Saturday, 30th November 2024

Ration Card: ಪಡಿತರ ಚೀಟಿದಾರರೇ ಗಮನಿಸಿ, ಇ-ಕೆವೈಸಿ ಮಾಡಿಸಲು ಇಂದೇ ಕಡೆಯ ದಿನ

Ration Card New Rule

ಬೆಂಗಳೂರು: ನೀವು ಪಡಿತರ ಚೀಟಿ (Ration Card) ಹೊಂದಿರುವವರಾಗಿದ್ದರೆ, ನಿಮ್ಮ ಇ-ಕೆವೈಸಿ (E-KYC) ಪೂರ್ಣಗೊಳಿಸಲು ಡಿಸೆಂಬರ್ 1 ಕಡೆಯ ದಿನವಾಗಿದೆ. ಇದನ್ನು ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗಬಹುದು.

ರಾಜ್ಯ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡುವಂತೆ ಸೂಚನೆಗಳನ್ನು ನೀಡಿದ್ದು, ಸೆಪ್ಟೆಂಬರ್ 1 ಕೊನೆಯ ದಿನಾಂಕವಾಗಿತ್ತು. ನಂತರ ಇ-ಕೆವೈಸಿ ಮಾಡದವರಿಗೆ ಅವಧಿಯನ್ನು ಸರ್ಕಾರ ಒಂದು ತಿಂಗಳು, ಬಳಿಕ ನವೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ಈ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ.

ಪಡಿತರ ಚೀಟಿದಾರರು ತಮ್ಮ ಗುರುತು ನೋಂದಣಿ ಅಥವಾ ಮರುನೋಂದಣಿ ಮಾಡಿಸದೇ ಇರುವ ಎಲ್ಲಾ ಸದಸ್ಯರು ನವೆಂಬರ್ 30ರಂದು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೀಡಿ ಬಯೋಸಂಗ್ರಹಣೆ (ಇ-ಕೆವೈಸಿ) ಸಂಗ್ರಹಣೆ ಕಾರ್ಯ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ. ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು. ಹಾಗಾಗಿ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಸಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಹೆಬ್ಬೆರಳು ನೀಡಿ ಹೆಸರು ಮರು ನೋಂದಾವಣೆ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಈ ದಾಖಲೆಗಳು ಕಡ್ಡಾಯ

ಪಡಿತರ ಚೀಟಿಯ ಒರಿಜಿನಲ್ ಪ್ರತಿ
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ
ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ
ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೋ

ಪಡಿತರ ಚೀಟಿ ಮತ್ತು ಆಧಾರ್ ಅನ್ನು ಆನ್ ಲೈನ್‌ನಲ್ಲಿ ಈ ರೀತಿ ಲಿಂಕ್ ಮಾಡಿ

ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್‌ಗೆ ಭೇಟಿ ನೀಡಿ.
ಸಕ್ರಿಯ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿ.
ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಮುಂದುವರಿಯಿರಿ / ಸಲ್ಲಿಸಿ ಬಟನ್ ಆಯ್ಕೆ ಮಾಡಿ.
ನೀವು ಈಗ ನಿಮ್ಮ ಮೊಬೈಲ್ ಫೋನ್‌ಗೆ ಒಟಿಪಿಯನ್ನು ಸ್ವೀಕರಿಸುತ್ತೀರಿ.
ಆಧಾರ್ ಪಡಿತರ ಲಿಂಕ್ ಪುಟದಲ್ಲಿ ಒಟಿಪಿಯನ್ನು ನಮೂದಿಸಿ, ಮತ್ತು ನಿಮ್ಮ ವಿನಂತಿಯನ್ನು ಸಲ್ಲಿಸಿ.

ಇದನ್ನೂ ಓದಿ: Job news: ಸಿಹಿ ಸುದ್ದಿ, ಕಂದಾಯ ಇಲಾಖೆಯಲ್ಲಿ 1000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ