Saturday, 14th December 2024

ಬಿಲ್‌ಗೆ ಮೆಲಿಂದಾ ಗೇಟ್‌ ಪಾಸ್‌ ನೀಡಿದ ಕಾರಣ ಗೊತ್ತೆ ?

ಚಪಲ ಚೆನ್ನಿಗರಾಯ, ಮೋಜು ಮಸ್ತಿಯಲ್ಲಿ ಮುಳುಗೇಳುವ ಮಹಾರಾಯ

ಯೌವನದ ದಿನಗಳಲ್ಲಿ ಬಿಲ್ ಗೇಟ್ಸ್ ಆಡಿದ ಆಟಗಳ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳು ಬರತೊಡಗಿವೆ. ಅವರ ಐಷಾರಾಮಿ ಮತ್ತು ವೈಭವೋಪೇತ ಜೀವನ ಕುರಿತಾದ ವಿಷಯಗಳು ಬಹಿರಂಗಗೊಳ್ಳತೊಡಗಿವೆ. ಖಾಸಗಿ ಜೆಟ್ ವಿಮಾನಗಳು, ಹಳೆಯ ಗೆಳತಿಯರೊಂದಿಗೆ ವಾರಾಂತ್ಯ ಸಾಂಗತ್ಯ, ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ ಪ್ರಕರಣ ಗಳು, ಬಿಸಿನೆಸ್ ಜಗಳಗಳು, ಸಣ್ಣತನಗಳು ಇವೆಲ್ಲ ಹೊರಗೆ ಬಂದಿವೆ. ಇದಕ್ಕೂ ಮಿಗಿಲಾಗಿ ಜೆಫ್ರೀ ಎಪ್‌ಸ್ಟೀನ್ ಎಂಬ ಮಹಿಳೆಯೊಂದಿಗಿನ ಸಂಬಂಧವೂ ಮುನ್ನೆಲೆಗೆ ಬಂದಿದೆ. ಇವೆಲ್ಲ ಬಿಲ್ ಗೇಟ್ಸ್ ಅವರು ಹೊರಗೆ ಹೊಂದಿರುವ ಗಣ್ಯ ವ್ಯಕ್ತಿತ್ವಕ್ಕೂ ಅಸಲೀ ಮುಖಕ್ಕೂ ಇರುವ ವ್ಯತ್ಯಾಸವನ್ನು ಬೆತ್ತಲಾಗಿಸಿವೆ.

ಆಪಲ್ ಕಂಪನಿಯ ಸಿಇಒ ಆಗಿದ್ದ ಸ್ಟೀವ್ ಜಬ್ಸ್ ಅವರು ಮೈಕ್ರೊಸಾಫ್ಟ್‌ ಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಆಗಾಗ ಛೇಡಿಸು ತ್ತಿದ್ದರು; ಕಾಲೆಳೆಯುತ್ತಿದ್ದರು. ’ಬರಿ ಕಂಪ್ಯೂಟರ್, ಸಾಫ್ಟ್‌ವೇರ್ ಇದೇ ಆಯಿತು. ಚಿಕ್ಕವನಾಗಿದ್ದಾಗ ನಶೆ ಏರಿಸಿಕೊಂಡಂತೆ ಕಾಣಲಿಲ್ಲ. ಒಂದಷ್ಟು ಮಜ ಮಾಡಿ. ಇಲ್ಲವಾದರೆ ಆಶ್ರಮವನ್ನಾದರೂ ಸೇರಿಬಿಡಿ’ ಇದು ಅವರ ಮಾತಿನ ಧಾಟಿಯಾಗಿತ್ತು. ಹಾಗೆ ನೋಡಿದರೆ ಬಿಲ್ ಬಗ್ಗೆ ಜಬ್ಸ್‌ಗೆ ಬೇಕಾದಷ್ಟು ವಿಷಯಗಳು ಗೊತ್ತಿದ್ದವಾದರೂ ಅವರ ಇನ್ನೊಂದು ಮತ್ತು ಅಸಲಿ ಮುಖದ ಪರಿಚಯ ಇರಲಿಲ್ಲ.

ವಾಸ್ತವದಲ್ಲಿ ಜಬ್ಸ್ ತಿಳಿದುಕೊಂಡಷ್ಟು ಬಿಲ್ ಗೇಟ್ಸ್ ಸುಬಗನಾಗಿರಲಿಲ್ಲ. ಬದಲಾಗಿ ಆತ ಸಕಲಕಲಾವಲ್ಲಭನಾಗಿದ್ದ. ಚಪಲ ಚೆನ್ನಿಗರಾಯನಾಗಿದ್ದ. ಇಲ್ಲಿಯವರೆಗೆ ಬಿಲ್ ಗೇಟ್ಸ್ ಎಂದರೆ ಮೈಕ್ರೊಸಾಫ್ಟ್‌ನಂಥ ದೊಡ್ಡ ಸಾಮ್ರಾಜ್ಯದ ಅಧಿಪತಿ, ಬಿಲ್-
ಮೆಲಿಂದಾ ಗೇಟ್ಸ್ ಫೌಂಡೇಶನ್ ಮೂಲಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿರುವ ಧರ್ಮಭೀರು ಎಂದಷ್ಟೇ ಎಲ್ಲರೂ ತಿಳಿದಿದ್ದರು.

ಆದರೆ ಗೇಟ್ಸ್ ದಂಪತಿಯ 27 ವರ್ಷಗಳ ವೈವಾಹಿಕ ಜೀವನ ಮುರಿದು ಬೀಳುವ ಸುದ್ದಿ ಬರುತ್ತಿದ್ದಂತೆ ಬಿಲ್ ಗೇಟ್ಸ್ ಅವರ ಇನ್ನೊಂದು ಮುಖವನ್ನು ಅನಾವರಣಗೊಳಿಸುವಂಥ ವರದಿಗಳು ಹೊರಬೀಳತೊಡಗಿವೆ. ಯೌವನದ ದಿನಗಳಲ್ಲಿ ಬಿಲ್ ಗೇಟ್ಸ್ ಆಡಿದ ಆಟಗಳ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳು ಬರತೊಡಗಿವೆ. ಅವರ ಐಷಾರಾಮಿ ಮತ್ತು ವೈಭವೋಪೇತ ಜೀವನ ಕುರಿತಾದ ವಿಷಯಗಳು ಬಹಿರಂಗಗೊಳ್ಳತೊಡಗಿವೆ. ಖಾಸಗಿ ಜೆಟ್ ವಿಮಾನಗಳು, ಹಳೆಯ ಗೆಳತಿಯರೊಂದಿಗೆ ವಾರಾಂತ್ಯ
ಸಾಂಗತ್ಯ, ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ ಪ್ರಕರಣಗಳು, ಬಿಸಿನೆಸ್ ಜಗಳಗಳು, ಸಣ್ಣತನಗಳು ಇವೆಲ್ಲ ಹೊರಗೆ ಬಂದಿವೆ. ಇದಕ್ಕೂ ಮಿಗಿಲಾಗಿ ಜೆಫ್ರೀ ಎಪ್‌ಸ್ಟೀನ್ ಎಂಬ ಮಹಿಳೆಯೊಂದಿಗಿನ ಸಂಬಂಧವೂ ಮುನ್ನೆಲೆಗೆ ಬಂದಿದೆ.

ಇವೆಲ್ಲ ಬಿಲ್ ಗೇಟ್ಸ್ ಅವರು ಹೊರಗೆ ಹೊಂದಿರುವ ಗಣ್ಯ ವ್ಯಕ್ತಿತ್ವಕ್ಕೂ ಅಸಲೀ  ಮುಖಕ್ಕೂ ಇರುವ ವ್ಯತ್ಯಾಸವನ್ನು ಬೆತ್ತಲಾಗಿ ಸಿವೆ. ಎಪ್‌ಸ್ಟೀನ್ ಜತೆಗಿನ ಸಂಬಂಧವಂತೂ ಭಾರಿ ವಿವಾದ ಮತ್ತು ಬಿರುಗಾಳಿ ಎಬ್ಬಿಸಿದೆ. ಇವರಿಬ್ಬರ ವಿವಾಹೇತರ ಸಂಬಂಧ 2011ರಲ್ಲಿ ಆರಂಭವಾಯಿತು ಎಂದು ’ವಾಲ್ ಸ್ಟ್ರೀಟ್ ಜರ್ನಲ್’ ವರದಿ ತಿಳಿಸಿದೆ.

ದೊಡ್ಡವರ ವಿಷಯದಲ್ಲಿ ಪರಸಂಗ ಎಂಬುದು ದೊಡ್ಡ ವಿಷಯವೇನಲ್ಲ. ಆದರೆ ಆಕೆ ಅಂತಿಂಥ ಹೆಣ್ಣಲ್ಲ. ಅಪ್ರಾಪ್ತ ವಯಸ್ಕ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಆರೋಪದಲ್ಲಿ 13 ತಿಂಗಳು ಜೈಲು ಶಿಕ್ಷೆ ಅನುಭವಿಸಿದಾಕೆ. ಅಂಥ ಅನೈತಿಕ
ವ್ಯವಹಾರದಲ್ಲಿ ತೊಡಗಿ ಪಾತಕ ಕೃತ್ಯ ಎಸಗಿದ ಹೆಂಗಸಿನ ಜತೆಗೆ, ಈ ವಿಷಯ ಗೊತ್ತಿದ್ದೂ ಸಂಬಂಧ ಬೆಳೆಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಅದರಲ್ಲೂ ಮೆಲಿಂದಾ ಸಿಟ್ಟಿಗೇಳಲು, ರೊಚ್ಚಿಗೇಳಲು ಮತ್ತು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಇದೇ ಮುಖ್ಯ ಕಾರಣ ಎನ್ನಲಾಗಿದೆ. ಬಿಲ್ ಗೇಟ್ಸ್ ಪ್ರಣಯ ಪ್ರಕರಣಗಳಂತೂ ಸರಿಯೇ. ಅವರ ನಯವಂಚಕ ಪೃವೃತ್ತಿಯೂ ಬೆಳಕಿಗೆ ಬಂದಿದೆ. ಪಾಲ್ ಅಲೆನ್ ಎಂಬುವರು ಗೇಟ್ಸ್‌ರ ಶಾಲಾ ಗೆಳೆಯ. ಆತನೂ ತಂತ್ರಜನ ನಿಪುಣ. ಇಬ್ಬರೂ ಸೇರಿ ಮೈಕ್ರೊಸಾಫ್ಟ್ ಸ್ಥಾಪಿಸಿದ್ದರು

ಆದರೆ ದುರದೃಷ್ಟವಶಾತ್ ಅಲೆನ್ 1982 ರಲ್ಲಿ ಕ್ಯಾನ್ಸರ್ ಪೀಡಿತರಾಗಿ ಮೈಕ್ರೊಸಾಫ್ಟ್ನಿಂದ ಸ್ವಲ್ಪಕಾಲ ದೂರ ಇದ್ದರು. ಆದರೆ ಈ ಸಮಯವನ್ನು ಉಪಯೋಗಿಸಿಕೊಂಡ ಗೇಟ್ಸ್, ಶಾಲಾ ಗೆಳೆಯ ಮತ್ತು ಬಿಸಿನೆಸ್ ಪಾರ್ಟ್‌ನರ್‌ಗೇ ಮೋಸ ಮಾಡಲು ಯತ್ನಿಸಿದರು. ಅಲೆನ್ ಅವರ ಷೇರುಗಳು ಕರಗುವಂತೆ ವ್ಯವಸ್ಥಿತವಾಗಿ ನೋಡಿಕೊಂಡರು. ಗುಣಮುಖರಾಗಿ ಮೈಕ್ರೊಸಾಫ್ಟ್ಗೆ ವಾಪಸಾದ ಅಲೆನ್ ಇದನ್ನೆಲ್ಲ ನೋಡಿ ದಿಗ್ಭ್ರಮೆಗೊಂಡರು.

’ನೀನು ನಿನ್ನ ನಿಜ ಬಣ್ಣ ತೋರಿಸಿದೆ’ ಎಂದು ಕ್ರೋಧಗೊಂಡು ಅಲ್ಲಿಂದ ಹೊರನಡೆದ. ಬಿಲ್ ಗೇಟ್ಸ್ ಈ ಆಟಗಳನ್ನು ಮೊದಲಿ ನಿಂದಲೂ ತೊರಿಸುತ್ತಲೇ ಬಂದಿದ್ದರೆ ಎಂಬುದು ಇತಿಹಾಸವನ್ನು ಕೆದಕಿದಾಗ ಗೊತ್ತಾಗುತ್ತದೆ. ಶಾಲಾ ದಿನಗಳಿಂದಲೇ ಆತ ಪ್ರೋಗ್ರಾಮಿಂಗ್‌ನಲ್ಲಿ ಪರಿಣತನಾಗಿದ್ದನಲ್ಲವೆ. ಟೈಮ್ ಟೇಬಲ್ ಕೊಡ್‌ಗಳನ್ನೇ ಬದಲಾಯಿಸಿ ಚೆಂದುಳ್ಳಿ ಚೆಲುವೆಯರು ಇರುವ ಕ್ಲಾಸಿನಲ್ಲೇ ತಾನು ಇರುವಂತೆ ನೊಡಿಕೊಳ್ಳುತ್ತಿದ್ದರಂತೆ.

ಹಾರ್ವರ್ಡ್‌ನಲ್ಲಿದ್ದಾಗ ಕೂಡ ಗೇಟ್ಸ್ ಪೋಲಿ ಪಾರ್ಟಿಗಳಿಗೆ ಹೋಗುತ್ತಿದ್ದರಂತೆ. ’ನೀವು ಎಲ್‌ಎಸ್‌ಡಿ ತೆಗೆದುಕೊಂಡಿದ್ದಿರಾ’
? ಎಂದು ಹಿಂದೊಮ್ಮೆ ಪತ್ರಿಕೆಯೊಂದು ಕೇಳಿದಾಗ, ’ಅದೆಲ್ಲ ಹಳೆಯ ಕಥೆ’ ಎಂಬ ಹಾರಿಕೆಯ ಉತ್ತರ ನೀಡಿದ್ದರು. ಮದುವೆ ಯಾದ ಬಳಿಕವೂ ಈ ಆಟಗಳನ್ನು ಮುಂದುವರಿಸಿದ್ದರು. ಸಿಯಾಟಲ್ ಹೋಮ್‌ನಲ್ಲಿ ಈ ರಸಿಕಶಿಕಾಮಣಿ ನಡೆಸುತ್ತಿದ್ದ ಮೋಜು, ಮಸ್ತಿಗಳು ಅಷ್ಟಿಷ್ಟಲ್ಲ.

ಮೆಲಿಂದಾ ಫ್ರೆಂಚ್ ಪರಿಚಯವಾದಾಗ ಆಕೆಯ ಸಲಿಗೆ ಬೆಳೆಸಲು ಕೂಡ ಇದೇ ರೀತಿಯ ಬಗೆಬಗೆಯ ಟ್ರಿಕ್‌ಗಳನ್ನು ಗೇಟ್ಸ್
ಬಳಸು ತ್ತಿದ್ದರು ಎನ್ನಲಾಗಿದೆ. ಗೇಟ್ಸ್ ಅವರ ಈ ಸೀಲೋಲುಪ ಸ್ವಭಾವದ ಬಗ್ಗೆ ಮೆಲಿಂದಾಗೆ ಗೊತ್ತಿದ್ದೂ ಮದುವೆ ಆದರು. ಆದರೆ ಮದುವೆಯ ಬಳಿಕವೂ ಎಗ್ಗಿಲ್ಲದೆ ಕಾಮಚೇಷ್ಟೆ ಮುಂದುವರಿಯುತ್ತಿರುವ ಬಗ್ಗೆ ಆಗಾಗ ಮಾತು ಕತೆಗಳಾಗುತ್ತಿದ್ದವು ಎನ್ನಲಾಗಿದೆ. ಅಂತಿಮವಾಗಿ ಇದು ವಿಚ್ಛೇದನದವರೆಗೆ ಬಂದು ನಿಂತಿದೆ.