Saturday, 14th December 2024

‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್​ ಬಿಡುಗಡೆ ದಿನಾಂಕ ಘೋಷಣೆ

ಅಮೆರಿಕ: ವಿಶ್ವದ ಜನಪ್ರಿಯ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್​ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ವೆಬ್ ಸರಣಿಯ ಟ್ರೈಲರ್ ಸಹ ಇದೀಗ ಬಿಡುಗಡೆ ಆಗಿದೆ. ‘ಗೇಮ್ ಆಫ್ ಥ್ರೋನ್ಸ್’ 2019 ರಲ್ಲಿ ಕೊನೆಯಾಯಿತು. ಬಳಿಕ ‘ಗೇಮ್ ಆಫ್ ಥ್ರೊನ್ಸ್​’ನ ಪ್ರೀಕ್ವೆಲ್ ಬಿಡುಗಡೆ ಆಗುತ್ತದೆಂದು ಘೋಷಿಸಲಾಯ್ತು.

ಅಂತೆಯೇ, 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಬಿಡುಗಡೆ ಆಯ್ತು. ಮೊದಲ ಸೀಸನ್​ನಲ್ಲಿಯೇ ಗಮನ ಸೆಳೆದಿದ್ದ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ.

ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2ರ ಟ್ರೈಲರ್ ಬಿಡುಗಡೆ ಆಗಿದ್ದು, ಅದರ ಜೊತೆಗೆ ವೆಬ್ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಜೂನ್ 16 ರಂದು ಎಚ್​ಬಿಓ ಮ್ಯಾಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಹಾಟ್​ಸ್ಟಾರ್​ನಲ್ಲಿಯೂ ಬಿಡುಗಡೆ ಆಗುವ ಸಾಧ್ಯತೆ ಇದೆ. ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಭಾರಿ ವೀಕ್ಷಣೆಯನ್ನು ಪಡೆದುಕೊಂಡಿತ್ತು. ಅದೇ ರೀತಿ ಎರಡನೇ ಸೀಸನ್ ಸಹ ಭಾರಿ ಜನಪ್ರಿಯತೆ ಗಳಿಸುವ ನಿರೀಕ್ಷೆ ಇದೆ.