ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 27
ವಿಶ್ವವಾಣಿ ಕ್ಲಬ್‌ನಲ್ಲಿ ಡಾ.ಗುರುರಾಜ ಕರಜಗಿ ಅಭಿಮತ
ಬೆಂಗಳೂರು: ಕಷ್ಟದಲ್ಲಿರುವವರಿಗೆ ನಾವು ಹಣ ಮಾತ್ರ ಕೊಡಬೇಕೆಂದಿಲ್ಲ. ಪ್ರೀತಿ, ಸಾಂತ್ವನ ಹೇಳಿದರೆ ಸಾಕು. ಬದುಕಿನ ಮೌಲ್ಯ, ಅಂತಃಕರಣವೇ
ಮನುಷ್ಯನ ರೂಪ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂತಃಕರಣ, ಪ್ರೀತಿ ಯಿಂದ ಕೊಡುವುದರಲ್ಲಿ ಇರುವ ಸಂತೋಷ ಎಲ್ಲೂ ಸಿಗಲ್ಲ. ನೀಡುವುದರಲ್ಲಿ, ಪಡೆಯುವಲ್ಲಿ ತುಂಬಾ ಖುಷಿ ಆಗುತ್ತದೆ. ಹೊಸದಾಗಿ ಕೊಂಡಾಗ ಇರುವ ಸಂತೋಷ ದಿನ ಕಳದಂತೆ ತೀಕ್ಷ್ಣತೆ ಕಡಿಮೆ ಆಗುತ್ತದೆ. ಕೊಟ್ಟಿದ್ದು ಏನಾದರೂ ಇದ್ದರೆ ವರ್ಷಗಳು ಕಳೆದಂತೆ ಪ್ರೀತಿ ಹೆಚ್ಚಾಗುತ್ತದೆ. ಕೊಡುವುದು ಕೆಲವೊಮ್ಮೆ ಅಹಂಕಾರವಾಗಬಹುದು. ನಾವು ಕೊಡಬೇಕಾಗಿರುವುದು ಸಾಕಷ್ಟಿದೆ, ಕೊಡುತ್ತಿಲ್ಲ. ಪ್ರಪಂಚಕ್ಕೆ ನಾವು ಎಷ್ಟು ಕೊಡುತ್ತೇವೋ ಅಷ್ಟೇ ನಮಗೆ ಸಿಗುವುದು ಎಂದರು. ನನಗೆ ರವೀಂದ್ರನಾಥ್ ಟ್ಯಾಗೂರ್ ಬಹಳ ಇಷ್ಟ. ಗೀತಾಂಜಲಿ ಕೃತಿ ಇಷ್ಟ ಎನ್ನುತ್ತಾ, ಅದರಲ್ಲಿನ ಭಿಕ್ಷುಕ ಹಾಗೂ ರಾಜನ ನಡುವಿನ ಒಂದು ಸನ್ನಿವೇಶ ಕುರಿತು ಗುರುರಾಜ ಕರಜಗಿ ಅವರು ವಿವರಿಸಿದರು.
***
ವಿದ್ಯಾರ್ಥಿ ಜೀವನ ಅದ್ಭುತವಾದುದು. ಸ್ವಂತ ಜೀವನ ಇದು. ಹೆಜ್ಜೆ ಗುರುತು ಇಟ್ಟು ಹೋಗಬೇಕು. ಸಂಸ್ಕೃತಿ, ಆತ್ಮವಿಶ್ವಾಸ, ದೇಶಪ್ರೇಮ ಇರಬೇಕು. ಯಶಸ್ಸಿನತ್ತ ಸಾಗಬೇಕು.
– ಡಾ.ಗುರುರಾಜ ಕರಜಗಿ ಶಿಕ್ಷಣ ತಜ್ಞ