Friday, 20th September 2024

ಟ್ರಕ್ ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್: ಐವರ ಸಾವು

ಚಿತ್ತೂರ್ ಗಢ : ಉತ್ತರ ಪ್ರದೇಶದ ಬಡೋದಿ ಜಿಲ್ಲೆಯ ಗೋಪಿಗಂಜ್ ಬಳಿ ಮೃತದೇಹವನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಾರಾಣಸಿ-ಪ್ರಯಾಗ್ ರಾಜ್ ಹೆದ್ದಾರಿಯಲ್ಲಿ ಅಮಾವಾ ಅಂಡರ್ ಪಾಸ್ ಬಳಿ ನಿಂತಿದ್ದ ಟ್ರಕ್ ಗೆ ಅಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ದಟ್ಟ ಮಂಜಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.