ಗುಂಡುರಾವ್ ಅಫಜಲಪುರ
ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ವಿ.ವಿ. ಜ್ಯೋೋತ್ಸ್ನಾ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಂಚರಿಸುತ್ತಿದ್ದು, ಗುರುವಾರ ತಾಲೂಕಿನ ವಿವಿಧ ಸರಕಾರಿ ಕಚೇರಿಗೆ ಹಠಾತ್ ಭೇಟಿ ನೀಡಿದರು.
ಇದರಿಂದ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರೂ ಸಹ ತಬ್ಬಿಬ್ಬುಗೊಳ್ಳುವಂತಾಯಿತು. ಜಿಲ್ಲಾಧಿಕಾರಿಗಳು ಆರಂಭದಲ್ಲಿ ತಹಸೀಲ್ದಾರ್ ಕಚೇರಿಗೆ, ನಂತರ ಸರಕಾರಿ ಆಸ್ಪತ್ರೆ ಮತ್ತು ಭೀಮಾ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿದ್ದರಿಂದ ಅಲ್ಲಿನ
ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಕಿತಗೊಂಡರು.
ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ಆಗಮಿಸಿದಾಗ ತಹಸೀಲ್ದಾರ್ ನಾಗಮ್ಮ ಎಂ.ಕೆ. ಅವರು ಕೇಂದ್ರ ಸ್ಥಾನದಲ್ಲಿ ಇರಲಿಲ್ಲ. ಅವರು ದೇವಲ್ ಗಾಣಗಾಪೂರಕ್ಕೆ ಕರ್ತವ್ಯದ ಮೇಲೆ ತೆರಳಿದ್ದರು. ತಹಸಿಲ್ದಾರರು ಇಲ್ಲದೇ ಇದ್ದುದರಿಂದ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ಹೊಂದಿದರು.
ತಕ್ಷಣವೇ ತಹಸಿಲ್ದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿಗಳು ನಂತರ
ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಆಸ್ಪತ್ರೆೆಯಲ್ಲಿ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ನೆಲದ ಹಾಸಿಗೆಯ ಮೇಲೆ ಕುಳಿತಿದ್ಚದರು. ಇದನ್ನೆಲ್ಲ ನೋಡಿದ ಜಿಲ್ಲಾಧಿಕಾರಿಗಳುಕೋವಿಡ್ ನಿಯಮಗಳನ್ನು ಪಾಲಿಸದ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗಳನ್ನು ಹೆಚ್ಚಿನ ಜನರು ಪಡೆಯದ ಕುರಿತು ಮನಗಂಡ ಜಿಲ್ಲಾಧಿಕಾರಿಗಳು, ಈ ಕುರಿತು ಜಾಗೃತಿ ಮೂಡಿಸಬೇಕು. ಬಹಳಷ್ಟು ಜನರು ಲಸಿಕೆ ತೆಗೆದುಕೊಳ್ಳುವ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ
ಸಬೇಕು. 12 ಲಸಿಕಾ ಕೇಂದ್ರಗಳಿದ್ದು, ಅದರಲ್ಲಿ ಪ್ರತಿನಿತ್ಯ ಒಂದು ಸಾವಿರ ಜನರು ಲಸಿಕೆ ನೀಡಬೇಕು ಎಂದರು.
ಡಾ.ಮಹಾಂತಪ್ಪ ಹಾಳಮಳ್ಳಿ, ಭರತೇಶ್ ಮಾಲಗತ್ತಿ ಮುಂತಾದವರು ಉಪಸ್ಥಿತರಿದ್ದರು.
ಸೊನ್ನ ಬ್ಯಾರೇಜ್‌ಗೆ ಭೇಟಿ
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜ್‌ಗೆ ತೆರಳಿ ಪರಿಶೀಲಿಸಿದರು. ನೆರೆಯ ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಸುವ ಕುರಿತು ಅಧಿಕಾರಿಗಳ
ಜೊತೆ ಚರ್ಚೆ ಮಾಡಿದರು.