ಚಿಕ್ಕನಾಯಕನಹಳ್ಳಿ : ಸ್ವಾತಂತ್ರ್ಯ ಹೋರಾಟಗಾರ ಸಿ.ಎಸ್.ನಾರಾಯಣರಾವ್ ರಸ್ತೆಯಲ್ಲಿರುವ ವಿಜಯ್ಕುಮಾರ್ ಮನೆಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಮೈಸೂರು ರಾಜರ ವೈಭವ ಸಾರುವ ನೂರಾರು ಗೊಂಬೆಗಳ ಪ್ರದರ್ಶನ ಜನರ ಕಣ್ಮಣ ಸೆಳೆಯುತ್ತಿದೆ.
ದೇವಾಂಗ ಸಂಘದ ಕಾರ್ಯದರ್ಶಿ ಸಿ.ಎ.ಕುಮಾರಸ್ವಾಮಿ ಮಾತನಾಡಿ ಮೂಲ ಸಂಸ್ಕೃತಿ ಮರೆಯಾಗಿ ಗೊಂಬೆ ಹಬ್ಬ ಎಂದರೇನು ಎನ್ನುವ ಸ್ಥಿತಿ ಎದುರಾಗಿದ್ದು ಯುವ ಜನತೆಗೆ ನವರಾತ್ರಿ ವೇಳೆ ಗೊಂಬೆಗಳನ್ನಿಟ್ಟು ಪೂಜೆ ಸಲ್ಲಿಸುವ ವಿಚಾರವೇ ತಿಳಿದಿಲ್ಲ. ಅಂಥವರಿಗೆ ಭಾರತೀಯ ಸಂಸ್ಕೃತಿ ತಿಳಿಸಿಕೊಡುವಲ್ಲಿ ನಿಟ್ಟಿನಲ್ಲಿ ವಿಜಯ್ ಕುಮಾರ್ ಕುಟುಂಬ ದವರು ಯಥಾವತ್ತಾಗಿ ಗೊಂಬೆ ಇಡುವ ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾರೆ. ರಾಮನವಮಿ ಹಬ್ಬದಲ್ಲಿ ನಡೆಯುವ ರಾಮ ಸಪ್ತಾಹ ಕಾರ್ಯಕ್ರಮಕ್ಕೂ ಈ ಕುಟುಂಬದ ನೆರವಿದೆ ಎಂದು ಸ್ಮರಿಸಿದರು.
ವಿಜಯ್ ಕುಮಾರ್ ಮಾಹಿತಿ ನೀಡಿ ಹಲವು ವರ್ಷಗಳಿಂದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದು ನವರಾತ್ರಿ ಆರಂಭದ ದಿನದಿಂದ ವಿಜಯದಶಮಿಯವರೆಗೂ ಬೊಂಬೆಗಳ ಪ್ರದರ್ಶನ ಇರುತ್ತದೆ. ಕಾಲಿಗೆ ಚಪ್ಪಲಿ ಹಾಕದೆ, ಚಾಪೆಯ ಮೇಲೆ ಮಲಗುವ ಮೂಲಕ ವ್ರತ ಆಚರಿಸುತ್ತಿದ್ದೇನೆ. ನಾವಿಲ್ಲಿ ದಸರಾ ಬಿಂಬಿಸುವ ಗೊಂಬೆಗಳನ್ನು ಇಟ್ಟಿ ಪೂಜಿಸುವ ಮೂಲಕ ಸಂಭ್ರಮ ಆಚರಿಸುತ್ತೇವೆ. ಪ್ರತಿನಿತ್ಯ ಭಜನೆ ಹಾಗು ಮನೆಗೆ ಆಗಮಿಸುವ ಮುತ್ತೆöÊದೆಯರಿಗೆ ಅರಿಶಿನಕುಂಕುಮ ಮತ್ತು ಪ್ರಸಾದ ವಿತರಿಸಲಾಗುತ್ತದೆ ಎಂದರು.