Saturday, 23rd November 2024

ಕಲರ್‌ ಫುಲ್‌ ಜರ್ನಿಯ ತಿಮ್ಮಯ್ಯ

ಹಿರಿಯ ನಟ ಅನಂತ್‌ನಾಗ್ ಆಯ್ದುಕೊಳ್ಳುವ ಪಾತ್ರಗಳು ಮಹತ್ವದ್ದೇ ಆಗಿರುತ್ತವೆ. ಅದರಲ್ಲಿ ಗಟ್ಟಿತನವಿರುತ್ತದೆ. ಚಿತ್ರದಲ್ಲಿ ಒಳ್ಳೆಯ ಕಥೆಯೂ ಇರುತ್ತದೆ. ಅಂತಹದ್ದೇ ಕಥೆಯ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್‌ನಾಗ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೊಸ ಅವತಾರದಲ್ಲಿ ಕಂಗೊಳಿಸಿದ್ದಾರೆ. ಕಥೆಯ ಆಯ್ಕೆಯ ಸ್ವಾರಸ್ಯ ಹಾಗೂ ಪಾತ್ರದ ಕುರಿತಂತೆ ಅನಂತ್‌ನಾಗ್ ವಿ.ಸಿನಿಮಾಸ್ ನೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ. ಸಂಜಯ್ ಶರ್ಮ ರಚಿಸಿದ ಕಥೆ ಇಂಗ್ಲೀಷ್‌ನಲ್ಲಿತ್ತು. ಸ್ಟೋರಿ ಓದುತ್ತಾ ಸ್ವಾರಸ್ಯಕರ ಅನ್ನಿಸಿ ತು. ಅಚ್ಚರಿಯೂ ಆಯಿತು.

ಇದು ಕೊಡಗಿನಲ್ಲಿ ನಡೆಯುವ ಕಥೆ ಎಂದಾಗ ಮತ್ತಷ್ಟು ಕುತೂಹಲ ಕೆರಳಿತು. ಮುಂಬೈ ನಲ್ಲಿದ್ದ ಸಂಜಯ್ ಶರ್ಮ ಅವರಿಗೂ ಈ ಕಥೆಗೂ ಹೇಗೆ ಸಂಬಂಧ ಎಂದು ಯೋಚಿಸಿದೆ. ಒಮ್ಮೆ ಅವರನ್ನು ಭೇಟಿ ಮಾಡಿ ಮಾತನಾಡಬೇಕು ಎಂದುಕೊಂಡೆ. ಅಂತೆಯೇ ಅವ ರೊಂದಿಗೆ ಮಾತನಾಡಿದಾಗ ಅವರು ನಮ್ಮ ಬೆಂಗಳೂರಿನವರೇ ಎಂದು ತಿಳಿದು ಸಂತೋಷ ವಾಯಿತು.

ಹಲವು ಜಾಹೀರಾತು ಹಾಗೂ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದ ಸಂಜಯ್ ಶರ್ಮ ಹೆಣೆದ ಕಥೆ ನನಗೆ ತುಂಬಾ ಹಿಡಿಸಿತು. ಅದರಲ್ಲಿಯೂ ಅವರು ನನಗಾಗಿ ಸೃಷ್ಟಿಸಿದ ಪಾತ್ರ ಮನಸಿಗೆ ತುಂಬಾ ಹಿಡಿಸಿತು. ನಾನು ಇದುವರೆಗೆ ಕೆಲವು ಆಯ್ದು ಪಾತ್ರಗಳಲ್ಲಿ ನಟಿಸಿದ್ದೆ. ಇದು ನನಗೆ ಸಿಕ್ಕಿರುವ ಅಪರೂಪದ ಕಥೆ ಮತ್ತು ಪಾತ್ರವಾಗಿದೆ.

ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ನಾನು ತಾತ ತಿಮ್ಮಯ್ಯನ ಪಾತ್ರದಲ್ಲಿ ನಟಿಸಿ ದ್ದೇನೆ. ತುಂಬಾ ವಿಭಿನ್ನವಾದ ಪಾತ್ರವದು. ಮೊದಲು ಕಥೆ ಓದಿದಾಗ ಹೃದಯ ತುಂಬಿ ಬಂತು. ಅದಕ್ಕೂ ಹೆಚ್ಚಾಗಿ ನನ್ನ ಪಾತ್ರದ ಬಗ್ಗೆ ಮತ್ಸರವೂ ಹುಟ್ಟಿತು. ನಾವು
ಯಾರು ಇಂತಹ ಬದುಕು ಕಂಡಿಲ್ಲ ಯಾಕೆ ಅಂತ. ತಿಮ್ಮಯ್ಯನ ಜೀವನ ಬಲು ಸೊಗಸು ಎನ್ನಿಸಿತು.

ವಿವಿಧ ಆಯಾಮದ ಪಾತ್ರವದು. ತಿಮ್ಮಯ್ಯ ಶ್ರಿಮಂತ, ಹಾಗಾಗಿ ಅವನಲ್ಲಿ ಅಹಂ ಇರುತ್ತದೆ. ಜತೆಗೆ ದುಷ್ಟತನವೂ ತುಂಬಿರುತ್ತದೆ. ಆತ ನಾನೇ ರಾಜ ಎಂಬ ಮನೋಭಾವ ದಿಂದ ಮನಸಿಗೆ ತೋಚಿದಂತೆ ಬದುಕು ಸಾಗಿಸುತ್ತಿರುತ್ತಾನೆ. ಇಂತಹ ಪಾತ್ರದಲ್ಲಿ ನಾನು ನಟಿಸಿದ್ದು ತುಂಬಾ ಖುಷಿಕೊಟ್ಟಿದೆ. ದಿಗಂತ್ ನನ್ನ ಮೊಮ್ಮಗನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಪಂಚರಂಗಿ, ಗಾಳಿಪಟದ ಬಳಿಕ ನಾವಿಬ್ಬರು ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಿದ್ದೇವೆ ಎಂದು ಅನಂತ್‌ನಾಗ್ ಸಂತಸದಿಂದ
ನುಡಿಯುತ್ತಾರೆ.

ಮತ್ತೆ ಸಿಕ್ಕಿದ ಮಹಾದವಕಾಶ
ತಿಮ್ಮಯ್ಯ ಅಂಡ್ ತಿಮ್ಮ ಚಿತ್ರದಲ್ಲಿ ಮತ್ತೊಮ್ಮೆ ಅನಂತ್‌ನಾಗ್ ಸರ್ ಜತೆಗೆ ನಟಿಸಿದ್ದು ಸಂತಸ ತಂದಿದೆ. ಗಾಳಿಪಟ, ಪಂಚರಂಗಿ ಚಿತ್ರದ ಬಳಿಕ ಮತ್ತೆ ನಮ್ಮಿಬ್ಬರ ಜುಗಲ್‌ಬಂದಿ ಈ ಚಿತ್ರದಲ್ಲಿದೆ.