನಮಗೆ ಬೇಕಿರುವ ವಿಶೇಷ ಅವಶ್ಯಕತೆಯಾಗಿದೆ. ನಾವೆಲ್ಲ ಮನುಷ್ಯರು ಹೆಚ್ಚೇ ಭಾವನ ಜೀವಿಗಳು. ನಮ್ಮ ಆಸೆಗಳನ್ನು ಭಾವನೆಗಳನ್ನು ತಣಿಸುವುದು ಹೆಚ್ಚೇ ಕ್ಲಿಷ್ಟಕರ ಕೆಲಸ. ಇವುಗಳ ಆಳಕ್ಕೆ ಹೆಚ್ಚು ಇಳಿದಷ್ಟೂ ಮನಸ್ಸು ಕಲಸು ಮೇಲೋಗರ. ಯಾವುದೋ ಸಿನಿಮಾ ನೋಡುತ್ತಿರುತ್ತೇವೆ ಪಕ್ಕದಲ್ಲಿ ಕುಳಿತ ಗಂಡನೊಟ್ಟಿಗೋ ಹೆಂಡತಿಯೊಟ್ಟಿಗೋ ಸಣ್ಣದೊಂದು ಜಗಳವಾಗಿ ಬಿಡುತ್ತದೆ. ಆ ಜಗಳದ ಕಾರಣಕ್ಕೆ ನಮಗೆ ಸಿನಿಮಾ ಇಷ್ಟವಾಗುವುದಿಲ್ಲ.

ಹೀಗೆ ಎಮೋಷನಲ್ ಬರ್ಡನ್ ಮನಸ್ಸನ್ನು ಮಣ ಭಾರವಾಗಿಸಿಬಿಡುತ್ತದೆ. ಭಾವನೆಗಳೇನೋ ನಮ್ಮ ಬದುಕನ್ನು ಬಣ್ಣವಾಗಿಸು ವುದು ಅರ್ಥಪೂರ್ಣವಾಗಿಸುವುದು ನಿಜ. ಅದೇ ರೀತಿ ಅವೇ = ಭಾವನೆಗಳು ನಮ್ಮನ್ನು ಮೂರ್ಖರನ್ನಾಗಿಯೂ ಅವಿವೇಕಿಗ ಳನ್ನಾಗಿಯೂ ವರ್ತಿಸುವಂತೆ ಮಾಡಿಬಿಡುತ್ತವೆ ಆಗೆಲ್ಲ ನಮಗೆ ಅಗತ್ಯವಾಗಿ ಬೇಕಿರುವುದೇ ಸ್ವಯಂ ಅರಿವು. ಸ್ವಯಂ ಅರಿವೆಂದರೆ ಇದೇ ನಿಮ್ಮ ಸಮಸ್ಯೆಗಳನ್ನು ಸವಾಲುಗಳನ್ನಾಗಿಸಿ ಅವಕಾಶಗಳನ್ನಾಗಿ ಪರಿವರ್ತಿಸಿ ಬೆಳೆಯುವುದು! ಔಛಿಠಿo Z ಜ್ಟಟಡಿ m…!

ಸ್ವಯಂಅರಿವಿನೊಂದಿಗೆ …