Friday, 20th September 2024

Karnataka Kalashree Award: 2024-25ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ; ಸಾಧಕರ ಪಟ್ಟಿ ಇಲ್ಲಿದೆ

Karnataka Kalashree Award

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2024-25 ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು (Karnataka Kalashree Award) ಘೋಷಿಸಿದ್ದು, ಪ್ರತಿಷ್ಠಿತ ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ 16 ಹಿರಿಯ ಕಲಾವಿದರು ಹಾಗೂ ಎರಡು ಸಂಘ-ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ (Karnataka Sangeeta Nritya Academy) ಅಧ್ಯಕ್ಷರಾದ ಶುಭ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಸೆ.2ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಗೌರವ ಪ್ರಶಸ್ತಿ:

  • ಕರ್ನಾಟಕ ಸಂಗೀತ (ಗಾಯನ): ಭಾನುಮತಿ ನರಸಿಂಹನ್, ಬೆಂಗಳೂರು
  • ನೃತ್ಯ: ಗಾಯತ್ರಿ ಕೇಶವನ್, ಹಾಸನ

ವಾರ್ಷಿಕ ಪ್ರಶಸ್ತಿ:

ಕರ್ನಾಟಕ ಸಂಗೀತ
1. ವಾನರಾಶಿ ಬಾಲಕೃಷ್ಣ ಭಾಗವತರ್, ಕೋಲಾರ
2. ಎಸ್.ವಿ.ಗಿರಿಧರ್, ಬೆಂಗಳೂರು – ಮೃದಂಗ
3. ನಾಗಭೂಷಣಯ್ಯ, ಆನೇಕಲ್ – ಪಿಟೀಲು

ಹಿಂದೂಸ್ತಾನಿ ಸಂಗೀತ
1. ಮಹದೇವಪ್ಪ ಪೂಜಾರ, ಕಲಬುರಗಿ
2. ರವೀಂದ್ರ ಕಾಟೋಟಿ, ಬೆಳಗಾವಿ – ಹಾರ್ಮೋನಿಯಂ
3. ಅನಂತ ಭಾಗವತ್, ಉತ್ತರ ಕನ್ನಡ – ಗಾಯನ

ನೃತ್ಯ
1. ಟಿ.ರವೀಂದ್ರಶರ್ಮ, ಬೆಳಗಾವಿ
2. ಅನುರಾಧ ವಿಕ್ರಾಂತ್, ಬೆಂಗಳೂರು
3. ಸುಗ್ಗನಹಳ್ಳಿ ಷಡಾಕ್ಷರಿ, ಬೆಂಗಳೂರು
4. ಬಿ.ಆ‌ರ್.ಹೇಮಂತ ಕುಮಾರ್, ಬೆಂಗಳೂರು- ನೃತ್ಯಕ್ಕೆ ಪಿಟೀಲು

ಸುಗಮ ಸಂಗೀತ
ಸೂಗೂರೇಶ ಅಸ್ಕಿಹಾಳ್, ರಾಯಚೂರು
ಎನ್.ಎಲ್.ಶಿವಶಂಕರ್, ಬೆಂಗಳೂರು – ಪಕ್ಕವಾದ್ಯ – ತಬಲಾ

ಕಥಾಕೀರ್ತನ
ಕೆ.ಎನ್.ಕೃಷ್ಣಪ್ಪ, ಕೋಲಾರ

ಗಮಕ
ರತ್ನಾಮೂರ್ತಿ, ಹಾಸನ – ವ್ಯಾಖ್ಯಾನ

ಸಂಘ-ಸಂಸ್ಥೆ
ವೀರೇಶ್ವರ ಪುಣ್ಯಾಶ್ರಮ, ಗದಗ
ಸುನಾದ ನಾದ ಕಲ್ಚರಲ್ ಸೆಂಟರ್, ಬೆಂಗಳೂರು

ಈ ಸುದ್ದಿಯನ್ನೂ ಓದಿ | Roopa Gururaj Column: ಶನಿದೇವ ಹಾಗೂ ಲಕ್ಷ್ಮೀ ದೇವಿ ಯಾರು ಹೆಚ್ಚು ?

ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು

Mysuru Dasara 2024

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ (Mysuru Dasara 2024) ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ (Dr. Hampa Nagarajaiah) ಅವರು 2024ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು. ಈ ನಡುವೆ ಸಿಎಂ ಸಿದ್ದರಾಮಯ್ಯನವರೇ ಹಿರಿಯ ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಉದ್ಘಾಟಕರಾಗಿ ಕರೆಸಿದರೆ ಹೇಗೆ ಎಂಬ ಪ್ರಸ್ತಾಪ ಮಾಡಿದ್ದರು. ಹಂಪನಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಹಿರಿಯ ತಲೆಮಾರಿನ ಸಾಹಿತಿ ಎನ್ನುವ ದೃಷ್ಟಿಕೋನದಿಂದ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲು ಸಿಎಂ ಸಿದ್ದರಾಮಯ್ಯ ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಅದರಂತೆ ಪ್ರೊ. ಹಂ.ಪ.ನಾಗರಾಜಯ್ಯ ಅವರನ್ನೇ ಆಯ್ಕೆ ಮಾಡಲಾಗಿದೆ.

ಯಾರಿವರು ಹಂ.ಪ. ನಾಗರಾಜಯ್ಯ?

ಕನ್ನಡ ಸಾರಸ್ವತ ಲೋಕದಲ್ಲಿ ಹಂಪನಾ ಎಂದೇ ಚಿರ ಪರಿಚಿತರಾಗಿರುವ ಹಂ.ಪ. ನಾಗರಾಜಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ 1936ರ ಅ.7ರಲ್ಲಿ ಶಾನುಬೋಗ ಪದ್ಮನಾಭಯ್ಯ – ಪದ್ಮಾವತಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್‌ ಪದವಿ, ಮೈಸೂರು ವಿವಿಯಲ್ಲಿ ಎಂಎ ಪದವಿ ಪಡೆದಿರುವ ಇವರು, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿವಿಯಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. 1959ರಿಂದ ಅಧ್ಯಾಪಕ ವೃತ್ತಿ ಜೀವನ ಆರಂಭಿಸಿದ ಹಂಪನಾ ಅವರು ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮಂಡ್ಯ, ದಾವಣಗೆರೆ, ಬೆಂಗಳೂರಿನ ಸರ್ಕಾರಿ ಕಾಲೇಜು, ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Vishwavani Completes 1000 episodes: ವಿಶ್ವವಾಣಿ ಕ್ಲಬ್‌ ಹೌಸ್‌ʼಗೆ ಸಹಸ್ರ ಸಂಭ್ರಮ

ಇದರ ಜತೆಗೆ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 14ಕ್ಕೂ ಹೆಚ್ಚು ಕೃತಿಗಳು 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ನೇಮಕ ಮಾಡಲಾಗಿದೆ.