ಬಾರ್ಬಡೋಸ್: ವೆಸ್ಟ್ ಇಂಡೀಸ್ – ಇಂಗ್ಲೆಂಡ್ ನಡುವಿನ T20 ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ನರು ಆಲ್ ರೌಂಡ್ ಪ್ರದರ್ಶನ ನೀಡಿ 4 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ್ದಾರೆ.
ಜೋಸ್ ಬಟ್ಲರ್ ಪಡೆ ಫಿಲಿಪ್ ಸಾಲ್ಟ್ ಅವರ 40 ರನ್ ಹಾಗೂ ನಾಯಕ ಬಟ್ಲರ್ ಅವರ 39 ರನ್ ಗಳ ಸ್ಫೋಟಕ ಆಟದಿಂದ ಉತ್ತಮ ಆರಂಭ ಪಡೆಯಿತು.
ಬಳಿಕ ಬಂದ ವಿಲ್ ಜ್ಯಾಕ್ಸ್ ಕೇವಲ 17 ರನ್ ಗಳಿಸಿ ಅಲ್ಜಾರಿ ಜೋಸೆಫ್ ಅವರಿಗೆ ವಿಕೆಟ್ ಒಪ್ಪಿಸಿದರು. ಡಕೆಟ್, ಹ್ಯಾರಿ ಬ್ರೂಕ್ ಸೇರಿದಂತೆ ಇತರೆ ಆಟಗಾರರು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿದರು. ಲಿವಿಂಗ್ ಸ್ಟೋನ್ 27 ರನ್ ಗಳಿಸಿ ಹೋರಾಟದ ಮೊತ್ತವನ್ನು ಪೇರಿಸುವಲ್ಲಿ ನೆರವಾದರು. ಅಂತಿಮವಾಗಿ 19.3 ಓವರ್ ನಲ್ಲಿ ಇಂಗ್ಲೆಂಡ್ 171 ರನ್ ಗಳಿಗೆ ಸರ್ವಪತನವಾಯಿತು.
ವಿಂಡೀಸ್ ತಂಡಕ್ಕೆ ಆರಂಭಿಕವಾಗಿ ಮೂವರು ಆಟಗಾರರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಬ್ರಾಂಡನ್ ಕಿಂಗ್(22 ರನ್) ಕೈಲ್ ಮೇಯರ್ಸ್(35 ರನ್) ,ಶಾಯ್ ಹೋಪ್(36) ರನ್ ಗಳಿಸುವ ಮೂಲಕ ಗುರಿ ಬೆನ್ನಟ್ಟಲು ನೆರವಾದರು.
ಯುವ ಲೆಗ್ ಸಿನ್ನರ್ ರೆಹಾನ್ ಅಹ್ಮದ್ ನಿಕೋಲಸ್ ಪೂರನ್, ಶಾಯ್ ಹೋಪ್, ರೊಮಾರಿಯೋ ಶೆಫರ್ಡ್ ಅವರ ವಿಕೆಟ್ ಪಡೆದು ಮೂಲಕ ರನ್ ಚೇಸ್ ಗೆ ಬ್ರೇಕ್ ಹಾಕಿದರು.
ನಾಯಕ ರೋವ್ಮನ್ ಪೊವೆಲ್, ಆಂಡ್ರೆ ರಸೆಲ್ ಸ್ಫೋಟಕ ಆಟದಿಂದ 11 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದರು. ರೋವ್ಮನ್ ಪೊವೆಲ್ 15 ಎಸೆತದಲ್ಲಿ 31 ರನ್ ಸಿಡಿಸಿದರೆ, ರಸೆಲ್ 14 ಎಸೆತದಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
ಅಂತಿಮ ವಿಂಡೀಸ್ 18.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 172ರ ಗುರಿಯನ್ನು ಮುಟ್ಟಿತು. ಈ ಹಿಂದೆ 2014 ರನ್ ಇಂಗ್ಲೆಂಡ್ ವಿರುದ್ದವೇ 155 ರನ್ ಚೇಸ್ ಮಾಡಿತ್ತು.
ಎರಡು ವರ್ಷದ ಬಳಿಕ ವಿಂಡೀಸ್ ತಂಡದಲ್ಲಿ ಕಾಣಿಸಿಕೊಂಡ ರಸೆಲ್ ಆಲ್ ರೌಂಡರ್ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.