Friday, 25th October 2024

ಹಿಂದೂ ಅಸಹಿಷ್ಣುವಾಗಿದ್ದರೆ ಭಾರತ ಉಳಿಯುತ್ತಿತ್ತೇ ?

ಅಭಿಮತ

ಡಾ.ಸುಧಾಕರ ಹೊಸಳ್ಳಿ

ಈಚೆಗೆ ಮುಗಿದ ೧೮ನೇ ಲೋಕಸಭಾ ಚುನಾವಣೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಅವರು ಆಯ್ಕೆಯಾಗಿದ್ದಾರೆ, ಕಳೆದ ೧೦ ವರ್ಷಗಳಿಂದ ಸಂವಿಧಾನಿಕವಾಗಿ ಅಧಿಕೃತವಾದ ವಿರೋಧಪಕ್ಷಗಳೇ ಆಯ್ಕೆ ಆಗದೆ ಇರುವುದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಅಭಿವೃದ್ಧಿಯ ಸೂಚಕವಲ್ಲ, ಆಳುವ ಸರಕಾರ ಎಷ್ಟೇ ಪ್ರಾಮಾಣಿಕವಾಗಿ, ಎಷ್ಟೇ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಪ್ರಜಾಪ್ರಭುತ್ವದ ಆಶಯಗಳು ಗಟ್ಟಿ ಯಾಗಲು ಸಮರ್ಥವಾದ ವಿರೋಧ ಪಕ್ಷದ ಅವಶ್ಯಕತೆ ಇದ್ದೇ ಇರುತ್ತದೆ.

ಇಂತಹ ಜವಾಬ್ದಾರಿಯನ್ನು ಮೊದಲ ಬಾರಿಗೆ ತಮ್ಮ ಹೆಗಲಿಗೇರಿಸಿಕೊಂಡಿರುವ ರಾಹುಲ್ ಗಾಂಽ, ೧೧೫ ನಿಮಿಷಗಳ ಕಾಲ ಲೋಕಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಗಟ್ಟಿಯಾಗಿ ಸರಕಾರದ ಗಮನ ಸೆಳೆದದ್ದು, ವಿಶೇಷವಾದದ್ದು ಹಾಗೂ ನಿರೀಕ್ಷಿತವಾದದ್ದು. ಸಂವಿಧಾನ ರಚನಾಕಾರರು ಪ್ರತಿಯೊಬ್ಬ ಸಂಸದರು ಮುಕ್ತವಾಗಿ ಸಂಸತ್ತಿನಲ್ಲಿ ಮಾತನಾಡಬೇಕು, ಅವರ ಮಾತುಗಳನ್ನು ಮೊಟುಕುಗೊಳಿಸಬಾರದು, ವಿಶೇಷ ವಾಕ್ ರಕ್ಷಣೆಯೊಂದಿಗೆ ಶಾಸನ ರಚನೆಯಾಗಬೇಕು, ಅಂತಹ ಶಾಸನ ಗಳು ಪ್ರಜಾಪೂರಕವಾಗಬೇಕು, ಹಾಗಾಗಿ ಸಂವಿಧಾನದ ೧೦೫ನೇ ವಿಧಿಯಲ್ಲಿ ಸಂಸತ್ ಸದಸ್ಯರಿಗೆ ವಿಶೇಷ ವಾಕ್ ರಕ್ಷಣೆ ಯನ್ನು ನೀಡಿದ್ದಾರೆ.

ಸದನದಲ್ಲಿ ಸದಸ್ಯರು ಮಾತನಾಡುವ, ವ್ಯಕ್ತಪಡಿಸುವ ಯಾವುದೇ ಅಭಿಪ್ರಾಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ ಎಂಬ ನಿಯಮವನ್ನು ಮಾಡಲಾಗಿದೆ. ಆದರೆ, ಇಂತಹ ಅವಕಾಶವನ್ನು ಬಳಸಿಕೊಂಡು ಅಸಂವಿಧಾನಿಕ ನುಡಿಗಳನ್ನು ಹಾಡಬಹುದೇ? ಯಾವುದೇ ಒಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಹುದೇ? ಸುಳ್ಳು ಹೇಳಬಹುದೇ? ಎಂಬ ಪ್ರಶ್ನೆಗಳು ಉಗಮಿಸುವುದು ಸಹಜ. ಇಂಥದೊಂದು ಪ್ರಶ್ನೆ ಈಗ ಉದ್ಭವಿಸಿರುವುದು ರಾಹುಲ್ ಗಾಂಧಿಯವರು ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಬಗ್ಗೆ ನೀಡಿರುವ ಹೇಳಿಕೆಯಿಂದ. ಇಸ್ಲಾಂ, ಕ್ರಿಶ್ಚಿಯನ್, ಬುದ್ಧಮತಗಳು ಶಾಂತಿಯನ್ನು ಪ್ರತಿಪಾದಿಸುತ್ತವೆ, ಹಿಂದೂ ಎನ್ನುವವರು ಅಶಾಂತಿಯನ್ನು ಉಂಟುಮಾಡುತ್ತಾರೆ, ಅಸಹಿಷ್ಣುಗಳಾಗಿದ್ದಾರೆ
ಎಂಬ ಆರೋಪ ಮಾಡಿದ್ದಾರೆ.

ಬಹಳ ಕುತೂಹಲದ ಸಂಗತಿ ಎಂದರೆ, ಅವರು ಮಾತನಾಡುವ ಸಂದರ್ಭ ದೇಶದಲ್ಲಿ ಧಾರ್ಮಿಕ ಅಶಾಂತಿಯ ಬಗ್ಗೆ ಮಾತನಾಡಬೇಕಾದ ಜರೂರು
ಸೃಷ್ಟಿ ಆಗಿರಲೇ ಇಲ್ಲ. ಒಂದು ವೇಳೆ ಧಾರ್ಮಿಕ ಅಶಾಂತಿಯ ಬಗ್ಗೆ ಮಾತನಾಡಲೇ ಬೇಕಿದ್ದರೆ, ಇದ್ದದ್ದು ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳ ಮೇಲೆ ದಾಳಿ ಮಾಡಿದ ಮುಸಲ್ಮಾನ್ ಉಗ್ರ ಚಟುವಟಿಕೆ. ವಸ್ತುಸ್ಥಿತಿ ಹೀಗಿzಗಿಯೂ, ರಾಹುಲ್ ಹಿಂದುಗಳ ಮೇಲೆ ಹರಿಯಾದದ್ದು ಏಕೆ? ಚರ್ಚಿತ ವಿಷಯ. ನೀವು ಸಂಸತ್ತಿನಲ್ಲಿ ಆಡಿದ ಆ ಕುರಿತಾದ ಮಾತು, ಅಥವಾ ವಿವಾದಕ್ಕೆ ನಿಮ್ಮ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುವಂತಿಲ್ಲ ದಿಟ್ಟ, ಆದರೆ ಜನತಾ ನ್ಯಾಯಾಲಯ!

ಆ ಮಾತಿನ ವಿರುದ್ಧದ ಕಾನೂನಿನ ಪ್ರಕ್ರಿಯೆಯನ್ನು ಹೊರತುಪಡಿಸಿಯೂ, ಇದರ ತಾತ್ವಿಕತೆ, ಮೌಲ್ಯ ಹಾಗೂ ಸತ್ಯಾಸತ್ಯತೆಯನ್ನು ಚರ್ಚೆ ಮಾಡಿದರೂ ನಿಮಗೆ ಸೋಲುಂಟಾಗದೆ ಇರದು ಅಥವಾ ನಿಮಗೆ ಗೆಲ್ಲುವ ಯಾವುದಾದರು ಅವಕಾಶ ಇದೆಯೇ? ಹಿಂದೂ ಅಸಹಿಷ್ಣುವಾಗಿದ್ದಿದ್ದರೆ ಭಾರತ ಉಳಿಯುತ್ತಿತ್ತೇ? ಹಿಂದೂಗಳ ಸಹಿಷ್ಣುತೆಯ ಬಗ್ಗೆ ನಿಮಗೆ ಮಾಹಿತಿ ಕೊರತೆಯೋ, ಇಲ್ಲ ಇದು ಉದ್ದೇಶ ಪೂರಕ ನಡಾವಳಿಯೋ? ಹಿಡಿಯ ಜಗತ್ತು ಮುಸ್ಲಿಂ ಭಯೋತ್ಪಾದನೆಯ ಬಗ್ಗೆ, ಅದರ ಕ್ರೂರತೆ ಬಗ್ಗೆ ಹಾಗೂ ಅದರ ನಿರ್ಣಾಮದ ಬಗ್ಗೆ ಚಿಂತಿಸುತ್ತಿರುವಾಗ, ತಾವು ಹಿಂದುಗಳ ಅವಹೇಳನ
ಮಾಡಿದ್ದಾದರೂ ಏಕೆ? ಭಾರತದ ಸರ್ವೋಚ್ಚ ನ್ಯಾಯಾಲಯ ರಮೇಶ್ ಪ್ರಭು ಅವರ ಪ್ರಕರಣದಲ್ಲಿ ಹಿಂದೂ ಎಂಬುದು ಜೀವನ ಪದ್ಧತಿ, ಸಕ್ರಮ ಮಾನವ ಜೀವನ ನಿರ್ವಹಣೆಗೆ ಅದು ಮೂಲಾದಾರ ಎಂದು ತೀರ್ಪು ನೀಡಿದೆ, ಕಾನೂನಿನ ಪರಾಮರ್ಶೆ ಸರಿಯೋ? ಅಥವಾ ನಿಮ್ಮ ಹೇಳಿಕೆಯೋ?
ಬಾಬಾ ಸಾಹೇಬ್ ಅಂಬೇಡ್ಕರರ ಬದುಕು ಬರೆಹಗಳ ಸಂಪುಟ ೬, ೪೨೪ನೇ ಪುಟದಲ್ಲಿ ದಾಖಲಿಸಿರುವಂತೆ, ಮುಸ್ಲಿಂ ಮತಾಂಧತೆ ಜಾಗತಿಕವಾಗಿ ಅಪಾಯವಾದದ್ದು, ಡಾ.ಟೈಟಿಸ್ ಅವರ ಬರಹಗಳ ಉಖ ಮಾಡಿ, ಮಹಮ್ಮದ್ ಮತ್ತು ತಯ್ಮೂರ್‌ನಂತಹ ಮುಸ್ಲಿಂ ಆಕ್ರಮಣಕಾರರು ವಿಗ್ರಹ ಭಂಜನೆ
ಮತ್ತು ಕೊಳ್ಳೆ ಹೊಡೆಯುವುದರ ಜತೆಗೆ ಹಿಂದುಗಳನ್ನು ಬಲತ್ಕಾರವಾಗಿ ಮತಾಂತರಗೊಳಿಸುವುದಕ್ಕೆ ಹೆಚ್ಚಾಗಿ ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಸಿಕೊಳ್ಳುವುದು ಮತ್ತು ಉಳಿದವರನ್ನು ರಕ್ತಸಿಂಚಿತ ಕತ್ತಿಗಳಿಂದ ನರಕಕ್ಕೆ ಕಳಿಸುವುದರಲ್ಲಿ ಹೆಚ್ಚು ಆಸಕ್ತರಿದ್ದಂತೆ ಕಾಣುತ್ತದೆ.

ಇಸ್ಲಾಂ ಅನ್ನು ಇಡೀ ದೇಶದ ಧರ್ಮವನ್ನಾಗಿ ಸ್ಥಾಪಿಸುವುದು ಅವರ ಧೋರಣೆಯಾಗಿತ್ತು. ಇದು ಅನಾಗರಿಕ ನಡವಳಿಕೆಯಾಗಿದೆ ಎಂದು ದಾಖಲಿಸಿzರೆ.
ಇದು ನೈಜವೋ? ಅದು ನಿಮ್ಮ ಸಮರ್ಥನೆಯೇ? ಥಾಟ್ಸ ಆನ್ ಪಾಕಿಸ್ತಾನ ಕೃತಿಯಲ್ಲಿ ಅನಿಬೆಸೆಂಟ್‌ರ ದಿ ಫ್ಯೂಚರ್ ಇಂಡಿಯನ್ ಪಾಲಿಟಿಕ್ಸ್ ಕೃತಿಯ ಪುಟ ಸಂಖ್ಯೆ ೩೦೧ ರಿಂದ ೩೦೫ ರ ಆಧಾರವನ್ನು ಉಲ್ಲೇಖಿಸಿದ ಅಂಬೇಡ್ಕರ್, ಖಿಲಾಪತ್ ಚಳುವಳಿಯ ನಂತರ ಹಿಂದುಗಳ ವಿರುದ್ಧ ಮುಸ್ಲಿಮರ ದ್ವೇಷ ನಿರ್ಲಜ್ಜವಾಗಿ ಬೆತ್ತಲೆಯಾಗಿ ಬೆತ್ತಲೆಯಾಗಿ ಪುಟಿದೆದ್ದಿದೆ, ಮುಸ್ಲಿಂ ಖಡ್ಗದ ಧರ್ಮ ಪುನರ್ಜೀವನೆಗೊಂಡ ಧೋರಣೆ ಮೇಳೈಸುತ್ತ, ಅಫ್ಘನರು ಇಂಡಿಯಾದ ಮೇಲೆ ದಾಳಿ ಮಾಡಿದರೆ, ಹಿಂದುಗಳ ವಿರುದ್ಧ ಅಫ್ಘನರಿಗೆ ಸಹಾಯ ಮಾಡಿ ಈ ನೆಲದ ವಿರುದ್ಧ ನಿಲ್ಲುವ ಸಂಚನ್ನು ಮುಸ್ಲಿಮರು ಮಾಡಿದ್ದರು ಅದು ಧರ್ಮಾಂಧತೆಯ ಪ್ರತಿಕ ಎಂದು ದಾಖಲಿಸುತ್ತಾರೆ.

ಹಿಂದುಗಳ ಮತ್ತು ಹಿಂದೂ ಮಹಾಸಭೆಯ ತಾಕತ್ತನ್ನು ಚೆನ್ನಾಗಿ ಬಲ್ಲ ಸಾವರ್ಕರ್ ಮುಸ್ಲಿಮರಿಗೆ ನೀವು ಬಂದರೆ ನಿಮ್ಮೊಡನೆ, ನೀವು ಬಾರದಿದ್ದರೆ ನಿಮ್ಮನ್ನು ಬಿಟ್ಟು, ನೀವು ವಿರೋಧಿಸಿದರೆ ನಿಮ್ಮನ್ನು ಮೀರಿ ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ, ಶಕ್ತಿಮೀರಿ ಹೋರಾಡಲು ಹಿಂದುಗಳು ಸದಾ
ಸಿದ್ಧರಿದ್ದಾರೆ ಎಂದು ಮುಸ್ಲಿಮರಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸ್ಪಷ್ಟ ನಿಲುವನ್ನು ರವಾನಿಸಿದ್ದರು ಎಂದು ಬರೆಯುವ ಮುಖೇನ ಹಿಂದೂಗಳ ಶಕ್ತಿ ಮತ್ತು ಬದ್ಧತೆಯನ್ನು ಅಂಬೇಡ್ಕರರು ಸಮರ್ಥಿಸಿದ್ದರು. (ಬದುಕು ಬರೆಹಗಳು ಮತ್ತು ಭಾಷಣಗಳು ಸಂಪುಟ ೬ ಪುಟ ಸಂಖ್ಯೆ ೫೦೩) ಜಗತ್ತಿನಲ್ಲಿ ಸಮಾನತೆಯಿಂದ ಘಾಸಿಗೊಂಡವರೆಂದರೆ ಅದು ಮುಸ್ಲಿಂ ಜನಾಂಗ, ಧರ್ಮಾಂಧತೆಯ ಕಾರಣಕ್ಕಾಗಿ ವಿಜ್ಞಾನವನ್ನು ಒಪ್ಪುವುದಿಲ್ಲ ಸಮಾನತೆಯನ್ನು ಒಪ್ಪುವುದಿಲ್ಲ, ಇತರ ಧರ್ಮಗಳನ್ನು ಒಪ್ಪುವುದಿಲ್ಲ ಎಂದು ತಮ್ಮ ಬರಹಗಳಲ್ಲಿ ದಾಖಲು ಮಾಡಿದ್ದನ್ನು ಸಂಪುಟ ಆರರಲ್ಲಿ ಕಾಣಬಹುದು.

ಸೆಪ್ಟೆಂಬರ್ ೮, ೧೯೨೦ ರಲ್ಲಿ ಗಾಂಧೀಜಿ ಅವರು ಯಂಗ್ ಇಂಡಿಯಾದಲ್ಲಿ ಬರೆದ ಲೇಖನವನ್ನು ಉದಾರಿಸುತ್ತಾ, ಹಿಂದೂ ಮುಸ್ಲಿಂ ಐಕ್ಯತೆಗಾಗಿ ಹಿಂದೂ ಮತ್ತು ಮುಸ್ಲಿಂ ಇಬ್ಬರು ‘ಅಲ್ಲಾವೂ ಅಕ್ಬರ್’ ಕೂಗಬೇಕು ಎಂದು ಪ್ರತಿಪಾದಿ ಸಿದ್ದ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ, ನಾವು ಹಿಂದುಗಳೇಕೆ ‘ಅವು ಅಕ್ಬರ್’ ಕೂಗಬೇಕು? ಯಾವುದೇ ಒಬ್ಬ ವಿವೇಕಯುಕ್ತ ವ್ಯಕ್ತಿಯು ಹಿಂದೂ ಮುಸ್ಲಿಂ ಐಕ್ಯತೆಯ ಸಾಧನೆಗಾಗಿ ಈ ಅಂತಕ್ಕೆ ಹೋಗಲಾರನು ಎಂದು ಬೇಸರ ವ್ಯಕ್ತಪಡಿಸಿದ್ದರು.

ಹಿಂದುಗಳನ್ನು ಬಲಿಕೊಟ್ಟು ಸೂರ್ಯ ಮತ್ತು ಅಗ್ನಿ ಪೂಜಕರನ್ನು ಕೊಂದು ತಮ್ಮನ್ನು ತಾವೇ ತೃಪ್ತಿ ಪಡಿಸಿಕೊಳ್ಳುವ ಕೃತ್ಯ ಮುಸಲ್ಮಾನರಿಗೆ ಅವರು ಕೊಳ್ಳೆ ಹೊಡೆದ ಸಂಪತ್ತಿಗಿಂತ ಹೆಚ್ಚು ಮಾನ್ಯವಾಗಿತ್ತು ಎಂಬುದನ್ನು ಅಂಬೇಡ್ಕರರು ತಬಾಖತ್ -ಇ ನಸಿರಿ ಬರವಣಿಗೆಯನ್ನು ಆಧರಿಸಿ, ಮುಸ್ಲಿಂ ಮತಾಂಧತೆಯನ್ನು, ಕ್ರೂರತೆಯನ್ನು ದೃಢೀಕರಿಸಿದ್ದರು. (ಅಂಬೇಡ್ಕರ್ ಬದುಕು ಬರಹಗಳು ಮತ್ತು ಭಾಷಣಗಳು ಸಂಪುಟ ೬, ಪುಟ ಸಂಖ್ಯೆ ೪೧೮ ರಿಂದ ೪೨೦) ರಾಹುಲ್ ಗಾಂಧಿಯವರೇ ನೀವು ಶಿವನ ಪೋಟೋವನ್ನು ಹಿಡಿದು ಆರ್ಯ ದ್ರಾವಿಡ ಸಿದ್ಧಾಂತವನ್ನು, ಜೀವಂತವಾಗಿರಿಸಲು ಪ್ರಯತ್ನ ಮಾಡಿದ್ದೀರಿ.

ಶಿವ ಮತ್ತು ರಾಮನ ನಡುವೆ ಭೇದ ಸೃಷ್ಟಿಸಿದ್ದೀರಿ, ಆದರೆ, ಸಂಪುಟ ಆರರ ಪುಟ ಸಂಖ್ಯೆ ೯೮ ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸತ್ಯವೆಂದು ನಂಬಲಾ
ಗಿರುವ ಕೆಲವು ಆಯ್ದ ಸಂಗತಿಗಳ ಮೇಲೆ ಆರ್ಯ ಸಿದ್ಧಾಂತ ವನ್ನು ನಿರ್ಮಿಸಲಾಗಿದೆ. ಇಷ್ಟು ತೆಳುವಾದ ಮತ್ತು ಅಭದ್ರವಾದ ತಳಪಾಯದ ಮೇಲೆ ಪಾಶ್ಚಾತ್ಯ ವಿದ್ವಾಂಸರು ಗಂಭೀರ ವಿದ್ವಾಂಸರ ಎದುರಿಗೆ ವಾದ ಮಂಡಿಸಿ ಅಸಾಧಾರಣತೆ ಮೆರೆದಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಪುಟ ಸಂಖ್ಯೆ ೯೭ ರಲ್ಲಿ ಆರ್ಯ ಜನಾಂಗ ಸಿದ್ಧಾಂತ ಸಮಸ್ಯೆ ಸಂಬಂಧ ಋಗ್ವೇದವು ಪಾಶ್ಚಾತ್ಯ ಸಿದ್ಧಾಂತ ಜೊತೆ ಘರ್ಷಣೆಯಲ್ಲಿದೆ, ಈ ವಿಷಯದ ಬಗ್ಗೆ ಅತ್ಯುತ್ತಮ ಆಧಾರ ಋಗ್ವೇದವೇ ಆಗಿರುವುದರಿಂದ ಪಾಶ್ಚಾತ್ಯ ಸಿದ್ಧಾಂತವನ್ನು ತಿರಸ್ಕರಿಸಬೇಕಾಗುತ್ತದೆ ಎಂದು ಕರೆ ಕೊಟ್ಟಿದ್ದಾರೆ. ಅದೇ ಪುಟದಲ್ಲಿ, ಪಾಶ್ಚತ್ಯ ಆರ್ಯ ಜನಾಂಗ ಸಿದ್ಧಾಂತವು ಸಂಗತಿಗಳ ಅಪೂರ್ಣ ಪರೀಕ್ಷೆಯಿಂದ ಮಾತ್ರ ತೆಗೆದುಕೊಂಡ ಅವಸರದ ತೀರ್ಮಾನವಾಗಿದೆ, ಅದನ್ನು ತಿರಸ್ಕರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

ಋಗ್ವೇದವನ್ನು ಮಾನ್ಯ ಮಾಡುವ ಮುಖಾಂತರ ಪಾಶ್ಚಾತ್ಯ ಚಿಂತನೆಯನ್ನೇ ಬುಡಮೇಲು ಮಾಡಿದ್ದರು, ಆ ಸಂಬಂಧ ಹಿಂದೂ ಧರ್ಮ ಹಿಂದೂ ಧರ್ಮ ಗ್ರಂಥಗಳನ್ನು ಅದಮ್ಯ ಆಧಾರವೆಂದು ಸಾಬೀತುಪಡಿಸಿದ್ದರು. ಹಾಗಾದರೆ, ಹಿಂದುಗಳಲ್ಲಿ ಅಂಬೇಡ್ಕರ್‌ಗೆ ಕಾಣದ ಅಸಹಿಷ್ಣುತೆ, ಅವರ ಸಂಶೋಧನೆಯಲ್ಲಿ ಕಾಣದ ಹಿಂದೂ ಅಶಾಂತಿ ನಡವಳಿಕೆ ನಿಮಗೆ ಆಧಾರವಾಗಿ ಸಿಕ್ಕಿದ್ದಾದರೂ ಎಲ್ಲಿಂದ? ಅಂಬೇಡ್ಕರರ ತಳಮಟ್ಟದ ಸಂಶೋಧನೆ ಯನ್ನೇ ಮೀರಿ ಹಿಂದೂ ಅವಹೇಳನಕ್ಕೆ ಶಕ್ತಿ ನೀಡಿದ ಸಂಶೋಧನೆ ಯಾವುದು? ಸ್ವಾಮಿ ಶ್ರದ್ಧಾನಂದರ ಕೊಲೆಯನ್ನು ಉಲ್ಲೇಖ ಮಾಡಿ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಗಾಂಧೀಜಿಯವರು ಕೆಲವು ಹಿಂದೂ ಕಗ್ಗೂಲೆಗಳನ್ನು ಮೌನವಾಗಿ ಸಹಿಸಿದ್ದು ಅಪರಾಧವೆಂದು ಆರೋಪಿಸಿ, ಮುಸ್ಲಿಂ ಮತಾಂಧತೆಯನ್ನು ದೃಢಪಡಿಸಿದ ಮೇಲೂ, ಅದಾವ ಗ್ರಂಥ ನಿಮಗೆ ಹಿಂದೂ ಅಶಾಂತಿಯನ್ನು ಸಾದರ ಪಡಿಸಿದೆ.

ಶೇ.೯೦ಕ್ಕಿಂತ ಹೆಚ್ಚು ಹಿಂದುಗಳು ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳದೆ ಇದ್ದರೂ, ತಾವೇ ಸ್ವತಃ ಸಂವಿಧಾನ ರಚಿಸಿ, ಅಲ್ಪ ಸಂಖ್ಯಾತರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು ಹಿಂದೂ ಮೌಲ್ಯವನ್ನು ಸಾಂವಿಧಾನಿಕವಾಗಿಯೂ ಖಚಿತಪಡಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ತಿರಸ್ಕರಿಸಿದ್ದ ಜಾತ್ಯತೀತತೆ ಎಂಬುದನ್ನು ಸಂವಿಧಾನದ ಒಳಗೆ ತುರುಕಿ, ಎಲ್ಲದಕ್ಕೂ ಸೆಕ್ಯುಲರ್ ವಾದವನ್ನೇ ಮುಂದು ಮಾಡುತ್ತಾ ಅಶಾಂತಿ ಸೃಷ್ಟಿ ಮಾಡುತ್ತಿದ್ದರೂ, ಅದನ್ನು ಸಹಿಸಿ ಭಾರತವನ್ನು ಒಟ್ಟಿಗೆ ಕೊಂಡೊಯ್ದದ್ದು ಹಿಂದೂ ಸಮಾಜ.

ಸರ್ವೇ ಜನ ಸುಖಿನೋ ಭವಂತು ಎನ್ನುವ ಕಲ್ಪನೆ ಇರುವುದು ಪ್ರಾಪಂಚಿಕವಾಗಿ ಹಿಂದೂ ಸಮಾಜದಲ್ಲಿ ಮಾತ್ರ, ಸಾಂಖಿಕ ಸತ್ಯ ಹಿಂದೂ ಶ್ರೇಷ್ಠತೆ ಯನ್ನು ಪ್ರಕಾಶಿಸುತ್ತಿದ್ದರೂ, ಪ್ರಜಾಪ್ರಭುತ್ವ ಜಾರಿಯ ಮೂಲ ಸದನದಲ್ಲಿ ನಿಂತು ಹಿಂದೂ ಸಮಾಜದ ಮೇಲೆ ಅಸತ್ಯದ ಆರೋಪ ಹೊರಿಸುವು ದಾದರೂ ಹೇಗೆ? ಹಿಂದುಗಳು ಸಹಿಷ್ಣುತೆಯ ಆರಾಧಕರು ಎನ್ನುವ ಕಾರಣಕ್ಕಾಗಿಯೇ ತಾವು ಈ ರೀತಿ ಅವಹೇಳನ ಮಾಡಿದ್ದೀರಾ? ಸಂವಿಧಾನದ ಕೃತಿಯನ್ನು ಹಿಡಿಯುವುದಷ್ಟೇ ಅಲ್ಲ, ಅದರ ಘನತೆಯನ್ನು ಎತ್ತಿ ಹಿಡಿಯಲು ಸಂವಿಧಾನ ಶಿಲ್ಪಿಯ ಸಂಶೋಧನೆಯನ್ನು ಗೌರವಿಸಬೇಕಲ್ಲವೇ? (ಲೇಖಕರು: ಹವ್ಯಾಸಿ ಬರಹಗಾರರು)