7 ಪದ್ಮವಿಭೂಷಣ, 10 ಪದ್ಮ ಭೂಷಣ, 102 ಪದ್ಮಶ್ರೀ ಪ್ರಶಸ್ತಿ ಗೌರವ
ದೆಹಲಿ: ರಾಜ್ಯದ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ದೊರೆತಿದೆ. ಇದಲ್ಲದೇ, ರಾಜ್ಯದ ಮೂವರು ಸಾಧಕರು ಪದ್ಮಶ್ರೀ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ. 72ನೇ ಗಣರಾಜ್ಯೋತ್ಸವದ ಮುನ್ನಾ ದಿನ ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳನ್ನು ಸರಕಾರ ಪ್ರಕಟಿಸಿದೆ.
*ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಈ ವರ್ಷ ಒಟ್ಟು 207 ಪೊಲೀಸ್ ಪದಕಗಳು ಮತ್ತು 89 ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಶ್ರೇಷ್ಠ ಸೇವೆಗಾಗಿ 650 ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.
*ರಾಷ್ಟ್ರಪತಿಗಳ ಪೊಲೀಸ್ ಪದಕ(ಪಿಪಿಎಂಜಿ) ಶೌರ್ಯ ಪ್ರಶಸ್ತಿಗೆ ಇಬ್ಬರು ಭಾಜನರಾಗಿದ್ದು, ಅವರಲ್ಲಿ ಸಿಆರ್‌ಪಿಎಫ್‌ನ ಮೋಹನ್ ಲಾಲ್ ಮತ್ತು ಜಾರ್ಖಂಡ್ ಪೊಲೀಸ್ ಎಎಸ್‌ಐ ಬನುವಾ ಒರಾನ್ ಅವರಿಗೆ ನೀಡಲಾಗಿದೆ. ಎರಡನೇ ಅತ್ಯುನ್ನತ ಪೊಲೀಸ್ ಪದಕ ಶೌರ್ಯ ಅಥವಾ ಪಿಎಂಜಿ ಪದಕವನ್ನು 205 ಸಿಬ್ಬಂದಿಗೆ ನೀಡಲಾಗಿದೆ.
*ಕರ್ನಾಟಕದ 19 ಪೊಲೀಸರಿಗೆ ಈ ಬಾರಿ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಗುವುದು.
ಕೋಟ್
ನನಗೆ ಸಂದ ಈ ಗೌರವವನ್ನು ಭುವನೇಶ್ವರಿಗೆ ಅರ್ಪಿಸುತ್ತೇನೆ. ಕನ್ನಡಕ್ಕಾಗಿ ಸೇವೆ ಮಾಡುವ ಅಗತ್ಯವಿದೆ. ಕನ್ನಡ ಭಾಷೆಯನ್ನು ಎತ್ತಿ ಹಿಡಿಯದೇ ಹೋದರೆ ಆಂಗ್ಲಭಾಷೆ ನಮ್ಮ ಕನ್ನಡ ಭಾಷೆಯನ್ನು ನುಂಗಿ ಬಿಡುತ್ತದೆ. ನಮ್ಮ ಕನ್ನಡ ಭಾಷೆಗಾಗಿ ನನ್ನಿಂದಾದ
ಕೊಡುಗೆ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ಈ ಪ್ರಶಸ್ತಿಯನ್ನು ಕನ್ನಡ ಸರಸ್ವತಿಗೆ ದೊರಕಿದೆ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಶಿಕ್ಷಣ ಕನ್ನಡದಲ್ಲೇ ಆದರೆ ಸ್ವಂತಿಕೆಯನ್ನು, ಸೃಜನಶೀಲತೆಯನ್ನು ಉಳಿಸಿಕೊಳ್ಳುತ್ತಾರೆ. ಜತೆಗೆ ನಮ್ಮ ಕನಸುಗಳಿಗೂ ಗೌರವ ನೀಡುತ್ತಾರೆ.
– ಚಂದ್ರಶೇಖರ ಕಂಬಾರ ಪದ್ಮಭೂಷಣ ಪುರಸ್ಕೃತ ಸಾಹಿತಿ