Thursday, 19th September 2024

ಚೆನ್ನೈ ಗೆಲುವಿಗೆ ರಾಜಸ್ಥಾನ ರಾಯಲ್ಸ್ ತಡೆ ನೀಡುವುದೇ?

ಶಾರ್ಜಾ: ಆರಂಭಿಕ ಪಂದ್ಯದಲ್ಲಿ ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಂಗಳವಾರ ರಾಜಸ್ಥಾನ ರಾಯಲ್ಸ್ ಎದುರಾಳಿ. ಉಭಯ ತಂಡಗಳ ಬಲಾಬಲದಲ್ಲಿ ಚೆನ್ನೈ ಗೆಲುವಿನ ಕುದುರೆ.

ರಾಜಸ್ಥಾನ ತಂಡಕ್ಕೆ ಸ್ಟೀವ್ ಸ್ಮಿತ್ ಸಾರಥ್ಯವಿದ್ದು, ಕನ್ನಡಿಗ ರಾಬಿನ್ ಉತ್ತಪ್ಪ, ವಿಕೆಟ್ ಕೀಪರ್ ಸಂಜೂ ಸ್ಯಾಮ್ಸನ್, ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಹಾಗೂ ಶ್ರೇಯಸ್‍ ಗೋಪಾಲ್ ಸಮರ್ಥ ಬೆಂಬಲ ನೀಡಬೇಕಾಗಿದೆ. ವೇಗಿ ಜೋಫ್ರಾ ಆರ್ಚರ್ ಹಾಗೂ ಜಯದೇವ್ ಉನಾದ್ಕತ್  ಬೌಲಿಂಗ್ ವಿಭಾಗವನ್ನು ನಿಭಾಯಿಸಬಲ್ಲರು.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವವೇ ಗೆಲುವಿನ ಟಾನಿಕ್. ಕಳೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ಆಂಬಟಿ ರಾಯುಡು ಗೆಲುವಿನ ಉಡುಗೊರೆ ನೀಡಿದ್ದರು. ಹಾಗಾಗಿ, ಧೋನಿಯ ಆಟಕ್ಕಾಗಿ ಅಭಿಮಾನಿ ಗಳು ಇನ್ನೂ ಕಾಯಬೇಕಾಗಿದೆ. ಕಳೆದ ಪಂದ್ಯದಲ್ಲಿ ಅಗ್ಗದಲ್ಲಿ ವಿಕೆಟ್ ಒಪ್ಪಿಸಿದ್ದ ಮುರಳಿ ವಿಜಯ್ ಈ ಬಾರಿ ರನ್ ಹರಿಸುವರೇ ಎಂದು ಕಾದು ನೋಡಬೇಕಿದೆ.

ಸಂಭಾವ್ಯ ಹನ್ನೊಂದರ ಬಳಗ ಇಂತಿದೆ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್(ನಾ), ಡೇವಿಡ್ ಮಿಲ್ಲರ್, ಸಂಜೂ ಸ್ಯಾಮ್ಸನ್ (ವಿ.ಕೀ), ಟಾಮ್ ಕುರ್ರನ್, ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಅಂಕಿತ್ ರಾಜಪೂತ್/ವರುಣ್ ಆರನ್, ಕಾರ್ತಿಕ್ ತ್ಯಾಗಿ.

ಚೆನ್ನೈ ಸೂಪರ್ ಕಿಂಗ್ಸ್: ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಆಂಬಟಿ ರಾಯುಡು, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ(ನಾ/ಕೀ), ರವೀಂದ್ರ ಜಡೇಜಾ,  ಸ್ಯಾಮ್ ಕುರ್ರನ್, ದೀಪಕ್ ಚಹರ್, ಪಿಯೂ಼ಷ್ ಚಾವ್ಲಾ, ಲುಂಗಿ ಎನ್‍ಜಿಡಿ.