ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
‘ಏಕಃ ಪಾಪಾನಿ ಕುರುತೇ ಫಲಂ ಭುಂಕ್ತೇ ಮಹಾಜನಾಃ’ ಎನ್ನುವುದು ಸಂಸ್ಕೃತ ಸುಭಾಷಿತದ ಒಂದು ಚರಣ. ಪಾಪ ಕಾರ್ಯವನ್ನು ಯಾರೋ ಒಬ್ಬರು ಮಾಡಿಬಿಡುತ್ತಾರೆ ಆದರೆ ಅದರ ದುಷಲವನ್ನು, ಪರಿಣಾಮವನ್ನು ಅನೇಕರು ಅಥವಾ ಇಡೀ ಸಮಾಜ ಅನುಭವಿಸಬೇಕಾಗುತ್ತದೆ ಎನ್ನುವುದು ಈ ಸುಭಾ ಷಿತದ ಅರ್ಥ.
ವಿಜಯ ಮಲ್ಯ, ನೀರವ್ ಮೋದಿ ಮುಂತಾದ ಅಂತಾರಾಷ್ಟ್ರೀಯ ಅಪರಾಧಿಗಳಿಂದ ಹಿಡಿದು ನಿತ್ಯಾನಂದ, ಮುರುಘಾ ಶ್ರೀ, ಕೈಲಾಸಿ ನಿತ್ಯಾನಂದ ಮತ್ತು
ಪ್ರಚಲಿತ ಲೈಂಗಿಕ ದೌರ್ಜನ್ಯದಂತಾ ಗಂಭೀರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣನವರೆಗೆ ಈ ಮಾತು ಅತ್ಯಂತ ಸಮಂಜಸವಾಗಿ ಒಪ್ಪುತ್ತದೆ. (ಇವರೆ ಇನ್ನೂ ಆರೋಪಿಗಳೇ ವಿನಃ ಅಪರಾಧಿಗಳ ಎನ್ನುವುದು ಗಮನ ದಲ್ಲಿರಲಿ) ವಿಜಯ ಮಲ್ಯ, ನೀರವ್ ಮೋದಿ ಮುಂತಾದ ಉದ್ಯೋಗ ಪತಿಗಳು ಆರ್ಥಿಕ ಅಪರಾಧದ ಆರೋಪ ಹೊತ್ತು ದೇಶ ಬಿಟ್ಟು ಓಡಿಹೋದಾಗ ಅವರನ್ನು ನಂಬಿದ್ದ ಮತ್ತು ಯಾವುದೇ ತಪ್ಪು ಮಾಡಿರದ ಸಾವಿರಾರು ನೌಕರರು
ಮತ್ತು ಅವರುಗಳು ಸಾಲ ಪಡೆದಿದ್ದ ಬ್ಯಾಂಕ್ ಸಿಬ್ಬಂದಿಗಳ ಕುಟುಂಬ ವಿನಾಕಾರಣ ಬೀದಿಗೆ ಬಂದು ಬಿಟ್ಟಿದ್ದವು.
ಹಾಗೆಯೇ, ಸಮಾಜದ ಧಾರ್ಮಿಕ ಮುಖ್ಯಸ್ಥರು ಎನ್ನಿಸಿಕೊಂಡಿದ್ದ ಕೆಲವು ಸ್ವಾಮಿಜಿಗಳು ತಮ್ಮ ಸ್ಥಾನ ಮಾನದ ದುರುಪಯೋಗ ಪಡಿಸಿಕೊಂಡು ಸಣ್ಣ ಮಕ್ಕಳನ್ನೂ ಬಿಡದೇ ದೌರ್ಜನ್ಯವೆಸಗಿದ ಆರೋಪ ಹೊತ್ತು ಜೈಲು ಸೇರಿದ್ದರು. ಮಠಾಧೀಶರುಗಳು ಈ ಅಪರಾಧ ಕೃತ್ಯಗಳನ್ನು ವೈಯಕ್ತಿಕವಾಗಿ ಎಸಗಿದ್ದರೂ ಅವಮಾನದ ಪರಿಣಾಮವನ್ನು ಮಾತ್ರ ಇಡೀ ಸಮಾಜ ಅನುಭವಿಸುವಂತಾಯಿತು. ನಿಜವಾಗಿಯೂ ಜಂಗಮರಂತೆ ತ್ರಿವಿಧ ದಾಸೋಹ ಗಳಿಂದ ಸಮಾಜದ ಸೇವೆ ಸಲ್ಲಿಸುತ್ತಿದ್ದ ಇದ್ದ ಸಾವಿರಾರು ಮಠಾಧೀಶರನ್ನೂ ಸಹ ಒಬ್ಬನ ಎಡವಟ್ಟಿನಿಂದ ಸಮಾಜ ಅನುಮಾನದಿಂದ ನೋಡುವ ಹಾಗಾಯಿತು. ಅತ್ಯಾಚಾರ-ಆರೋಪಿ ನಿತ್ಯಾನಂದ ನಮ್ಮ ದೇಶದಿಂದ ಪರಾರಿಯಾಗಿರುವುದು ಮಾತ್ರವಲ್ಲದೇ ಕೈಲಾಸ ಎಂದು ಹೇಸರಿಸುವ ದೇಶವನ್ನೇ ಸ್ಥಾಪಿಸಿ ಅಂತಾರಾಷ್ಟ್ರೀಯ ಕಾನೂನುಗಳಿಗೆ ಸವಾಲಾಗಿ ಸುದ್ದಿಯಲ್ಲಿರುವುದನ್ನು ನೀವೂ ನೋಡಿದ್ದೀರಿ.
ಅವನೇನೋ ಸುಖವಾಗಿ ಇದ್ದಿರಬಹುದು ಆದರೆ ಅವನ ಗ್ಯಾಂಗನ್ನು ಸೇರಿಕೊಂಡ ಅನೇಕ ಮಹಿಳೆಯರು ಮತ್ತು ಯುವಕರ ತಂದೆ ತಾಯಂದಿರು ನಮ್ಮ ಮಕ್ಕಳನ್ನು ನಮಗೆ ವಾಪಸ್ ಕರೆಸಿ ಕೊಡಿ ಎಂದು ಸರಕಾರಗಳ ಮುಂದೆ ಈಗಲೂ ಗೋಗರೆಯುತ್ತಿದ್ದಾರೆ. ಒಬ್ಬ ಮಾಡಿದ ಅಪರಾಧಕ್ಕೆ ಮಾಡಿದವ ನೊಬ್ಬನಲ್ಲದೇ ಸುತ್ತಲಿನ ಬಹಳ ಜನ ಮತ್ತು ಸಮಾಜ ಗಂಭೀರವಾದ ಬೆಲೆ ತೆರಬೇಕಾಗುತ್ತದೆ ಎನ್ನುವುದಕ್ಕೆ ಇತ್ತೀಚಿನ ಒಂದು ಉದಾಹರಣೆಯಾಗಿ ಪ್ರಜ್ವಲ್ ರೇವಣ್ಣನ ಕರ್ಮಕಾಂಡವನ್ನು ನಾವು ಅವಲೋಕಿಸಬಹುದಾಗಿದೆ. ತನ್ನ ಪ್ರಭಾವಶಾಲಿ ಕುಟುಂಬದ ಹಿನ್ನೆಲೆಯನ್ನು ದುರುಪಯೋಗ ಪಡಿಸಿಕೊಂಡು ಅನೇಕ ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯವೆಸಗಿದ್ದಾನೆ ಎನ್ನಲಾದ ಪ್ರಜ್ವಲ ರೇವಣ್ಣ, ದೇಶದ ಕಾನೂನಿಗೆ ಅಂಜಿ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ.
ಮುಂದೊಂದು ದಿನ ಕಾನೂನಿನ ಅಡಿ ಯಲ್ಲಿ ಕಠಿಣಾತಿ ಕಠಿಣ ಸಜೆಯಾದರೆ ಅದು ಅವನು ಮಾಡಿದ ಕರ್ಮ ಅನುಭವಿಸಲಿ ಬಿಡಿ ಎನ್ನಬಹುದಾಗಿತ್ತು.
ಆದರೆ, ಅವನ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಪ್ರಜಾಪ್ರಭುತ್ವದಲ್ಲಿ ಅನೇಕ ಪ್ರಮುಖ ಹುzಗಳನ್ನು ಅನುಭವಿಸಿ, ಸರಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿರುವ ಪ್ರಭಾವಿಗಳು. ಇವರೆಲ್ಲರೂ ಪಾಪ ಏನೂ ತಪ್ಪು ಮಾಡದಿದ್ದರೂ ಈ ಪ್ರಕರಣದಿಂದಾಗಿ ಅವಮಾನ ದಿಂದ ಮನೆಯಿಂದೀಚೆಗೆ ಕಾಲಿಡದ ಪರಿಸ್ಥಿತಿ ಉಂಟಾಯಿತು. ರಾಜಕಾರಣದ ನ್ಯಾಯ – ಅನ್ಯಾಯ ಏನೇ ಇರಲಿ, ಇಂತಹ ವಿಷಯಗಳಲ್ಲಿ ತಮ್ಮ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಅತ್ಯಂತ ಚಾರಿತ್ರ್ಯ ನೈರ್ಮಲ್ಯವನ್ನು ಉಳಿಸಿಕೊಂಡು ಬಂದಿದ್ದ ಮಾಜಿ ಪ್ರಧಾನ ಮಂತ್ರಿಗಳಾದ ಮತ್ತು ಪಕ್ಷಾತೀತವಾಗಿ ಎಲ್ಲರಿಂದ ರಾಷ್ಟ್ರ ರಾಜಕಾರಣದಲ್ಲಿ ವಿಷೇಶ ಗೌರವ ಸಂಪಾದಿಸಿದ್ದವರು ದೇವೇಗೌಡರು.
ತಮ್ಮ ಕುಟುಂಬದ ಕುಡಿ ಪ್ರಜ್ವಲ್ ಮಾಡಿದ ಗಂಭೀರ ಪ್ರಮಾದದಿಂದಾಗಿ ಮತ್ತೆ ಯಾವತ್ತೂ ತಲೆ ಎತ್ತದ ಹಾಗಾಗಿ ಹೋಯಿತು. ತಮ್ಮ ಇಳಿವಯಸ್ಸಿ ನಲ್ಲೂ ಮೊನ್ನೆ ಮೊನ್ನೆ ತಾನೆ ಮೈಸೂರಿನಲ್ಲಿ ಮೋದಿಯವರ ಪಕ್ಕಕ್ಕೆ ಕುಳಿತು ಗುಡುಗಿದ್ದ ದೇವೇಗೌಡರು ಅವಮಾನದಿಂದ ಮೌನಕ್ಕೆ ಶರಣಾಗು ವಂತಾಯಿತು. ತಂದೆ ರೇವಣ್ಣನವರು ಜೈಲಿನ ಅನ್ನದ ರುಚಿಯನ್ನೂ ನೋಡಿಬಂದು ಒಂದಾದ ಮೇಲೆ ಒಂದು ದೇವಸ್ಥಾನಗಳನ್ನು ಸುತ್ತುವಂತಾಯಿತು. ತಾಯಿ ಭವಾನಿ ಯವರಂತೂ ತನ್ನ ಗಂಡನೇ ಜೈಲಿನಲ್ಲಿದ್ದರೂ ಹೋಗಿ ಮಾತಾಡಿಸುವ ಸೌಜನ್ಯವನ್ನೂ ತೋರದೇ ಮನೆಬಿಟ್ಟು ಈಚೆ ಬರದಂತಾ ಯಿತು. ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ.
ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಯಾರೂ ಸಂಭ್ರಮಿಸುವುದು ಬೇಡ, ಪಕ್ಷದ ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಪ್ರಕರಣ, ನನಗೂ ರೇವಣ್ಣನವರ ಕುಟುಂಬಕ್ಕೂ ವಾಸ್ತವವಾಗಿ ಯಾವುದೇ ಸಂಬಂಧವೇ ಇಲ್ಲ, ಅವರ ವ್ಯವಹಾರ ಅವರದ್ದು ನನಗೂ ಅದಕ್ಕೂ ಎಲ್ಲಿಯ ನಂಟು ಎನ್ನುತ್ತಾ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಒಡಹುಟ್ಟಿದ ಕುಟುಂಬದ ಬಂಧನವನ್ನೇ ಏಕಾ ಏಕಿ
ಕಳಚಿಕೊಂಡು ಬಿಟ್ಟರು.
ಒಬ್ಬನೇ ಒಬ್ಬ ವ್ಯಕ್ತಿ ಮಾಡಿದ ಎಂದು ಹೇಳಲಾಗುವ ಅಸಹ್ಯ ಕೆಲಸದಿಂದ ಕಳೆದ ಕೆಲವು ದಿನಗಳಿಂದ ಹಾಸನ ಜಿಲ್ಲೆಯ ಅನೇಕ ಕುಟುಂಬಗಳಲ್ಲಿ ಅಲ ಕಲ ಸೃಷ್ಟಿಯಾಗುತ್ತಿದೆ ಎಂದು ಅಲ್ಲಿಯ ಜನ ಮಾತಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣನಿಂದ ಬಲಿಪಶುಗಳಾದವರೆಂದು ನಂಬಲಾದ ಹಲವಾರು ಮಹಿಳೆ ಯರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿವೆ. ಇವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು
ಹೇಳಲಾಗಿರುವ ಮಹಿಳೆಯರನ್ನು ತೋರಿಸುವ ವಿಡಿಯೊ ತುಣುಕುಗಳ ಎಗ್ಗಿಲ್ಲದ ಪ್ರಸಾರದಿಂದಾಗಿ ಸಂತ್ರಸ್ತ ಮಹಿಳೆಯರ ಗುರುತುಗಳು ಸಾರ್ವಜನಿಕ ವಾಗಿ ಪ್ರದರ್ಶನಗೊಂಡು ಅವರುಗಳು ಭಯ ಮತ್ತು ಶಾಶ್ವತ ಕಳಂಕಯುಕ್ತ ಜೀವನವನ್ನು ನಡೆಸುವಂತಾಗಿದೆ. ಪ್ರಮುಖವಾಗಿ, ಆ ಊರಲ್ಲಿ ಹಿಂದೆ ಪಕ್ಷಕ್ಕಾಗಿ ದುಡಿದ ಅನೇಕ ಮಹಿಳೆಯರು ಮತ್ತು ಕುಟುಂಬದವರು ಮನೆಗೆ ಬೀಗ ಹಾಕಿ ಈಗ ಅeತರಾಗಿಬಿಟ್ಟಿದ್ದಾರೆ ಎನ್ನುವ ವಿಷಯವೂ ಮಾಧ್ಯಮ ಗಳಿಂದ ತಿಳಿದುಬರುತ್ತಿದೆ.
ಕೆಲವು ಪುರುಷರಂತೂ ತಮ್ಮ ಪತ್ನಿಯರನ್ನು, ಹೆಣ್ಣುಮಕ್ಕಳನ್ನೂ ಸಂಸದರೊಂದಿಗಿನ ಒಡನಾಟದ ಬಗ್ಗೆ ಈಗ ಪ್ರಶ್ನಿಸುತ್ತಿದ್ದಾರೆ. ಇದು ಜಿಲ್ಲೆಯ ಅನೇಕ
ಮಹಿಳೆಯರ ಕುಟುಂಬ ಜೀವನವನ್ನು ಛಿದ್ರಗೊಳಿಸುತ್ತಿದೆ ಎಂದು ಹೇಳುವವರಿದ್ದಾರೆ. ಈ ಹಗರಣವನ್ನು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿ ಮತ್ತು ಚುನಾವಣೆಗೆ ಬಳಸಿಕೊಂಡು ಒಂದೇ ವೇದಿಕೆ ಯಲ್ಲಿ ಕಾಣಿಸಿಕೊಂದಿದ್ದ ಏಕೈಕ ಕಾರಣದಿಂದ ದೇಶದ ಪ್ರಧಾನ ಮಂತ್ರಿಗಳು ಉತ್ತರದಾಯಿತ್ವ ಉಳ್ಳವರಾಗುತ್ತಾರೆ ಎನ್ನುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಜೆಡಿಎಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೋಗದೇ ಕಾಂಗ್ರೆಸ್ ಜತೆಗಿದ್ದಿದ್ದರೆ ಪ್ರಜ್ವಲ್ ಪ್ರಕರಣ ಈಚೆಗೆ ಬಂದು ಈಗ ಏನೇನಾಗುತ್ತಿದೆಯೋ ಆ ರಂಪಾಟವೆ ಆಗುತ್ತಿತ್ತೇ? ಎನ್ನುವ ಪ್ರಶ್ನೆಯೂ ಬಹಳ ಜನರಿಗಿದೆ
ಎನ್ನುವುದು ಬೇರೆ ಮಾತು.
ಆಂದೋಲನಾ ಜೀವಿ ಸ್ವರಾ ಭಾಸ್ಕರ್ ಅಂತವರು ಪ್ರಜ್ವಲ್ ರೇವಣ್ಣಾ ‘ಮುಸ್ಲಿಂ’ ಆಗಿದ್ದರೆ ನೀವು ಎಲ್ಲರೂ ಹೀಗೆ ಸುಮ್ಮನಿರುತ್ತಿದ್ದೀರಾ ಎಂದು ಮಾಧ್ಯಮದ ಮೂಲಕ ಬಿಜೆಪಿಯವರಿಗೆ ಪ್ರಶ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು, ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿ, ದೂರು ನೀಡುವ ವಾತಾವರಣ ನಿರ್ಮಾಣ ಮಾಡಬೇಕು, ಹಗರಣದ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ಕಡಿವಾಣ ಹಾಕಬೇಕು, ಎಸ್ಐಟಿ ತನಿಖೆ ಕಾಲಮಿತಿ ಯಲ್ಲಿ ನಡೆಯಬೇಕು, ಲೈಂಗಿಕ ಕೃತ್ಯ ಚಿತ್ರೀಕರಣದಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಬೇಕು ಮತ್ತು ಎಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ
ನೇಮಕಗೊಂಡಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ತಡವಾಗಿಯಾದರೂ ರಾಜ್ಯದ ಸಾಹಿತಿಗಳ ತಂಡವೊಂದು ಸರಕಾರವನ್ನು ಲಿಖಿತವಾಗಿ ಒತ್ತಾಯ ಮಾಡಿದೆ.
ಒಬ್ಬ ಪ್ರಜ್ವಲನ ಹೀನಾಯ ಕೃತ್ಯಕ್ಕೆ ವಾಸ್ತವವಾಗಿ ಜವಾಬ್ದಾರರಲ್ಲದ ಅವನ ಕುಟುಂಬದವರು, ಪಕ್ಷ, ರಾಜ್ಯ ಸರಕಾರ ಮತ್ತು ಮುಂದೆ ಹೋಗಿ ದೇಶದ
ಪ್ರಧಾನಮಂತ್ರಿಗಳೂ ಈ ಸಮಾಜಕ್ಕೆ ಉತ್ತರ ಹೇಳಬೇಕಾಗಿ ಬಂತು. ಮೈತ್ರಿ ಮಾಡಿಕೊಂಡಿದ್ದರಿಂದ ಓಟ್ಟಾರೆಯಾಗಿ ಈ ಘಟನೆ ಬಿ ಜೆ ಪಿಯ ಚುನಾವಣಾ ಫಲಿತಾಂಶದ ಮೇಲೆ ಯೂ ಸಣ್ಣದೊಂದು ಪರಿಣಾಮ ಬೀರಿದರೆ ಅಚ್ಚರಿ ಪಡಬೇಕಾಗಿ. ಅದಕ್ಕೇ ಹೇಳಿದ್ದು ’ಏಕ: ಪಾಪಾನಿ ಕುರುತೇ ಫಲಂ ಭುಂಕ್ತೇ ಮಹಾಜನಾ:’ಎಂದು. ಸಾರ್ವಜನಿಕ ಜೀವನದಲ್ಲಿ ಅದರಲ್ಲೂ ರಾಜಕಾರಣದಲ್ಲಿ ಹೇಗಿರಬೇಕು ಎನ್ನುವುದಕ್ಕೂ ದೇಶದಲ್ಲಿ ಉದಾಹರಣೆಗಳಿವೆ.
ಭಾರತದ ಜನರು ವಾಜಪೇಯಿಯವರನ್ನು, ಪ್ರಧಾನಿ ಮೋದಿಯವರನ್ನು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯಂತಹ ರಾಜಕಾರಣಿ ಗಳನ್ನು ಬಹುವಾಗಿ ಮೆಚ್ಚುವುದಕ್ಕೆ ಕಾರಣ ಅವರ ಶುದ್ಧ ಚಾರಿತ್ರ್ಯ. ವೈಯ್ಯಕ್ತಿಕ ಚಾರಿತ್ರ್ಯ ಸಂಪನ್ನತೆಯ ಜೊತೆಗೆ ದೇಶದ ಸಮಗ್ರತೆಯ ರಕ್ಷಣೆ, ವೃತ್ತಿಪರತೆ ಮತ್ತು ವೈವಿಧ್ಯತೆಯ ರಾಜಕಾರಣವನ್ನು ನಡೆಸುತ್ತಿರುವುದರಿಂದ ನಾಯಕತ್ವದ ನಿಜ ಪ್ರತೀಕವಾಗಿ ಜನರ ಮುಂದೆ ಇವರುಗಳು ಸಾಕಾರ ಗೊಳ್ಳುತ್ತಾರೆ.
ಭಾರತದಲ್ಲಿ ಐತಿಹಾಸಿಕವಾಗಿ ಒಬ್ಬರ ರಾಜಕೀಯ ಬೆಳವಣಿಗೆಯು ಸಾಮಾನ್ಯವಾಗಿ ಅವರ ಕುಟುಂಬದ ರಾಜಕೀಯ ಪರಂಪರೆಯೊಂದಿಗೆ ಬೆಳದು ಬರುತ್ತದೆ. ಆದರೆ, ವಾಜಪೇಯಿ, ಮೋದಿ ಮತ್ತು ಯೋಗಿಯವರುಗಳು ಕೌಟುಂಬಿಕ ಶ್ರೀಮಂತಿಕೆ ಅಥವಾ ರಾಜಕೀಯ ಸ್ವಜನ ಪಕ್ಷಪಾತದಿಂದ ಹುಟ್ಟಿದ
ಅಥವಾ ಬೆಳೆದ ನಾಯಕರುಗಳಲ್ಲ. ಅವರು ಭಾರತದ ಸಾಮಾನ್ಯ ಜನರ ಮಧ್ಯದಿಂದ ಬಂದು ಯಾವುದೇ ವಯಕ್ತಿಕ ಹಿತಾಸಕ್ತಿಯನ್ನು ಹೊಂದಿರದೇ ಇರುವುದರಿಂದ ಭಾರತದ ಸಾಮಾನ್ಯ ಜನರ ಆಶಾಕಿರಣವಾಗಿದ್ದಾರೆ. ಇವರುಗಳು ವ್ಯಕ್ತಿತ್ವದ ವಿಕಸನ ಮತ್ತು ಸರಳ ಮಾರ್ಗದಿಂದ ರಾಜಕೀಯದಲ್ಲಿ ಬೆಳವಣಿಗೆಯನ್ನು ಕಂಡು ಯುವ ಭಾರತೀಯರಿಗೆ ಸ್ಪೂರ್ತಿಯಾಗುತ್ತಾರೆ. ಒಂದು ಕಾಲದಲ್ಲಿ ಚಾಯ್ವಾಲಾ ಆಗಿ ಕೆಲಸ ಮಾಡಿದ ಮೋದಿ ಅವರು ಚಾಯ್ವಾಲಾ ಆಗಿಯೇ ಉಳಿಯದೇ ಕಠಿಣ ಪರಿಶ್ರಮ, ಬದ್ಧತೆ ಮತ್ತು ಸ್ವಯಂ ಶಿಸ್ತುಗಳನ್ನು ರೂಢಿಸಿಕೊಳ್ಳುವ ಮೂಲಕ ಭಾರತದ ಪ್ರಧಾನ ಮಂತ್ರಿ ಹುದ್ದಯನ್ನು ಏರುವಂತಾಯಿತು.
ಅವರುಗಳು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣಿಸಿಕೊಳ್ಳುವುದರಿಂದಾಗಿ ಮತ್ತು ಸಾರ್ವಜನಿಕವಾದ ಮತ್ತು ಖಾಸಗಿಯಾದ ಅವರ ನಡುವಳಿಕೆಗಳು ಏಕಸಮಾನವಾಗಿರುವುದರಿಂದ ಭಾರತದ ಜನರು ಮೋದಿ- ಯೋಗಿಯಂತವರನ್ನು ಹೆಚ್ಚು ಇಷ್ಟಪಡುವುದು. ತಮ್ಮ ನಟನೆಯ ಮೂಲಕ ಕರ್ನಾಟಕದ ಮನೆ ಮಾತಾಗಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದ ನಮ್ಮ ವರನಟ ಡಾ.ರಾಜಕುಮಾರ ಅವರು ಜನಪ್ರಿಯ ವ್ಯಕ್ತಿಗಳು ಹೇಗಿರಬೇಕು ಎನ್ನುವುದಕ್ಕೆ ಇನ್ನೊಂದು ಉತ್ತಮ ಉದಾಹರಣೆಯಾಗಿದ್ದರು. ಅವರ ಸರಳತೆ, ನಟನೆಯೆಲ್ಲಿನ ತಲ್ಲೀನತೆ, ಎಲ್ಲರೊಂದಿಗೆ ಸುಲಭವಾಗಿ ಮತ್ತು ವಿಶೇಷವಾಗಿ ಸಿನಿಮಾ ಶೂಟಿಂಗ್ನ ಇತರೆ ಸಹಾಯಕರೊಂದಿಗೆ ಬೆರೆಯುವ ಸರಳ ನಡುವಳಿಕೆ ಮತ್ತು ಇನ್ನೂ ಅನೇಕ ಗುಣಗಳು ಅವರನ್ನು ಅಷ್ಟು ಮೇಲೆಕ್ಕೆ ಒಯ್ಯುವುದರಲ್ಲಿ ಸಹಾಯವಾದವು ಎಂದು ಹೇಳಬಹುದು. ಅವರು ನಟನೆ ಬಿಟ್ಟು ಬೇರೆ ವಿಷಯದ ಗೋಜಿಗೇ ಹೋಗ ಲಿಲ್ಲ. ಆ ಕಾಲದಲ್ಲಿ ಅವರಿಗಿರುವ ಜನ ಪ್ರಿಯತೆಯನ್ನು ಅವರು ರಾಜಕೀಯಕ್ಕೆ ಬಳಸಿಕೊಂಡಿದ್ದರೆ ದೊಡ್ಡಮಟ್ಟದಲ್ಲಿ ಅಧಿಕಾರವನ್ನು ಅನುಭವಿಸ ಬಹುದಾಗಿತ್ತು.
ತಮಗಿರುವ ಜನಪ್ರಿಯತೆಯ ಮದದಿಂದ ತಮ್ಮ ಹೆಸರು ಹಾಳುಮಾಡಿಕೊಳ್ಳುವ ಅವಕಾಶಗಳು ಅವರಿಗೆ ಬೇಕಾದಷ್ಟಿತ್ತು. ಅದಕ್ಕೆ ಅವಕಾಶ ಕೊಡದೇ ಅವರದು ಒಂದು ಪರಿಪೂರ್ಣ ಮತ್ತು ಅನುಕರಣೀಯ ವ್ಯಕ್ತಿ ಎನ್ನಿಸಿಕೊಂಡರು. ಡಾ.ರಾಜಕುಮಾರ್ ಅವರ ವೃತ್ತಿ ಬದುಕು ಸರ್ವತ್ರಿಕವಾಗಿ ಎಲ್ಲರಿಗೂ ಮಾದರಿಯಾಗುವಂತಹದ್ದು. ಅವರ ಜೀವನದ ಆದರ್ಶಗಳನ್ನು ತಿಳಿದು ನಮ್ಮ ಜೀವನದಲ್ಲೂ ಅಳವಡಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಅಭಿ
ಮಾನಿಗಳಿಗೆ ಅನಿಸುತ್ತಿತ್ತು. ನನ್ನದೇನೂ ಇ, ನಿಮ್ಮಿಂದಲೇ ನಾನು ಎಂದು ಡಾ.ರಾಜಕುಮಾರ ಸದಾ ಸೌಜನ್ಯದಿಂದ ಅಭಿಮಾನಿಗಳನ್ನು ನೆನೆಯುತ್ತಿದ್ದರು. ಅಭಿಮಾನಿಗಳನ್ನು ದೇವರೆಂದೇ ಕರೆಯುವಷ್ಟು ವಿಧೇಯತೆ ಅವರಿಗಿತ್ತು.
ಸರಳವಾಗಿ ಜೀವಿಸಿದ ಅವರು ಎಂದೂ ದುರಹಂಕಾರ, ಶ್ರೀಮಂತಿಕೆಯ ದರ್ಪ ಮತ್ತು ಅಹಂ ಅನ್ನು ತೋರಿ ನಿಜ ಜೀವನದಲ್ಲಿ ’ದಾರಿ ತಪ್ಪಿದ ಮಗನಾಗ ಲಿಲ್ಲ’. ಕನ್ನಡ ನಾಡಿನ ಶಾಶ್ವತ ಸಾಂಸ್ಕೃತಿಕ ರಾಯಭಾರಿ ಎಂದು ಗೌರವಿಸಲ್ಪಡುವ ಡಾ.ರಾಜಕುಮಾರ್ ಅವರ ಸರಳ ನಡೆ-ನುಡಿಯು ಎಲ್ಲ
ಛ್ಝಿಛಿಚ್ಟಿಜಿಠಿqs ಗಳಿಗೂ ಮಾದರಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಭಿಮಾನಿಗಳಿಗೆ ತಗ್ಗಿ ಬಗ್ಗಿ ನಡೆಯುವ ಸಂಸ್ಕಾರವನ್ನು ಅವರು ತಮ್ಮ ಮಕ್ಕಳಿಗೂ ಕಲಿಸಿದ್ದರು. ಅಧಿಕಾರದಲ್ಲಿರುವ ರಾಜಕಾರಣಿಗಳು, ಸಮಾಜವನ್ನು ಧಾರ್ಮಿಕವಾಗಿ ಮುನ್ನಡೆಸಬೇಕಾದ ಪೀಠಾಧಿಪತಿಗಳು, ಸುಶಿಕ್ಷಿತ ಸಮಾಜ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಿಕ್ಷಕರುಗಳು, ಸಿನಿಮಾ ನಟ ನಟಿಯರು ಮತ್ತು ಶ್ರೀಮಂತರು ಮತ್ತು ಕ್ರೀಡಾ ತಾರೆಯರು ಇವರುಗಳನ್ನು
ಭಾರತೀಯ ಸಮಾಜ ಆದರ್ಶವಾಗಿ ಪರಿಗಣಿಸುತ್ತದೆ ಮತ್ತು ಅವರನ್ನು ಅನುಸರಿಸಲು ಸದಾ ಪ್ರಯತ್ನಿಸುತ್ತದೆ.
ಹಾಗಾಗಿ ಸಮಾಜಲ್ಲಿ ಇವರುಗಳ ನಡುವಳಿಕೆ ಬಹಳ ಹಿರಿದಾಗಿರಬೇಕಾಗುತ್ತದೆ. ನಡೆ ನುಡಿಗಳಲ್ಲಿ ಸೌಜನ್ಯ ಮತ್ತು ಮಾಡುವ ಕಾರ್ಯಗಳು ಎತ್ತರದ ಸ್ಥರದಲ್ಲಿ ಇರಬೇಕಾಗುತ್ತದೆ. ಇವರುಗಳು ತಮ್ಮ ಅಂತರಂಗ ಹಾಗೂ ಬಹಿರಂಗ ಏರಡನ್ನೂ ನಿರ್ಮಲವಾಗಿ ಇಟ್ಟುಕೊಂಡಿರ ಬೇಕಾಗುತ್ತದೆ ಮತ್ತು ತಮ್ಮ ದೌರ್ಬಲ್ಯಗಳನ್ನು ಮೀರಿ ನಿಂತು ವಯ್ಯಕ್ತಿಕ ಸುಖ ಸಂತೋಷಗಳನ್ನು ಸ್ವಲ್ಪ ಮಟ್ಟಿಗೆ ತ್ಯಾಗ ಮಾಡಿ ಬದುಕ ಬೇಕಾಗುತ್ತದೆ. ಈ ಎಲ್ಲಾ ಮೌಲ್ಯಗಳಿಲ್ಲದ ವರು ಸಾರ್ವಜನಿಕ ಜೀವನದಲ್ಲಿದ್ದರೆ ಸಮಾಜದ ಆರೊಗ್ಯ ಹದಗೆಡುತ್ತದೆ ಎನ್ನುವುದು ಖಂಡಿತ ಮತ್ತು ಇವರುಗಳು ಸಮಾಜಕ್ಕೆ ಕಂಟಕಪ್ರಾಯ ರಾಗುತ್ತಾರೆ ಎನ್ನುವುದು ಶತಸಿದ್ಧ.