Wednesday, 11th December 2024

ಇಂದು ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಕೋಲ್ಕತಾ: ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್‌.

ಮುಂಬೈ ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ.

ಕೆಕೆಆರ್‌ 2 ಬಾರಿಯ ಮಾಜಿ ಚಾಂಪಿಯನ್‌ ಆಗಿರುವ ಅದು 3 ವರ್ಷಗಳಲ್ಲಿ ಮೊದಲ ಸಲ ಪ್ಲೇ ಆಫ್‌ ಪ್ರವೇಶದ ಹೊಸ್ತಿಲಲ್ಲಿದೆ. 11ರಲ್ಲಿ ಎಂಟನ್ನು ಗೆದ್ದು ಅಂಕಪಟ್ಟಿಯ ಅಗ್ರಸ್ಥಾನ ಅಲಂಕರಿಸುವ ಶ್ರೇಯಸ್‌ ಅಯ್ಯರ್‌ ಪಡೆ, ತವರಲ್ಲೇ ಮುಂದಿನ ಸುತ್ತಿನ ಸಂಭ್ರಮ ಆಚರಿಸುವ ಯೋಜನೆ ಹಾಕಿಕೊಂಡಿರುವುದು ಸ್ಪಷ್ಟ.

ಕೋಲ್ಕತಾ ನೈಟ್‌ರೈಡರ್ ಸಾಲು ಸಾಲು ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ತಂಡ. 8 ಸಲ ಮೊದಲು ಬ್ಯಾಟಿಂಗ್‌ ನಡೆಸಿದ್ದು, 6 ಸಲ 200 ಪ್ಲಸ್‌ ರನ್‌ ಪೇರಿಸಿದೆ. ಸುನೀಲ್‌ ನಾರಾಯಣ್‌-ಫಿಲ್‌ ಸಾಲ್ಟ್ ಅವರದು ಸಾಲಿಡ್‌ ಓಪನಿಂಗ್‌ ಜೋಡಿ. ವೆಸ್ಟ್‌ ಇಂಡೀಸ್‌ ಸವ್ಯ ಸಾಚಿ ಸುನೀಲ್‌ ನಾರಾಯಣ್‌ ಕೆಕೆಆರ್‌ ಪರ ಸರ್ವಾಧಿಕ 461 ರನ್‌ ಬಾರಿಸದ್ದಾರೆ. ಒಂದು ಶತಕ, 3 ಅರ್ಧ ಶತಕ ಸೇರಿದೆ. ರಘುವಂಶಿ, ರಸೆಲ್‌, ರಿಂಕು, ಅಯ್ಯರ್‌ದ್ವಯರು, ರಮಣ್‌ ದೀಪ್‌ ಅವರೆಲ್ಲ ಕೆಕೆಆರ್‌ ಬ್ಯಾಟಿಂಗ್‌ ಸರದಿಯನ್ನು ಬೆಳೆಸಬಲ್ಲರು. ಕೆಕೆಆರ್‌ ಬೌಲಿಂಗ್‌ ಕೂಡ ವೈವಿಧ್ಯ ಮಯ. ಇಲ್ಲಿ ಸ್ಪಿನ್ನರ್‌ಗಳೇ ಪ್ರಬಲ ಅಸ್ತ್ರವಾಗಿದ್ದಾರೆ.

ಮುಂಬೈ ಇಂಡಿಯನ್ಸ್‌ ನಾಕತ್ವದ ವಿವಾದ, ಗುಂಪುಗಾರಿಕೆ, ಒಳ ರಾಜಕೀಯದಿಂದಲೇ ಪಾತಾಳ ಮುಟ್ಟಿದ್ದು ಸ್ಪಷ್ಟ. ರೋಹಿತ್‌ ಶರ್ಮ, ಸೂರ್ಯ ಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ ಇವರಲ್ಲಿ ಪ್ರಮುಖರು.