Friday, 20th September 2024

ಮಗುವಿಗೆ ದೊರೆಯಲಿ ಈ ಅಮೃತ

ಹಸುಗೂಸುಗಳಿಗೆ ಎದೆ ಹಾಲು ನೀಡುವುದು ಪುರಾತನ ಸಂಸ್ಕೃತಿ. ಆದರೆ, ಈಚೆಗೆ, ನಾಗರಿಕತೆಯ ಸೋಗಿನಲ್ಲಿ, ಈ ಒಂದು ಚಟುವಟಿಕೆಯಿಂದ ದೇಹದ ಸೌಂದರ್ಯ ಕೆಡುವುದೆಂಬ ತಪ್ಪು ತಿಳಿವಳಿಕೆ ಅಲ್ಲಲ್ಲಿ ಹುಟ್ಟಿದೆ. ಅದು ತಪ್ಪು. ಮಗುವಿಗೆ ಎದೆಹಾಲು ಕೊಡುವುದರಿಂದ, ಮಗುವಿನ ದೇಹದಲ್ಲಿ ಶಕ್ತಿಯನ್ನು ಹುಟ್ಟುಹಾಕಬಹುದು.

ಡಾ.ಕರವೀರ ಪ್ರಭು ಕ್ಯಾಲಕೊಂಡ

ಮಗುವಿಗೆ ಎದೆ ಹಾಲು ಅಮೃತ ಸಮಾನ. ಇದರಲ್ಲಿ ಎರಡು ಮಾತಿಲ್ಲ. ಎದೆಹಾಲಿನ ಬದಲಾಗಿ ಪರ್ಯಾಯ ಆಹಾರ ಆರಂಭಿಸಿ
ದಾಗ ಮಗು ಹಲವಾರು ತೊಂದರೆಗಳಿಂದ ಬಳಲುತ್ತದೆ.

ಇವುಗಳಲ್ಲಿ ಮುಖ್ಯವಾದವುಗಳು ಅತಿಸಾರ, ಅಪೌಷ್ಟಿಕತೆ ಮತ್ತು ಶ್ವಾಸಕೋಶದ ಸೋಂಕು. ಮೊದಲ ಎರಡು ತಿಂಗಳಲ್ಲಿ ಎದೆ ಹಾಲು ನೀಡದಿದ್ದಲ್ಲಿ ಇಂತಹ ಅಪಾಯಗಳು ಆರು ಪಟ್ಟು ಹೆಚ್ಚು. ಜಾಗತಿಕ ಆರೋಗ್ಯ ಸಂಸ್ಥೆೆ ನಿರಾತಂಕವಾಗಿ ಎದೆ ಹಾಲುಣಿಸ ಬಹುದು ಎಂದು ಕರೆ ನೀಡಿದ್ದರೂ, ಅಭಿವೃದ್ಧಿಶೀಲ ರಾಷ್ಟ್ರ ಗಳಲ್ಲಿ ಇದನ್ನು ತಡವಾಗಿಯೇ ಪ್ರಚಾರ ಮಾಡಲಾಗಿತ್ತು. ನಮ್ಮ ಜನಪದರು ತಾಯಿಯ ಹಾಲಿನ ಬಗ್ಗೆೆ ಮನಮುಟ್ಟುವಂತೆ ತ್ರಿಪದಿಯಲ್ಲಿ ಹೇಳಿದ್ದಾರೆ.

ಹಣ್ಣುಹಾಲಿಗಿಂತ, ಬೆಣ್ಣೆೆತುಪ್ಪಕ್ಕಿಂತ ಚೆನ್ನಾಗಿ ಕಳಿತ ರಸಬಾಳೆ! ಹಣ್ಗಿಂತ ಚೆನ್ನ ತಾಯಿಯ ಎದೆಹಾಲು… ತಾಯಿಯ ಹಾಲು ಮಗುವಿಗೆ ಸರ್ವಶ್ರೇಷ್ಠ ಅಮೃತ ವೆಂಬುದು ವೈಜ್ಞಾನಿಕವಾಗಿ ಬೆಳಕಿಗೆ ಬಂದಿದೆ. ತಾಯಿ ಮಗುವಿಗೆ ಮೊಲೆಯುಣಿ ಸುವಾಗ ಆಕೆ ತನ್ನ ಮಗುವನ್ನು ಅಪ್ಯಾಯಮಾನವಾಗಿ ಅಪ್ಪಿ ಹಿಡಿದು ಅದಕ್ಕೆ ಆಹಾರ ಕೊಡುವುದಲ್ಲದೆ, ಪ್ರೀತಿ ವಾತ್ಸಲ್ಯವನ್ನೂ ಧಾರೆಯೆರೆಯುತ್ತಾಳೆ. ಅದು ಅವರಿಬ್ಬರ ಮದ್ಯೆ ಮಧುರ ಬಾಂಧವ್ಯವನ್ನು ಬೆಳೆಸುತ್ತದೆ.

ನಾಗರಿಕತೆಯ ಸೋಗಿನಲ್ಲಿ ತೊಡಕುಗಳು
ಇತ್ತೀಚೆಗೆ ನಾಗರಿಕತೆಯ ಸೋಗಿನಲ್ಲಿ, ಜಾಹಿರಾತುಗಳ ವ್ಯಾಮೋಹದಲ್ಲಿ, ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಈ ಚಟುವಟಿಕೆ ಯಿಂದ ತಾಯಿಯ ಸೌಂದರ್ಯ ಹಾಳಾಗುವುದೆಂಬ ತಪ್ಪು ಭಾವನೆ ಹೆಪ್ಪುಗಟ್ಟುತ್ತಿದೆ. ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ. ಇದು ಅನೇಕ ಅನಾಹುತಗಳಿಗೆ ಆಸ್ಪದ ಮಾಡಿಕೊಡು ವುದು. ಎಚ್.ಐ.ವಿ ಸೋಂಕಿತ ತಾಯಂದಿರು ಸಹ ಮೊದಲ ಆರು ತಿಂಗಳು ಎದೆಹಾಲನ್ನು ನೀಡುವುದು ಸುರಕ್ಷಿತ. ಹಸುವಿನ ಹಾಲನ್ನು ಬಾಟಲ್ ಫೀಡ್ ಮುಖಾಂತರ ನೀಡುವುದು ಸಾಮಾನ್ಯ.

ಶಿಶುವಿಗೆ ಎದೆಹಾಲು ನೀಡದೇ ಇರುವ ಸಂದರ್ಭಗಳಲ್ಲಿ, ಪರ್ಯಾಯ ವ್ಯವಸ್ಥೆಯನ್ನು ಕನಿಷ್ಠ ಆರು ತಿಂಗಳವರೆಗೆ ಮಾಡಿ ಕೊಳ್ಳಬೇಕು. ಹಸುವಿನ ಹಾಲು ಅಥವಾ ಹಾಲಿನ ಪೌಡರನ್ನು ನಿರಂತರವಾಗಿ ಖರೀದಿಸುವ ಸಾಮರ್ಥ್ಯ ಆ ಕುಟುಂಬಕ್ಕೆ ಇದೆಯೋ ಎಂಬುದನ್ನು ಲಭ್ಯತೆ ಬಗ್ಗೆಯೂ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತದೆ. ಪರ್ಯಾಯ ವ್ಯವಸ್ಥೆಯಲ್ಲಿ ಶುಚಿತ್ವಕ್ಕೆ ಅತೀ ಮಹತ್ವ ಎಂಬುದನ್ನು ತಾಯಂದಿರು ಮರೆಯಬಾರದು. ಅಲಕ್ಷಿಸಿದರೆ ಇದೇ ಕೂಸಿನ ಕುತ್ತಿಗೆಗೆ ಹರಿತವಾದ ಕತ್ತಿಯಾಗ ಬಹುದು !

ಗಿಣ್ಣುಹಾಲು ಶಕ್ತಿಯ ಮೂಲ
ಹೆರಿಗೆಯಾದ ಅರ್ಧ ತಾಸಿನ ನಂತರ ಶಿಶುವಿಗೆ ಮೊಲೆ ಹಾಲುಣಿಸಲು ಪ್ರಾರಂಭಿಸಬೇಕು. ಆಗ ಸ್ತನಗಳಿಂದ ಹಳದಿ ಹಸಿರು ವರ್ಣದ ಗಿಣ್ಣುಹಾಲು ಗಟ್ಟಿಯಾಗಿ ಸ್ರವಿಸುವುದು.

ಇದರಲ್ಲಿ ಪ್ರೋಟೀನ್
ವಿಫುಲವಾಗಿದ್ದು ಗ್ಲಾಬ್ಯುಲಿನ್ ಅಂಶಗಳನ್ನು ಒಳಗೊಂಡಿರುತ್ತದೆ. ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ. ’ಎ’
ವಿಟಮಿನ್ ಹೇರಳವಾಗಿರುತ್ತದೆ. ಇದು ಇರುಳುಗಣ್ಣು ಸಮೀಪ ಸುಳಿಯದಂತೆ ಮಾಡುತ್ತದೆ. ಗಿಣ್ಣು ಹಾಲು ಸೇವನೆಯು, ಬಾಲ್ಯ ದಲ್ಲಿಅನೇಕ ರೋಗಾಣುಗಳಿಂದ ಉದ್ಭವಿಸುವ ಸೋಂಕು ರೋಗಗಳ ವಿರುದ್ಧ ಸೆಣೆಸಬಲ್ಲ ಶಕ್ತಿ ಸಾಮರ್ಥ್ಯವನ್ನು ತಂದುಕೊಡು ತ್ತದೆ. ಕೇಸಿನ್ ಪ್ರಮಾಣ ಹಸುವಿನ ಹಾಲಿನಲ್ಲಿ ಹೆಚ್ಚು ಇರುವುದರಿಂದ ಹಾಲು ಬೇಗ ಹೆಪ್ಪುಗಟ್ಟುತ್ತದೆ.

ಇದರಿಂದ ಮಕ್ಕಳು ಅಜೀರ್ಣದ ತೊಂದರೆಗಳನ್ನು ಹೊಂದಬಹುದು. ಹೊಟ್ಟೆ ಉಬ್ಬಬಹುದು, ಹೊಟ್ಟೆ ನುಲಿತದಿಂದ ನರಳ ಬಹುದು. ಮೊಲೆಹಾಲು ಕುಡಿದ ಮಕ್ಕಳಲ್ಲಿ ಇಂಥ ಸಾಧ್ಯತೆಗಳು ಕಡಿಮೆ. ಸಂಶೋಧನೆಗಳು ತಾಯಿ ಹಾಲಿನಲ್ಲಿರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ. ಇದು ಕೊಲೆಸ್ಟ್ರಂನಲ್ಲಿ ಅತ್ಯಧಿಕ. ತಾಯಿ ಹಾಲಿನಲ್ಲಿ ಐಜಿಎ, ಐಜಿಜಿ ಮತ್ತು ಐಜಿಎಮ್ ಪ್ರತಿಕಾಯಗಳು ಇರುತ್ತವೆ. ಈ ರೋಗ ನಿರೋಧಕ ವಸ್ತುಗಳು ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಬರಬಹುದಾದ ನೆಗಡಿ, ಕೆಮ್ಮು, ಪೋಲಿಯೊ, ನ್ಯೂಮೋನಿಯಾ, ಭೇದಿಗಳಿಂದರಕ್ಷಣೆ ಯನ್ನೊದಗಿಸುತ್ತವೆ. ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲ.

ಎಳೆಯ ಮಕ್ಕಳಿಗೆ ಯೋಗ್ಯಆಹಾರ, ಪ್ರೀತಿ, ವಾತ್ಸಲ್ಯ, ಪ್ರೋತ್ಸಾಹ ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಬೇಕು. ಎದೆಹಾಲು ಕೊಡುಗೆ ಎಲ್ಲ ಅಗತ್ಯಗಳನ್ನು ಪೂರೈಸಿ ಸೋಂಕಿತ ತಾಯಂದಿರ ಮಕ್ಕಳ ಜೀವನಕ್ಕೆ ಅತ್ಯುತ್ತಮ ಬುನಾದಿಯನ್ನು ಹಾಕುತ್ತದೆ. ಅದು ಜೈವಿಕಕಾರ್ಯ ಕ್ರಿಯೆಯ ಮೂಲಭೂತ ಭಾಗ ಎಂದು ಜಾಗತಿಕ ಆರೋಗ್ಯ ಸಂಸ್ಥೆೆಹೇಳಿದೆ.

ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ಮೊಲೆಹಾಲು ಕುಡಿಸುವುದನ್ನು ಮರೆಯಬಾರದು. ಜಾಹಿರಾತುಗಳ ಮೋಡಿಗೆ ಮರುಳಾಗ ಬಾರದು. ಕರುಳಿನ ಕುಡಿಯಲ್ಲಿ ಬದುಕಿನ ಭರವಸೆಯ ಬೆಳ್ಳಿರೇಖೆಗಳು ಮೂಡಲು ಮೊದಲು ಆರು ತಿಂಗಳು ಮೊಲೆ ಹಾಲು ಕುಡಿಸಬೇಕು. ಯುಕ್ತ ಎನಿಸಿದರೆ ಇನ್ನೂ ಹೆಚ್ಚಿನ ಅವಧಿಗೆ ಎದೆ ಹಾಲು ಕೊಡಬಹುದು. ಮಿಕ್ಸ್‌ಡ್ ಫೀಡಿಗೆ ವಿದಾಯ ಹೇಳಬೇಕು. ಇದು ಇಂದಿನ ಅವಶ್ಯಕತೆ ಕೂಡ.