Saturday, 23rd November 2024

ಷೇರುಪೇಟೆ ಕುಸಿತ: 530.95 ಪಾಯಿಂಟ್ ಇಳಿಕೆ

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ಕುಸಿತ ದಾಖಲಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 530.95 ಪಾಯಿಂಟ್ ಕುಸಿತ ಕಂಡಿದೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 530.95 ಪಾಯಿಂಟ್ಸ್‌ ಇಳಿಕೆಗೊಂಡು 48,347.59 ಕ್ಕೆ ಇಳಿದಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 133.00 ಪಾಯಿಂಟ್ ಕುಸಿದು 14,238.90 ಕ್ಕೆ ಇಳಿದಿದೆ.

ಸುಮಾರು 915 ಷೇರುಗಳು ಏರಿಕೆಗೊಂಡರೆ, 2009 ಷೇರುಗಳು ಕುಸಿದಿವೆ ಮತ್ತು 152 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.