*ವರುಣ್ ಚಕ್ರವತೀ ಪಂಜಾಬ್ ಪರ ಆಡುವಾಗ ಕೋಲ್ಕತಾಗೆ ಮೊದಲ ಓವರಿನಲ್ಲಿ 25 ರನ್ ನೀಡಿದ್ದರು.
ಇಂದು ಕೋಲ್ಕತಾ ಪರ ಆಡುವಾ, ಸನ್‌ರೈಸರ‍್ಸ್’ಗೆ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟರು.
ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈರ‍್ಸ್ ತಂಡ ತನ್ನ ಮೊದಲ ಗೆಲುವು ಸಾಧಿಸಿದೆ. ಸನ್‌ರೈಸರ‍್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರೂ, ಸವಾಲಿನ ಮೊತ್ತ ಪೇರಿಸಲಾಗದೆ ಪಶ್ಚಾತ್ತಾಪಪಟ್ಟಿತು.
ಕೋಲ್ಕತಾ ಪರ ಯುವ ಆರಂಭಿಕ ಶುಬ್ಮನ್ ಗಿಲ್ ಅವರ ಅಜೇಯ ಅರ್ಧಶತಕ (ಐದು ಬೌಂಡರಿ, ಎರಡು ಸಿಕ್ಸರ್) ಕೋಲ್ಕತಾ ಗೆಲುವಿನ ಮುಖ್ಯ ಹೈಲೈಟ್. ಅವರಿಗೆ ಇಯಾನ್ ಮಾರ್ಗನ್ ಹಾಗೂ ನಿತೀಶ್ ರಾಣಾ ಅವರ ಸಮರ್ಥ ಬೆಂಬಲ ಸಿಕ್ಕಿತು. ಕೋಲ್ಕತಾ ಇನ್ನಿಂಗ್ಸ್’ನಲ್ಲಿ ಒಟ್ಟು ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಹೊಮ್ಮಿದವು.ಹೈದರಾಬಾದ್ ತಂಡದ ಬೌಲಿಂಗ್ ನಲ್ಲಿ ಮೊನಚಿದ್ದರೂ, ಸವಾಲಿನ ಮೊತ್ತ ದಾಖಲಾಗದ ಗೆಲುವು ಮರೀಚಿಕೆಯಾಯಿತು.ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈರ‍್ಸ್ ಹೈದರಾಬಾದ್ ಪರ ಯಾವುದೇ ಆಟಗಾರನಿಂದ ದೀರ್ಘ ಇನ್ನಿಂಗ್ಸ್ ಬರಲಿಲ್ಲ. ವನ್‌ಡೌನ್ ಆಟಗಾರ ಕನ್ನಡಿಗ ಮನೀಶ್ ಪಾಂಡೆ ಮಾತ್ರ ಅರ್ಧಶತಕ ಗಳಿಸಿ, ಮಿಂಚಿದರು. ನಾಯಕ ಡೇವಿಡ್ ವಾರ್ನರ್ 36 ಹಾಗೂ ಕೀಪರ್ ಬ್ಯಾಟ್ಸ್ಮನ್ ವೃದ್ದಿಮಾನ್ ಸಾಹ 30 ಬಾರಿಸಿ, ತಮ್ಮ ಕೊಡುಗೆ ಸಲ್ಲಿಸಿದರು.
ಕೋಲ್ಕತಾ ತಂಡದAತೆ ಇದರಲ್ಲೂ ನಾಲ್ಕು ಸಿಕ್ಕರ್ ಹೊರಹೊಮ್ಮಿದ್ದೇ ವಿಶೇಷ. ಸ್ಪಿನ್ನರುಗಳ ಸಹಾಯ ನೀಡುವ ಈ ಪಿಚ್‌ನಲ್ಲಿ ಉಭಯ ತಂಡಗಳ ಸ್ಪಿನ್ನರುಗಳು ಒಟ್ಟು ಮೂರು ವಿಕೆಟ್ ಕಬಳಿಸಲಷ್ಟೇ ಸಫಲರಾದರು. ಟಿ.ನಟರಾಜನ್, ರಶೀದ್ ಖಾನ್ ಮತ್ತು ವರುಣ್ ಚಕ್ರವರ್ತಿ ಮುಂತಾದವರು ತಲಾ ಒಂದು ವಿಕೆಟ್ ಕಬಳಿಸಿದರು.
ಉಭಯ ತಂಡಗಳು ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದವು. ಕೋಲ್ಕತಾ ಪರ ಈ ಪಂದ್ಯಕ್ಕೆ ಕಮಲೇಶ್ ನಾಗರ ಕೋಟಿ ಪಾದಾರ್ಪಣೆ ಮಾಡಿದ್ದರೆ, ವರುಣ್ ಚಕ್ರವರ್ತಿ ಕೋಲ್ಕತಾ ಪರ ಮೊದಲ ಪಂದ್ಯವನ್ನಾಡಿದರು. ಸನ್‌ರೈಸರ‍್ಸ್ ಹೈದರಾಬಾದ್ ತಂಡದಲ್ಲಿ ಮಿಚೆಲ್ ಮಾರ್ಷ್ ಬದಲು ಮೊಹಮ್ಮದ್ ನಬಿ, ವಿಜಯ್ ಶಂಕರ್ ಬದಲು ವೃದ್ದಿಮಾನ್ ಸಹ ಹಾಗೂ ಸಂದೀಪ್ ಶರ್ಮಾ ಬದಲಿ ಕೆ.ಖಲೀಲ್ ಅಹಮ್ಮದ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ಸ್ಕೋರ್ ವಿವರ
ಸನ್‌ರೈರ‍್ಸ್ ಹೈದರಾಬಾದ್ 142/4
ಮನೀಶ್ ಪಾಂಡೆ 51, ಡೇವಿಡ್ ವಾರ್ನರ್ 36, ವೃದ್ದಿಮಾನ್ ಸಾಹ 30.
ಬೌಲಿಂಗ್: ಪ್ಯಾಟ್ ಕಮಿನ್ಸ್ 19/1, ವರುಣ್ ಚಕ್ರವರ್ತಿ 25/1, ಆಂಡ್ರೆ ರಸೆಲ್ 16/1.
ಕೋಲ್ಕತಾ ನೈಟ್ ರೈರ‍್ಸ್ 145/3
ಶುಭ್ಮನ್ ಗಿಲ್ 70, ಇಯಾನ್ ಮಾರ್ಗನ್ 52, ನಿತೀಶ್ ರಾಣಾ 26.
ಬೌಲಿಂಗ್: ರಶೀದ್ ಖಾನ್ 25/1, ಟಿ.ನಟರಾಜನ್ 27/1, ಕೆ.ಖಲೀಲ್ ಅಹ್ಮದ್ 28/1.
ಪಂದ್ಯಶ್ರೇಷ್ಠ: ಶುಬ್ಮನ್ ಗಿಲ್.