Sunday, 10th November 2024

Richest Beggar V/S Dolly Chaiwala: ಡಾಲಿ ಚಾಯ್‌ವಾಲಾಗಿಂತ ಶ್ರೀಮಂತ ಈ ಕೋಟಿಪತಿ ಭಿಕ್ಷುಕ!

Richest Beggar V/S Dolly Chaiwala

ವಿಶ್ವದ ಶ್ರೀಮಂತ ಭಿಕ್ಷುಕ ಮತ್ತು ಚಹಾ ಮಾರುವವ (Richest Beggar V/S Dolly Chaiwala) ನಮ್ಮ ದೇಶದಲ್ಲೇ ಇದ್ದಾರೆ. ಇವರ ನಿವ್ವಳ ಮೌಲ್ಯ (Net Worth) ಕೇಳಿದರೆ ಒಮ್ಮೆ ಎಲ್ಲರೂ ಹೆಬ್ಬೇರಿಸಬಹುದು. ಇವರ ಸಂಪತ್ತು, ದಿನದ ಆದಾಯ ಎಲ್ಲರಿಗೂ ಆಶ್ಚರ್ಯಪಡಿಸುತ್ತದೆ. ಇವರು ಇವತ್ತು ಶ್ರೀಮಂತರಾಗಿದ್ದರೂ ತಮ್ಮ ಕಸುಬನ್ನು ಅತ್ಯಂತ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಗಿದ್ದಾರೆ.

ಹೌದು ಇಲ್ಲಿ ಹೇಳುತ್ತಿರುವುದು ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್ (richest beggar) ಮತ್ತು ಬಿಲ್ ಗೇಟ್ಸ್ ರಿಂದ ಹೆಚ್ಚು ಪ್ರಚಾರ ಪಡೆದ ಡಾಲಿ ಚಾಯ್ ವಾಲಾ (Dolly Chaiwala) ಬಗ್ಗೆ.

ವಿಶಿಷ್ಟವಾದ ಶೈಲಿಯಿಂದ ಚಹಾ ತಯಾರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಡಾಲಿ ಚಾಯ್ ವಾಲಾ ವಿಶ್ವದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಮಹಾರಾಷ್ಟ್ರದ ನಾಗ್ಪುರದವರಾದ ಡಾಲಿ ಚಾಯ್ ವಾಲಾ ಅವರ ನಿಜವಾದ ಹೆಸರು ಸುನಿಲ್ ಪಾಟೀಲ್.

ಸಾಮಾನ್ಯ ಕುಟುಂಬದಿಂದ ಬಂದ ಸುನಿಲ್ ಈಗ ವಿಶ್ವ ವಿಖ್ಯಾತಿ ಗಳಿಸಿದ್ದಾರೆ. ಇವರ ಈ ಸಾಧನೆಯ ಹಿಂದೆ ದೊಡ್ಡ ಕಥೆಯೇ ಇದೆ. 1998ರಲ್ಲಿ ನಾಗ್ಪುರದ ಸಾಧಾರಣ ಕುಟುಂಬದಲ್ಲಿ ಜನಿಸಿದ ಸುನಿಲ್ ಅವರ ಈ ಸಾಧನೆಗೆ ಅವರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಸಮರ್ಪಣೆ ಮತ್ತು ಉತ್ಸಾಹವೇ ಮುಖ್ಯ ಕಾರಣ. ಅವರ ರೋಮಾಂಚಕ ವ್ಯಕ್ತಿತ್ವ, ಚಹಾ ತಯಾರಿಕೆಯ ವಿಶಿಷ್ಟ ವಿಧಾನವು ಇನ್ ಸ್ಟಾಗ್ರಾಮ್ ನಲ್ಲಿ ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ.

Richest Beggar V/S Dolly Chaiwala

ಡಾಲಿ ಚಾಯ್‌ವಾಲಾ ಸಂಪತ್ತು ಎಷ್ಟು?

ಡಾಲಿ ಚಾಯ್‌ವಾಲಾ ಅವರ ವಾರ್ಷಿಕ ನಿವ್ವಳ ಆದಾಯ 10 ಲಕ್ಷ ರೂ. ಈ ಮೊತ್ತ ಸಾಮಾನ್ಯವಾದರೂ ಇದೊಂದು ಗಮನಾರ್ಹ ಸಾಧನೆ. ಒಂದು ಕಪ್ ಚಹಾಕ್ಕೆ 7 ರೂ. 350ರಿಂದ 500 ಕಪ್‌ ದೈನಂದಿನ ಚಹಾ ಮಾರಾಟದಿಂದ ಡಾಲಿಯು ದಿನಕ್ಕೆ 2,450ರೂ. ನಿಂದ 3,500 ರೂ.ವರೆಗೆ ಸಂಪಾದಿಸುತ್ತಾರೆ. ಇದರ ಹಲವು ಪಟ್ಟು ಹೆಚ್ಚು ಹಣವನ್ನು ಇವರು ಯುಟ್ಯೂಬ್‌ ಮತ್ತು ವಿಶೇಷ ಅತಿಥಿಯಾಗಿ ಹೋಗಿ ಬಂದ ಸಂಭಾವನೆಯಿಂದ ಗಳಿಸುತ್ತಾರೆ. ಇವರು ಇದಕ್ಕಾಗಿ ಒಬ್ಬ ಮ್ಯಾನೇಜರ್‌ನನ್ನು ನೇಮಿಸಿಕೊಂಡಿದ್ದಾರೆ.

ಬಿಲ್ ಗೇಟ್ಸ್ ಭೇಟಿ

ಅನಿರೀಕ್ಷಿತವಾಗಿ ಬಿಲ್ ಗೇಟ್ಸ್ ಭೇಟಿಯಾದ ಬಳಿಕ ಡಾಲಿ ಚಾಯ್ ವಾಲಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಡಾಲಿಯ ಖ್ಯಾತಿಯು ಗಗನಕ್ಕೇರಿತು. ಬಿಲ್ ಗೇಟ್ಸ್ ಭೇಟಿಯ ವಿಡಿಯೋ ಕ್ಲಿಪ್ ನಲ್ಲಿ ಸರಳವಾಗಿ ಹಾಗೂ ಗ್ರಾಹಕರಿಗೆ ಸಂತೋಷ ಪಡಿಸುವಂತೆ ಚಹಾವನ್ನು ತಯಾರಿಸುವ ಡಾಲಿಯ ಮೋಡಿ ಮತ್ತು ಕೌಶಲವನ್ನು ಗೇಟ್ಸ್ ಮೆಚ್ಚಿಕೊಂಡಿರುವುದನ್ನು ಕಾಣಬಹುದು. ಇದು ಪ್ರಪಂಚದಾದ್ಯಂತ ಸಾಕಷ್ಟು ವೀಕ್ಷಕರನ್ನು ಸೆಳೆದಿದೆ.

‘ಡಾಲಿ ಕಿ ತಾಪ್ರಿ ನಾಗ್ಪುರ’ ಯುಟ್ಯೂಬ್ ಚಾನೆಲ್

ಸುನಿಲ್ ಪಾಟೀಲ್ ಅವರು ಜನಪ್ರಿಯ ಟೀ ಸ್ಟಾಲ್ ನಡೆಸುವುದರ ಜೊತೆಗೆ ‘ಡಾಲಿ ಕಿ ತಾಪ್ರಿ ನಾಗ್ಪುರ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಸಹ ನಿರ್ವಹಿಸುತ್ತಿದ್ದಾರೆ. ಅವರ ಈ ಚಾನೆಲ್ 1.46 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಇನ್ ಸ್ಟಾ ಗ್ರಾಮ್ ಖಾತೆಯನ್ನು ಹೊಂದಿದೆ.

ಕುವೈತ್ ನಲ್ಲಿ ಡಾಲಿ ಚಾಯ್ ವಾಲಾ ಅವರ ಚಹಾ ತಯಾರಿಸುವ ವೈಶಿಷ್ಟ್ಯವನ್ನು ಪರಿಚಯಿಸಲು ಅವರನ್ನು ಕುವೈತ್ ಗೆ ಆಹ್ವಾನಿಸಲು ಕುವೈತ್‌ನ ಕಂಟೆಂಟ್ ಕ್ರಿಯೇಟರ್ ವೊಬ್ಬರು ಡಾಲಿಯ ಮ್ಯಾನೇಜರ್ ಅನ್ನು ಸಂಪರ್ಕಿಸಿದ್ದಾರೆ. ಆಶ್ಚರ್ಯವೆಂದರೆ ಡಾಲಿ ಚಾಯ್ ವಾಲಾ ಇದಕ್ಕಾಗಿ 4 ಅಥವಾ 5 ಸ್ಟಾರ್ ಹೊಟೇಲ್ ನಲ್ಲಿ ವಸತಿ ವ್ಯವಸ್ಥೆಯೊಂದಿಗೆ 5 ಲಕ್ಷ ರೂ. ಚಾರ್ಚ್ ಮಾಡಿರುವುದಾಗಿ ಅವರು ಹೇಳಿದ್ದಾರೆ.

Richest Beggar V/S Dolly Chaiwala

ವಿಶ್ವದ ಶ್ರೀಮಂತ ಭಿಕ್ಷುಕ ಭರತ್ ಜೈನ್

ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್ ಅವರು ಡಾಲಿ ಚಾಯ್ ವಾಲಾಗಿಂತ ಹೆಚ್ಚಿನ ನಿವ್ವಳ ಆದಾಯವನ್ನು ಹೊಂದಿದ್ದಾರೆ. ಇವರು ಮುಂಬಯಿನ ಬೀದಿಗಳಲ್ಲಿ ಪರಿಚಿತ ವ್ಯಕ್ತಿ. ಸಣ್ಣ ವಯಸ್ಸಿನಲ್ಲಿ ಹಣಕಾಸಿನ ತೊಂದರೆಯಿಂದಾಗಿ ಅವರು ಶಿಕ್ಷಣವನ್ನು ಪಡೆಯಲಾಗಲಿಲ್ಲ. ಈಗ ಹೆಂಡತಿ, ಇಬ್ಬರು ಪುತ್ರರು, ಸಹೋದರ ಮತ್ತು ತಂದೆಯೊಂದಿಗೆ ಅವರು ವಾಸಿಸುತ್ತಿದ್ದಾರೆ.

ನಿವ್ವಳ ಮೌಲ್ಯ ಎಷ್ಟು?

ಭರತ್ ಜೈನ್ ಅವರ ಸಂಪತ್ತಿನ ನಿವ್ವಳ ಮೌಲ್ಯ 7.5 ಕೋಟಿ ರೂ! ಭಿಕ್ಷಾಟನೆಯಿಂದ ಇವರ ಮಾಸಿಕ ಆದಾಯ 60 ರಿಂದ 75,000 ರೂ! ಮುಂಬಯಿನಲ್ಲಿ 1.2 ಕೋಟಿ ಮೌಲ್ಯದ 2 ಬಿ ಹೆಚ್ ಕೆ ಅಪಾರ್ಟ್‌ಮೆಂಟ್ ಹೊಂದಿರುವ ಇವರು ಥಾಣೆಯಲ್ಲಿ 30,000 ರೂ. ಮಾಸಿಕ ಆದಾಯ ತರುವ ಎರಡು ಅಂಗಡಿಗಳನ್ನು ಬಾಡಿಗೆಗೆ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಆಜಾದ್ ಮೈದಾನದಂತಹ ಜನಪ್ರಿಯ ಸ್ಥಳಗಳಲ್ಲಿ ಇವರು ಭಿಕ್ಷೆ ಬೇಡುವುದನ್ನು ಕಾಣಬಹುದು.

Stock Market: ಷೇರುಪೇಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ಸ್ 463 ಪಾಯಿಂಟ್ಸ್ ಕುಸಿತ

ಜೈನ್ ಕೇವಲ 10 ರಿಂದ 12 ಗಂಟೆಗಳಲ್ಲಿ ದಿನಕ್ಕೆ ಸುಮಾರು 2 ರಿಂದ 2,500 ರೂ. ಗಳಿಸುತ್ತಾರೆ. ಇವತ್ತು ಅವರಿಗೆ ಆದಾಯಕ್ಕೇನೂ ಕೊರತೆ ಇಲ್ಲ. ಅವರ ಮಕ್ಕಳು ಕಾನ್ವೆಂಟ್ ಶಿಕ್ಷಣ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರು ಸ್ಟೇಷನರಿ ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ. ಆದರೂ ಜೈನ್ ತಾವು ಆಯ್ಕೆ ಮಾಡಿಕೊಂಡಿರುವ ವೃತ್ತಿ ಮಾರ್ಗದಲ್ಲಿ ಇನ್ನೂ ಮುನ್ನಡೆಯುತ್ತಿದ್ದಾರೆ.