Saturday, 23rd November 2024

ಆಹಾರದಲ್ಲಿ ಔಷಧ ಉಪನ್ಯಾಸ ಕಾರ್ಯಕ್ರಮ

ಕೊಲ್ಹಾರ: ರಾಸಾಯನಿಕ ಬಳಕೆ ಇಲ್ಲದ ಸಮತೋಲನ ಆಹಾರ ಪದ್ಧತಿಯಿಂದ ಮಾನವ ಸದೃಢ ಆರೋಗ್ಯ ಹೊಂದಬಹುದು ಎಂದು ಪ್ರಕೃತಿ ಚಿಕಿತ್ಸಾ ತಜ್ಞ ಪಾರಂಪರಿಕ ವೈದ್ಯ ಡಾ.ಹಣಮಂತ ಮಳಲಿ ಹೇಳಿದರು.

ಪಟ್ಟಣದ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ “ಆಹಾರದಲ್ಲಿ ಔಷದ” ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು ಅನಾದಿಕಾಲದಿಂದಲೂ ಮಾನವನಿಗೆ ಆಹಾರವೇ ಔಷಧವಾಗಿತ್ತು‌ ಇದರಿಂದ ಸದೃಢ ಆರೋಗ್ಯ ಹೊಂದಿ ಮನುಷ್ಯ ಬಹುಕಾಲ ಜೀವಿಸುತ್ತಿದ್ದ ಪ್ರಸ್ತುತ ಒತ್ತಡದ ಜೀವನ ಪದ್ಧತಿಯಲ್ಲಿ ಮನುಷ್ಯ ಆಹಾರದ ಬಳಕೆಯಲ್ಲಿ ವ್ಯತ್ಯಾಸವಾಗುವ ಮೂಲಕ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಎಂದು ಅವರು ಹೇಳಿದರು.

ಪ್ರಸ್ತುತ ರಾಸಾಯನಿಕ ಬಳಕೆಯಿಂದ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಹಾಗಾಗಿ ನಾವುಗಳು ಸೇವಿಸುವ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಶುದ್ಧ ಆಹಾರ ಹಾಗೂ ವನಸ್ಪತಿಗಳಲ್ಲಿ ರೋಗ ನಿರ್ಮೂಲನೆಯ ಶಕ್ತಿ ಇರುವುದನ್ನು ಅರಿಯಬೇಕು. ದೇಹಕ್ಕೆ ಬರುವ ಬಹುತೇಕ ಖಾಯಿಲೆಗಳನ್ನು ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು ಹಾಗೂ ನಿರಂತರವಾಗಿ ಸೇವಿಸುವ ಮೂಲಕ ಖಾಯಿಲೆಗಳ ನಿರ್ಮೂಲನ ಮಾಡಬಹುದು. ಅಡಿಯಿಂದ ಮುಡಿಯವರೆಗೆ ಆವರಿಸುವ ನೂರಾರು ರೋಗಗಳಿಗೆ ಮನೆ ಔಷಧಿಯಿಂದ ಗುಣ ಪಡಿಸುವ ಕ್ರಮಗಳನ್ನು ಗಮನಿಸಿ ಪಾಲನೆ ಮಾಡಿದಲ್ಲಿ ರೋಗಗಳನ್ನು ತಳದಿಂದಲೇ ಹೊಡೆದೋಡಿಸಬಹುದು ಎಂದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.