Thursday, 19th September 2024

Helicopter Crash: ICG ಹೆಲಿಕಾಪ್ಟರ್‌ ಎಮರ್ಜೆನ್ಸಿ ಲ್ಯಾಂಡಿಂಗ್‌; ನಾಪತ್ತೆಯಾಗಿದ್ದ ಸಿಬ್ಬಂದಿ ಶವ ಪತ್ತೆ

Emergency Landing

ಗಾಂಧಿನಗರ: ಗುಜರಾತ್‌(Gujarat)ನ  ಪೋರ್‌ ಬಂದರ್‌ನ ಸಮೀಪ ಅರಬ್ಬಿ ಸಮುದ್ರದಲ್ಲಿ ನಿನ್ನೆ ಎಮೆರ್ಜೆನ್ಸಿ ಲ್ಯಾಂಡಿಂಗ್‌ (Emergency Landing) ಮಾಡಿದ್ದ ಭಾರತೀಯ ಕರಾವಳಿ ಭದ್ರತಾ ಪಡೆ (Indian Coast Guard-ICG)ಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (Advanced Light Helicopter-ALH) ನಲ್ಲಿದ್ದ ಮೂವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ(Helicopter Crash). ಮತ್ತೊರ್ವ ಸಿಬ್ಬಂದಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದ್ದು, ಅವರು ಬದುಕುಳಿದಿರುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎನ್ನಲಾಗಿದೆ.

ಹಡಗನ್ನು ಸ್ಥಳಾಂತರಿಸುವ ವೇಳೆ ಈ ಅವಘಢ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಇತ್ತೀಚೆಗೆ ಬೀಸಿದ ಭೀಕರ ಚಂಡಮಾರುತದ ಸಮಯದಲ್ಲಿ 67 ಮಂದಿಯನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಈ ಹೆಲಿಕಾಪ್ಟರ್ ಮೂಲಕ ರಕ್ಷಿಸಿತ್ತು. ಪೋರ್‌ಬಂದರ್‌ನಿಂದ ಸುಮಾರು 45 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ ಸಿಬ್ಬಂದಿಯೊಬ್ಬರನ್ನು ಸೋಮವಾರ ರಾತ್ರಿ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದರು.  ಇನ್ನು ನಿನ್ನೆಯೇ ಹೆಲಿಕಾಪ್ಟರ್‌ನ ಅವಶೇಷ ಪತ್ತೆಯಾಗಿದೆ. ಪ್ರಸ್ತುತ ಶೋಧ ಕಾರ್ಯಾಚರಣೆಗಾಗಿ 4 ಹಡಗುಗಳು ಮತ್ತು 2 ವಿಮಾನಗಳನ್ನು ಬಳಸಲಾಗುತ್ತಿದೆ.

ಶೋಧ ಮತ್ತು ಪಾರುಗಾಣಿಕಾ ಪಡೆಗಳಿಂದ ಪತ್ತೆಯಾದ ಎರಡು ಶವಗಳು ಹೆಲಿಕಾಪ್ಟರ್‌ನ ಸಹ-ಪೈಲಟ್, ಡೆಪ್ಯುಟಿ ಕಮಾಂಡೆಂಟ್ ವಿಪಿನ್ ಬಾಬು ಮತ್ತು ಇನ್ನೊಬ್ಬ ಸಿಬ್ಬಂದಿಉ ಗುರುತು ಪತ್ತೆಯಾಗಿಲ್ಲ. ಪ್ರಾಥಮಿಕ ಮಾಹಿತಿಯಿಂದ ಹೆಲಿಕಾಪ್ಟರ್ (ಟೈಲ್ ನಂಬರ್ ಸಿಜಿ 863) ಸಮುದ್ರ ಮಟ್ಟಕ್ಕಿಂತ ಕೆಲವೇ ಕೆಲವು ಮೀಟರ್‌ ಎತ್ತರದಿಂದ ಹಾರಾಟ ನಡೆಸಿ ತುರ್ತು ಲ್ಯಾಂಡಿಂಗ್‌ ಮಾಡಿದೆ. ಇನ್ನು ಈ ಹೆಲಿಕಾಪ್ಟರ್ ಕೋಸ್ಟ್ ಗಾರ್ಡ್‌ನ ಪೋರಬಂದರ್ ಮೂಲದ 835 ಸ್ಕ್ವಾಡ್ರನ್‌ಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.

ಕೋಸ್ಟ್ ಗಾರ್ಡ್ ತನ್ನ ALH ಫ್ಲೀಟ್‌ನ ಒಂದು-ಬಾರಿ ಸುರಕ್ಷತಾ ತಪಾಸಣೆಗೊಳಪಡಿಸಿದ್ದು, ಇದನ್ನು ಬೆಂಗಳೂರು ಮೂಲದ ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಟ್ಯಾಂಕರ್‌ನಲ್ಲಿ ತುರ್ತು ಪರಿಸ್ಥಿತಿಯ ನಂತರ ಸೋಮವಾರ ರಾತ್ರಿ ವೈದ್ಯಕೀಯ ಸ್ಥಳಾಂತರಿಸುವ ಕಾರ್ಯಾಚರಣೆಗಾಗಿ ಡೂಮ್ಡ್ ಹೆಲಿಕಾಪ್ಟರ್  ಹಾರಾಟ ಪ್ರಾರಂಭಿಸಿತ್ತು. ಸುಮಾರು 15 ನಿಮಿಷಗಳ ಹಾರಾಟದ ನಂತರ ರಾತ್ರಿ 11.15 ಕ್ಕೆ ಸಮುದ್ರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿತ್ತು.

ಇದೇ ಹೆಲಿಕಾಪ್ಟರ್ ಇತ್ತೀಚೆಗೆ ಪ್ರವಾಹದಿಂದ ತತ್ತರಿಸಿರುವ ಗುಜರಾತ್‌ನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗುಜರಾತ್‌ನಲ್ಲಿ ಇತ್ತೀಚಿನ ಚಂಡಮಾರುತದ ವಾತಾವರಣದಲ್ಲಿ 67 ಜೀವಗಳನ್ನು ಉಳಿಸಿದ ಭಾರತೀಯ ಕೋಸ್ಟ್ ಗಾರ್ಡ್ ALH, ಪೋರಬಂದರ್‌ನಿಂದ ಸುಮಾರು 45 ಕಿಮೀ ದೂರದಲ್ಲಿರುವ ಭಾರತೀಯ ಫ್ಲ್ಯಾಗ್ಡ್ ಮೋಟಾರ್ ಟ್ಯಾಂಕರ್ ಹರಿ ಲೀಲಾದಲ್ಲಿ ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ವೈದ್ಯಕೀಯ ಸ್ಥಳಾಂತರಿಸಿತ್ತು.

ಕೆಲವು ದಿನಗಳ ಹಿಂದೆ ದೋಷಪೂರಿತ ಹೆಲಿಕಾಪ್ಟರ್ ಅನ್ನು ವಾಯುಪಡೆಯ ಎಂಐ-17 (MI-17 chopper) ಹೆಲಿಕಾಪ್ಟರ್‌ ಹೊತ್ತೊಯ್ಯುತ್ತಿದ್ದ ವೇಳೆ ಅಚಾನಕ್ಕಾಗಿ ಟೋಯಿಂಗ್ ಹಗ್ಗ ತುಂಡಾಗಿರುವ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿತ್ತು. ಹಗ್ಗ ತುಂಡಾಗಿ ಹೆಲಿಕಾಪ್ಟರ್‌ ಮಂದಾಕಿನಿ ನದಿ ಬಳಿ ಪತನಗೊಂಡಿತ್ತು.ಈ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿತ್ತು.

ಈ ಸುದ್ದಿಯನ್ನೂ ಓದಿ: Russia Helicopter Missing: ಉಕ್ರೇನ್‌ ಜೊತೆಗಿನ ಸಮರದ ನಡುವೆಯೇ 22 ಜನರಿದ್ದ ರಷ್ಯಾ ಹೆಲಿಕಾಪ್ಟರ್‌ ಮಿಸ್ಸಿಂಗ್‌