ನವದೆಹಲಿ: ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್ಡಿಎಫ್ಸಿ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆದೇಶ ನೀಡಿದೆ.
ಡಿಜಿಟಲ್ ಬ್ಯಾಂಕಿಂಗ್ ಸಂಬಂಧಿಸಿ ಎಚ್ಡಿಎಫ್ಸಿ ಗ್ರಾಹಕರಿಗೆ ಆಗಿರುವ ತೊಂದರೆ ಮತ್ತು ನವೆಂಬರ್ 21ರಂದು ಬ್ಯಾಂಕಿನ ಪ್ರೈಮರಿ ಡೇಟಾ ಸೆಂಟರ್ನಲ್ಲಿ ಪವರ್ ಫೇಲ್ಯೂರ್ ಉಂಟಾದ ಪರಿಣಾಮ ಗ್ರಾಹಕರು ಸಂಕಷ್ಟಕ್ಕೆ ಈಡಾಗಿದ್ದರು.
ಡಿಜಿಟಲ್ 2.0 ಯೋಜನೆ ಪ್ರಕಾರ ಗ್ರಾಹಕರಿಗೆ ಪರಿಚಯಿಸಲು ಹೊರಟಿದ್ದ ಎಲ್ಲ ಡಿಜಿಟಲ್ ಸೇವೆ ಮತ್ತು ಪ್ರಸ್ತಾವಿತ ಐಟಿ ಅಪ್ಲಿಕೇ ಶನ್ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು. ಹೊಸದಾಗಿ ಕ್ರೆಡಿಟ್ ಕಾರ್ಡ್ ವಿತರಿಸುವುದನ್ನು ಕೂಡ ನಿಲ್ಲಿಸಬೇಕು. ಕೂಡಲೇ ಲೋಪ ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದು ಆರ್ಬಿಐ ನಿರ್ದೇಶಿಸಿದೆ.
ಈಗಾಗಲೇ, ಚಾಲ್ತಿಯಲ್ಲಿರುವ ಕ್ರೆಡಿಟ್ ಕಾರ್ಡ್ಗಳ ಮೇಲೆ, ಡಿಜಿಟಲ್ ಬ್ಯಾಂಕ್ ಚಟುವಟಿಕೆಗಳ ಮೇಲೆ ಪ್ರಸ್ತುತ ತೆಗೆದುಕೊಳ್ಳು ತ್ತಿರುವ ಕ್ರಮಗಳು ಪರಿಣಾಮ ಬೀರುವುದಿಲ್ಲ ಎಂಬುದನ್ನು ಗ್ರಾಹಕರಿಗೆ ಖಾತರಿ ಒದಗಿಸುವ ಕೆಲಸವನ್ನು ಮಾಡಬೇಕು.
ಬ್ಯಾಂಕ್ ಉತ್ತಮ ರೀತಿಯಲ್ಲಿ ಗ್ರಾಹಕ ಸೇವೆ ಒದಗಿಸುತ್ತಿದ್ದು, ಸಣ್ಣಪುಟ್ಟ ಲೋಪದೋಷಗಳನ್ನು ಆರಂಭದಲ್ಲೇ ಸರಿಪಡಿಸುವ ಕೆಲಸ ಮಾಡಬೇಕು. ಅದನ್ನು ಮಾಡುತ್ತೇವೆ ಎಂದು ಬ್ಯಾಂಕು ಸ್ಪಷ್ಟಪಡಿಸಿದೆ.