ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ (Lawyer Jagadish) ಅವರ ಮಾತುಗಳು ಎಲ್ಲ ಸ್ಪರ್ಧಿಗಳನ್ನು ಕೆರಳಿಸಲು ಶುರು ಮಾಡಿದೆ. ಇದೀಗ ಸ್ವರ್ಗ ವಾಸಿ-ನರಕ ವಾಸಿಯ ಎಲ್ಲ ಸದಸ್ಯರು ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊದಲ ಎರಡು ದಿನ ಸಣ್ಣ-ಪುಟ್ಟ ಜಗಳಕ್ಕೆ ಕಾರಣರಾಗಿದ್ದ ಜಗದೀಶ್ ಇದೀಗ ಮನೆಯೇ ಹೊತ್ತಿ ಉರಿಯುವಂತೆ ಮಾಡಿದ್ದಾರೆ. ಕಲೆಯ ಬಗ್ಗೆ, ಮಹಿಳೆಯರ ಬಗ್ಗೆ ಅಪಮಾನ ಮಾಡಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತೊ ಎಂಬುದು ನೋಡಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಮೂರನೇ ದಿನ ಎಲಿಮಿನೇಷನ್ನಿಂದ ಪಾರಾಗಲು ನಾಮಿನೇಟ್ ಆಗಿದ್ದ ಸದಸ್ಯರಿಗೆ ಟಾಸ್ಕ್ ನೀಡಲಾಗಿತ್ತು. ಟಾಸ್ಕ್ ನಡೆಯುವ ವೇಳೆ ಉಸ್ತುವಾರಿ ಧನರಾಜ್ ಆಚಾರ್ ಅವರನ್ನು ಜಗದೀಶ್ ಬೇಕೆಂದೇ ಟ್ರಿಗರ್ ಮಾಡಿ ಗಲಾಟೆ ಶುರುಮಾಡಿಕೊಂಡಿದ್ದರು. ಇಲ್ಲಿಂದ ಶುರುವಾದ ಲಾಯರ್ ಜಗಳ ದಿನ ಮುಗಿಯುವ ವರೆಗೂ ನಿಂತಿಲ್ಲ.
‘ಇಟ್ಟುದ್ದ ಇದ್ದಾನೆ, ಅವನು ಕಾಮಿಡಿ ಪೀಸ್’ ಎಂದು ಧನರಾಜ್ಗೆ ಜಗದೀಶ್ ಹೇಳಿದ್ದಾರೆ. ಆಗ ನರಕದಲ್ಲಿರುವವರು ಬಿಟ್ಟು ಬಿಡಿ, ಬಾಡಿ ಶೇಮಿಂಗ್ ಎಲ್ಲ ಯಾಕೆ ಎಂದು ಸಮಾಧಾನ ಪಡಿಸಲು ನೋಡಿದ್ದಾರೆ. ಇಲ್ಲಿದೆ ಸುಮ್ಮನಾಗದ ಜಗದೀಶ್, ಪದೇ ಪದೇ ಕಾಮಿಡ್ ಪೀಸ್ ಎಂದಿದ್ದಾರೆ. ಇದು ಮಾನಸ ಅವರಿಗೆ ನೋವುಂಟು ಮಾಡಿದೆ. ‘ಕಾಮಿಡ್ ಪೀಸ್ ಅಂದ್ರೆ ವೇಸ್ಟ್ ಅಲ್ಲ, ನೂರು ಜನರನ್ನು ನಗಿಸ್ತಾರೆ, ಸಾವಿರ ಟೆನ್ಶನ್ ಇರುತ್ತೆ’ ಎಂದಿದ್ದಾರೆ. ಇದಕ್ಕೆ ಜಗದೀಶ್ ಅವರು ಏನು ಟೆನ್ಶನ್, ಏನು ಟೆನ್ಶನ್, ನಿನ್ನಾಟ ನಾನು ನೋಡಿದ್ದೇನೆ ಹೋಗಮ್ಮ ನೀನು, ಯಾವ ಸೀಮೆ ಹೆಂಗಸು ಅವಳು’ ಎಂದು ಮತ್ತಷ್ಟು ರೇಗಾಡಿದ್ದಾರೆ.
ನೀನು ನನ್ನ ಡ್ಯಾಶ್ಗೆ ಸಮ ಎಂದ ನರಕ ವಾಸಿ: ವೀಕೆಂಡ್ನಲ್ಲಿ ಈ ಸ್ಪರ್ದಿಗೆ ಕಿಚ್ಚನ ಕ್ಲಾಸ್ ಖಚಿತ
ಜಗದೀಶ್ ಅವರ ‘ಯಾವ ಸೀಮೆ ಹೆಂಗಸು ಅವಳು’ ಎಂಬ ಪದ ಬಳಕೆ ಕೇಳಿ ಇಡೀ ಮನೆ ಇವರ ವಿರುದ್ಧ ನಿಂತಿದೆ. ‘ಹೆಂಗಸರಿಗೆ ಗೌರವ ಕೊಡಿ. ಒಂದು ಹೆಂಗಸಿಗೆ ಸರಿಯಾಗಿ ಮರಿಯಾದೆ ಕೊಟ್ಟು ಮಾತಾಡು, ಇದು ನಮ್ ಮನೆ, ನಮ್ಮ ಮನೆಯ ಹೆಂಗಸಿನ ಬಗ್ಗೆ ಮಾತಾಡಿದ್ರೆ ನಾವೂ ಮಾತಾಡ್ತೀವಿ. ನೀವು ಹೆಂಗಸರ ಬಗ್ಗೆ ಮಾತನಾಡ ಬಾರದು’ ಎಂದು ಉಗ್ರಂ ಮಂಜು ನೇರವಾಗಿ ಹೇಳಿದ್ದಾರೆ.
ಇದಾದ ನಂತರ ನಾಳಿನ ಎಪಿಸೋಡ್ ಬಗ್ಗೆ ಬಿಗ್ ಬಾಸ್ ತುಣುಕು ರಿಲೀಸ್ ಮಾಡಿದ್ದು, ಇದರಲ್ಲಿ ಜಗದೀಶ್ ಬಿಗ್ ಬಾಸ್ಗೆನೇ ಸವಾಲು ಹಾಕಿದ್ದಾರೆ. ‘ನಾನು ಆಚೆ ಹೋದ ನಂತ್ರ ಬಾಗ್ ಬಾಸ್ ಅನ್ನು ಮಾನ್ಯುಪ್ಯುಲೆಟ್ ಮಾಡಿಲ್ಲ ನನ್ನ ಹೆಸರು ಜಗದೀಶ್ ಅಲ್ಲ. ನಿಮ್ಮ ಬಗ್ಗೆ ಎಲ್ಲ ಮಾಹಿತಿ ಹೊರಹಾಕ್ತೇನೆ. ಬಿಗ್ ಬಾಸ್ ಏನು ಅಂತ ಆಚೆಕಡೆ ತೋರಿಸ್ತೇನೆ. ನಿಮ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ’ ಎಂದು ಜಗದೀಶ್ ಹೇಳಿದ್ದಾರೆ.
ಇದನ್ನೆಲ್ಲ ಕಂಡ ನೆಟ್ಟಿಗರು ಶನಿವಾರ ಸುದೀಪ್ ಆಗಮನಕ್ಕೆ ಕಾಯುತ್ತಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅಲ್ಲಿ ಕಿಚ್ಚ ಸುದೀಪ್ ಗರಂ ಆಗುತ್ತಾರೆ. ಈ ವಾರ ಜಗದೀಶ್ ಅವರಿಗೆ ಸರಿಯಾಗಿ ಕಾದಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ: ಬಾಂಬ್ ಸಿಡಿಸಿದ ಜಗದೀಶ್