ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss) ಸಾಮ್ರಾಜ್ಯವಾಗಿ ಬದಲಾಗಿದ್ದು ಗೊತ್ತೇ ಇದೆ. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯ ಆಗಮನ ಮಾಡಿಬಿಟ್ಟರು. ಸದ್ಯ ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಯುವರಾಣಿ ಆಗಿ ಮೋಕ್ಷಿತಾ ಪೈ ಎಂಟ್ರಿಕೊಟ್ಟ ಬಳಿಕ ಮನೆ ಎರಡು ಬಣವಾಯಿತು.
ಮಂಜು ರಾಜರ ಬಣದಲ್ಲಿ ತ್ರಿವಿಕ್ರಮ್, ಗೌತಮಿ, ಧನರಾಜ್ ಆಚಾರ್, ಭವ್ಯಾ ಗೌಡ ಹಾಗೂ ಗೋಲ್ಡ್ ಸುರೇಶ್ ಇದ್ದರೆ ಅತ್ತ ಮೋಕ್ಷಿತಾ ಬಣದಲ್ಲಿ ಹನುಮಂತ, ಶಿಶಿರ್, ಶೋಭಾ ಶೆಟ್ಟಿ, ಐಶ್ವರ್ಯಾ, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಇದ್ದಾರೆ. ಈ ಎರಡು ಬಣಗಳಿಗೆ ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಇದರಲ್ಲಿ ಅತಿ ಹೆಚ್ಚು ಟಾಸ್ಕ್ ಗೆದ್ದ ಬಣ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ.
ಅದರಂತೆ ಟಾಸ್ಕ್ ಪ್ರಕಾರ ಯುವರಾಣಿ ಮೋಕ್ಷಿತಾ ಹಾಗೂ ರಾಜ ಮಂಜು ಅವರನ್ನು ಬಂಧನದಲ್ಲಿ ಇಡಲಾಗಿತ್ತು. ಇಬ್ಬರನ್ನೂ ಕರೆದು ಅವರ ಕೈಗೆ ಬೇಡಿ ಹಾಕಿ ಲಾಕ್ ಮಾಡಲಾಯಿತು. ಮಂಜು ಅವರು ಹಾಗೂ ಮೋಕ್ಷಿತಾ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ಬಟ್ಟೆ ಕಟ್ಟಿ ಅವರಿಬ್ಬರನ್ನು ಹೊರಗಡೆ ಕರೆದುಕೊಂಡು ಹೋಗಿ ಕಟ್ಟಿ ಹಾಕಿದ್ದಾರೆ. ರಾಜ ಹಾಗೂ ರಾಣಿಯನ್ನು ಬಿಡಿಸಿಕೊಳ್ಳವುದು ಈಗ ಪ್ರಜೆಗಳ ಕೆಲಸ ಆಗಿರುತ್ತದೆ. ಆ ಕಾರಣಕ್ಕಾಗಿ ಪ್ರಜೆಗಳು ಅಂದರೆ ಮನೆಯ ಇತರ ಸದಸ್ಯರು ಆಟ ಆಡವಾಡಿದ್ದಾರೆ.
ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಒಂದು ಸಂದರ್ಭದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ ಗೌಡ ರೊಚ್ಚಿಗೆದ್ದಿದ್ದಾರೆ. ಒಬ್ಬರು ಸೂಚನೆ ನೀಡಬೇಕು. ಇನ್ನೊಬ್ಬರು ಅದನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಾಲಿಸಬೇಕು. ಈ ರೀತಿಯಾಗಿ ಆಟ ಇರುತ್ತದೆ. ಆದರೆ ತ್ರಿವಿಕ್ರಮ್, ಭವ್ಯಾ ಅವರಿಗೆ ಮುಟ್ಟಿ ಸಹಾಯ ಮಾಡಿದ್ದಾರೆ ಎನ್ನುವುದು ಚೈತ್ರಾ ಅವರ ವಾದ. ಆದರೆ ಇದನ್ನು ಯಾರೂ ಒಪ್ಪುತ್ತಿಲ್ಲ. ಇಲ್ಲ ನಾನು ಮುಟ್ಟಿಲ್ಲ ಎಂದು ತ್ರಿವಿಕ್ರಮ್ ಸಾಕಷ್ಟು ಬಾರಿ ಹೇಳಿದ್ದಾರೆ.
ನಂತರವೂ ಭವ್ಯಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡುವ ಸಮಯದಲ್ಲಿ ಚೈತ್ರಾ ತುಂಬಾ ಕಿರುಚಾಡುತ್ತಾರೆ. ಭವ್ಯ ಸುಮ್ಮನಿರಿ ಎಂದು ಕೇಳಿಕೊಂಡರೂ ಕೇಳಿಲ್ಲ. ಆಗ ಅವರು ತಮ್ಮ ಕೈಯ್ಯನ್ನು ಅಲ್ಲಿದ್ದ ಮೇಜಿಗೆ ಭವ್ಯಾ ಜೋರಾಗಿ ಕೋಪದಲ್ಲಿ ಬಡಿದಿದ್ದಾರೆ. ಅವರ ಕೈಗಿದ್ದ ಬಳೆಗಳು ಪುಡಿ ಪುಡಿಯಾಗಿ ಬಿದ್ದ ಘಟನೆ ಕೂಡ ನಡೆಯಿತು.
BBK 11: ವೀಕೆಂಡ್ನಲ್ಲಿ ಚೈತ್ರಾರ ಮೈಚಳಿ ಬಿಡಿಸಿದ ಸುದೀಪ್ ಎಪಿಸೋಡ್ಗೆ ದಾಖಲೆಯ ಟಿಆರ್ಪಿ