Saturday, 23rd November 2024

ದೇಸಿಯ ಸಂಗೀತ ಉಳಿಸಿ, ಬೆಳೆಸಬೇಕಿದೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 41

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗಾಯಕ ವಿಜಯಪ್ರಕಾಶ್ ಅಭಿಮತ

ಎಲ್ಲ ಸಂಗೀತವೂ ನನಗಿಷ್ಟ, ಆದರೆ, ನಮ್ಮತನವೇ ಶ್ರೇಷ್ಠ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಸಂಗೀತ ಕಡಿಮೆಯಾಗುತ್ತಿದೆಯೇ ಎನ್ನುವ ಚಿಕ್ಕ ಆತಂಕ ಆಗಾಗ್ಗೆ ಕಾಡುತ್ತಿದೆ. ನಮ್ಮ ಸಂಗೀತವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕಿದೆ ಎಂದು ಗಾಯಕ ವಿಜಯ ಪ್ರಕಾಶ್ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಮಾತನಾಡಿದ ಅವರು, ೧೯೭೦-೮೦ ದಶಕದಲ್ಲಿ ಚಿತ್ರೋದ್ಯಮದ ಸಂಗೀತಕ್ಕೂ ಈಗಿನ ಚಿತ್ರೋದ್ಯಮದ ಸಂಗೀತಕ್ಕೂ ವ್ಯತ್ಯಾಸವಿದೆ. ೨೦೧೦ರಿಂದೀಚೆಗಂತೂ ಈ ಆತಂಕ ಇನ್ನೂ ಹೆಚ್ಚುತ್ತಿದೆ. ನಾನು ಎಲ್ಲಾ ಸಂಗೀತವನ್ನೂ ಇಷ್ಟಪಡುತ್ತೇನೆ. ಪಾಶ್ಚಿಮಾತ್ಯ, ರಾಕ್, ಜಾಸ್, ಪಾಪ್ ಸಂಗೀತ ಕೇಳುತ್ತೇನೆ. ಆದರೆ ನಮ್ಮ ಸಂಗೀತ ಉಳಿಸಬೇಕಿದೆ ಎಂದು ಹೇಳಿದರು.

ಎಚ್.ಎಸ್ ವೆಂಕಟೇಶ್ ಮೂರ್ತಿ ಅವರು ಒಂದೊಂದು ಸಾಲನ್ನೂ ಅದ್ಭುತವಾಗಿ ಹೇಳಿದ್ದಾರೆ. ಇದರಂತೆಯೇ ನನ್ನ ಜೀವನವೂ ಕೂಡಾ. ಈ ಒಂದೊಂದು ಸಾಲಿನಂತೆ ಎಂದು ಅನಿಸುತ್ತದೆ. ಆದರೆ ನನ್ನ ಸಾಧನೆ ಏನೂ ಬೃಹತ್ ಅಲ್ಲವೇ ಅಲ್ಲ. ಹುಟ್ಟು ಕನ್ನಡಿಗನಾಗಿದ್ದರಿಂದ ಕನ್ನಡಿಗರೆಲ್ಲರೂ ಪ್ರತಿಯೊಂದು ಹೆಜ್ಜೆಗೂ ಆಶೀರ್ವಾದ, ಭರವಸೆ, ನಂಬಿಕೆ, ಕೊಟ್ಟು ಬೆನ್ನ ತಟ್ಟಿದ್ದರ -ಲವಾಗಿ ಇದೆಲ್ಲವೂ ಸಾಧ್ಯವಾಗಿದೆ ಇದಕ್ಕೆ ನನ್ನ ಧನ್ಯವಾದಗಳು.

ಮನೆಯಲ್ಲಿಯೇ ಸಂಗೀತ ಪಾಠ: ನನ್ನ ಜೀವನ ಪಯಣವನ್ನು ಹೇಳುವುದಾದರೆ ಯಾರೊಬ್ಬರ ಯಶಸ್ಸೂ ಅವ್ಯಕ್ತ ವಾಗಿರುವ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲ. ಮೈಸೂರಿನಲ್ಲಿ ಹುಟ್ಟಿದ ನಾನು ಮನೆಯಲ್ಲಿಯೇ ಸಂಗೀತಾಭ್ಯಾಸ ವನ್ನು ಪಡೆದುಕೊಂಡಿದ್ದೆ. ತಂದೆ ಐಡಿಯಲ್ ಜಾವಾ ಮೋಟಾರ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡು ತ್ತಿದ್ದರು. ಅವರು ಬಹಳ ಬುದ್ಧಿವಂತರಾಗಿದ್ದರು.

ಅವರು ಕಥೆ ಹಾಗೂ ಇತರೆ ಓದುವ ವಿಚಾರಗಳ ಮುಖಾಂತರ ವಿಚಾರಗಳನ್ನು ಸಂಗ್ರಹಿಸುತ್ತಿದ್ದರು. ಅವರು ಬುದ್ಧಿವಂತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ನನಗೆ ಸಂಗೀತದ ಬಗ್ಗೆ ಬಹಳ ಒಲವು. ಕಷ್ಟ ಜೀವಿಯಾಗಿದ್ದರೂ ನಾನು ಬಹಳ ಅಚ್ಚರಿಪಡುತ್ತೇನೆ. ಅವರು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆಯೆಂದು. ತಾಯಿ ಭರವ ಸೆಯ ದೀಪವಾಗಿದ್ದರು. ಎಲ್ಲಿ ದೀಪ ಇರುವುದೋ ಅಲ್ಲಿ ಅಭಿವೃದ್ಧಿಯಿರುತ್ತದೆ. ನನ್ನ ಸಂಗೀತಾಸಕ್ತಿಗೆ ಗುರುವಾಗಿದ್ದವರು ನಮ್ಮ ತಾತ. ಅವರು ಚಾಮುಂಡೇಶ್ವರಿ ಬೆಟ್ಟದಲ್ಲಿ ಹರಿಕಥೆಗಳನ್ನು ನಡೆಸಿಕೊಡುತ್ತಿದ್ದರು. ಅವರಿಂದ ನಾನು ಕಲೆಗೆ ಪ್ರಾಮುಖ್ಯತೆಯನ್ನು ಕೊಡುವುದು, ಕಲೆಯ ಕುರಿತಾದಂತೆ ಆಸಕ್ತಿ, ಅರಿವು ದೊರೆತಿದೆ. ಮನೆಯ ವಾತಾವರಣ, ಸಂಘರ್ಷಗಳೊಂದಿಗೆ ಒಪ್ಪಂದದಡ ನಡುವೆ ಸಂಗೀತವೂ ನನ್ನೊಂದಿಗಿತ್ತು.

ರೇಡಿಯೋ ತರಲು ನಿರ್ಧರಿಸಿದ್ದರು: ಇನ್ನು ಆಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಕನಾಟಕ ಸಂಗೀತದ ಪ್ರೇರಣೆ ಜಾಸ್ತಿ ಇತ್ತು. ನನಗೆ ಚಿತ್ರಗೀತೆಗಳನ್ನು ಕೇಳುವಲ್ಲಿ ಆಸಕ್ತಿಯಿತ್ತು. ಅದಕ್ಕೆ ನಮ್ಮ ಮನೆಯಲ್ಲಿ ಯಾವುದೇ ವಿರೋಧ ಬರಲಿಲ್ಲ ಬದಲಾಗಿ ನಾನು ಚಿತ್ರಗೀತೆಯನ್ನು ಕೇಳಬೇಕೆಂದುಕೊಂಡದ್ದಕ್ಕೆ ರೇಡಿಯೋ ತರಲು ನಿರ್ಧರಿಸಿದ್ದರು. ಇದಕ್ಕಾಗಿ ಮೂರು ತಿಂಗಳು ಕಾಲ ರೇಡಿಯೋ ತರಬೇಕೆಂದು ಯೋಜನೆ ಮಾಡಿದ್ದರು.ಅದರಂತೆ ಮೈಸೂರಿನ ರೇಡಿಯೋ ಪ್ಯಾಲೇಸ್‌ನಿಂದ ರೇಡಿಯೋವನ್ನು ಖರೀದಿಸಿದ್ದೆವು. ಈ ರೇಡಿಯೋ ತಂದಾಗ ಅದಕ್ಕಾಗಿ ಮಣೆ ಹಾಕಿ ರೇಡಿಯೋವನ್ನಿಟ್ಟು ಅದಕ್ಕೆ ಲೆದರ್ ಕವರ್‌ನ್ನು ಹಾಕಿದ್ದೆವು. ಆಗ ಸಣ್ಣ ವಿಷಯ ದಲ್ಲೂ ಸಂತಸ ಪಡುತ್ತಿದ್ದೆವು.

ಇದರಲ್ಲಿ ೭.೪೫ಕ್ಕೆ ಬರುತ್ತಿದ್ದ ಚಿತ್ರಗೀತೆಗಳನ್ನು ಕೇಳುವುದೇ ಒಂದು ಚಟವಾಗಿ ಹೋಗಿತ್ತು. ಆಗ ನಮ್ಮಲ್ಲಿ ಶಾಸೀಯ ಸಂಗೀತ ಮಾತ್ರ ಹಾಡುವಂತಹದಾಗಿತ್ತು.
ಆದರೆ ನನಗೆ ಹೊಸ ತರಹದ ಸಿನಿಮಾ ಮ್ಯೂಸಿಕ್ ಕೇಳುಬೇಕಾಗಿತ್ತು  ಹಾಗೂ ಆ ಸಂದರ್ಭದಲ್ಲಿ ಬರುತ್ತಿದ್ದ ವಾಶಿಂಗ್ ಪೌಡರ್ ನಿರ್ಮಾ ಜಿಂಗಲ್‌ಗೆ ಸ್ವರ
ಹಾಕುತ್ತಿದ್ದೆ. ಇದು ನಮ್ಮ ತಂದೆಯವರಿಗೆ ಹೊಸ ವಿಚಾರವಾಗಿತ್ತು. ಮನೆಗೆ ಬಂದ ನೆಂಟರೆದುರಲ್ಲೆಲ್ಲಾ ಈ ಜಿಂಗಲ್‌ಗೆ ಸ್ವರ ಹಾಕುವುದನ್ನು ಹೇಳಿ ಸಂತಸ ಪಡುತ್ತಿದ್ದರು.

ಪತ್ರ ಬರೆದಿಟ್ಟು ಬಾಂಬೆಗೆ ಹಾರಿದ್ದೆ: ಮೈಸೂರಿನಲ್ಲಿ ಹುಟ್ಟಿ ಬೆಳೆದ ನಾನು ಬಾಂಬೆಗೆ ಹೇಗೆ ಹೋದೆ ಅನ್ನುವುದು ಒಂದು ರೋಚಕ ಕಥೆ. ತಂದೆ ತಾಯಿ ಏನೂ ಕೊರತೆ ಮಾಡಿಲ್ಲ. ಅವರವರ ಕಷ್ಟಗಳಿಗೆ ಅವರೇ ಪರಿಹಾರ ಕಂಡುಕೊಳ್ಳುತ್ತಿದ್ದರು. ನಾನು ಬಾಂಬೆಗೆ ಹೋಗಿರುವುದು ಕೂಡಾ ನನ್ನ ವಿಧಿಯೆಂದೇ ನಂಬಿದ್ದೇನೆ. ಲೈಫ್ ಈಸ್ ಪ್ರೀ ರಿಟನ್ ಸ್ಟೋರಿ. ಹಿಂತಿರುಗಿ ನೋಡಿದಾಗ ಸಾಧನೆ ಮಾಡಿಲ್ಲ. ಎಲ್ಲವೂ ಅದಾಗದೇ ಆಯ್ತು ನಾನು ಸ್ಪಂದಿಸಿಕೊಂಡು ಹೋಗಿದ್ದೆ ಅಷ್ಟೇ. ಈಗ ನೋಡಿದರೆ ೨೫ ವರ್ಷಗಳಾಗಿವೆ.

ನಾನು ಮನೆಬಿಟ್ಟು ಹೋದದ್ದು ಕೂಡಾ ಒಂದು ಪತ್ರಬರೆದಿಟ್ಟು ನಾನು ಮನೆಬಿಟ್ಟು ಹೋಗಾ ಇದ್ದೇನೆ. ಭಯಪಡಬೇಡಿ ಅಂತ ಬರೆದಿಟ್ಟಿದ್ದೆ. ಇದಕ್ಕೆ ಮುಖ್ಯ ಕಾರಣ ನಾನು ಸಂಗೀತದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವುದಷ್ಟೇ. ಮನೆಯಿಂದ ಒಂದು ಚೀಲ. ಒಂದೆರಡು ಬಟ್ಟೆ ಹಾಗು ೭೦೦ ರುಪಾಯಿ ಮಾತ್ರ
ನನ್ನೊಂದಿಗಿದ್ದದ್ದು. ಮನೆ ಬಿಟ್ಟು ಹೊರಟಾಗ ತಂದೆ ಟಿವಿಎಸ್ ೫೦ಯಲ್ಲಿ ಎದುರಿಂದ ಬರುತ್ತಿದ್ದರು. ಎಲ್ಲವೂ ಭಗವಂತಹ ಪ್ರೇರಣೆ, ವಿಧಿ ಲಿಖಿತ ಅಷ್ಟೇ. ನಾನು ಯಾವುದಕ್ಕೂ ಕ್ರೆಡಿಟ್ ತಗೋತಾ ಇಲ್ಲ. ಇದು ಜಾಹಿರಾತಿಗಾಗಿಯೂ ಅಲ್ಲ. ಇಂದು ನಾನು ಮಾಡುವ ಕೆಲಸಕ್ಕೆ ದೇವರು ಕೊಡೋ ಕೊಡುಗೆ. ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಮಾಡಿದೆ ಅಷ್ಟೇ ಅಲ್ಲಿಂದ ಬಾಂಬೆ ತಲುಪಿದವನಿಗೆ ಸಿಕ್ಕಿದವರು ಸುರೇಶ್ ವಾಡೇಕರ್ ಅವರಿಂದ ಜಾಹೀರಾತಿನಲ್ಲಿ ಅವಕಾಶ ಸಿಕ್ಕಿತ್ತು.
ಬಹಳ ಅದ್ಭುತ ಪ್ರಪಂಚ ಅದು. ಧ್ವನಿ ಚೆನ್ನಾಗಿದೆ.

ನನ್ನಲ್ಲಿ ಯಾವ ಭಾಷೆ ಬರುತ್ತೆ ಅಂತ ಕೇಳಿದಾಗ ಕನ್ನಡ ಸ್ಫುಟವಾಗಿ ಮಾತನಾಡಲು, ಬರೆಯೋಕೆ ಬರುತ್ತೆ. ಅಲ್ಪ ಸ್ವಲ್ಪ ತಮಿಳು, ತೆಲುಗು, ಹಿಂದಿ ಬರುತ್ತೆ ಅಂದೆ. ಗ್ರಾಮರ್ ಇಲ್ಲದ ಹಿಂದಿ ಮಾತಾಡುತ್ತಿದ್ದೆ. ಕನ್ನಡದಲ್ಲಿ ಕೆಲಸ ಸಿಗೋಥರ ಮಾಡ್ತೀನಿ ಅಂದರು. ಅಲ್ಲಿ ವನಮಾಲಿ ವರ್ಡ್ಸ್ ಆಂಡ್ ವಾಯ್ಸ್ ಕಂಪನಿಯಲ್ಲಿ ಸಿಕ್ಕಿತು.
ಕಷ್ಟಪಡುವವರೆಗೆ ಮನುಷ್ಯನ ಗುಣ ಒಂದು ರೀತಿ ಇರುತ್ತದೆ ಯಶಸ್ಸಿನ ನಂತರ ಅವನಿಗೆ ಇನ್‌ಸೆಕ್ಯೂರಿಟಿ, ಸ್ವಲ್ಪ ಅಹಂಕಾರ, ಆಸೆ ಬಂದುಬಿಡುತ್ತದೆ. ಕೆಲಸ ಜಾಸ್ತಿ ಬಂದಾಗ ಇನ್ ಸೆಕ್ಯೂರಿಟಿ ಜಾಸ್ತಿಯಾಗುತ್ತದೆ.

ಕಷ್ಟಪಟ್ಟಾಗ, ಯಶಸ್ಸು ದೊರೆತಂತೆ ಇನ್ನೂ ಬೇಕು ಅನ್ನುವ ಭಾವನೆ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೆ ಆಗಾಗ ನೆನೆಸಿಕೊಳ್ಳುತ್ತೇನೆ ಬುಧಿ ಕರ್ಮಾನುಸಾರೇಣ ಅನ್ನವ ನಮ್ಮ ಹೆತ್ತವರು ಹೇಳಿಕೊಟ್ಟ ಮಾತುಗಳು. ಬಾಂಬೆ ನನಗೆ ಪ್ರಗತಿ, ಪ್ರೀತಿ, ಯಶಸ್ಸು ಎಲ್ಲಾ ಕೊಟ್ಟಿತು. ನನ್ನ ಬದುಕಿನಲ್ಲಿ ಎಲ್ಲಾ ಕೊಟ್ಟಿದೆ. ಅನುಭವವೇ ನನಗೆ ಗುರು. ಪ್ರತಿಯೊಬ್ಬರಲ್ಲೂ ಒಬ್ಬ ಗುರುವನ್ನು ಭಗವಂತ ಸೃಷ್ಟಿ ಮಾಡಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನುಭವವೆಂಬ ಗುರು ಇರುತ್ತಾನೆ.

ಪ್ರತಿಯೊಬ್ಬರಲ್ಲಿರುವ ನಾಯಕ,ಖಳನಾಯಕನ್ನು ಹತೋಟಿಯಲ್ಲಿಡುವ ಗುರು ಬೇಕು. ಪಾಪು ಎಂಬ ಅಡ್ಡ ಹೆಸರು: ನಾನು ಹುಟ್ಟಿದಾಗ ತಾಯಿ ಕಡೆಯಿಂದಲೂ ತಂದೆ ಕಡೆಯಿಂದಲೂ ನಾಮಕರಣಕ್ಕೆ ಗೊಂದಲ ಉಂಟಾಯಿತು. ಈ ಮಧ್ಯದ ಅವಧಿಯಲ್ಲಿ ನನಗೆ ಹೆಸರಿಲ್ಲದೆಯೇ ಪಾಪು ಅಂತ ಕರೆದರು. ಈಗ ಪಾಪು, ಪಾಪು ಅಣ್ಣಾ ಆಗಿ ಹೋಗಿದ್ದೇನೆ.

ನೂತನ ಸಿಎಂ ಕ್ಲಬ್ ಹೌಸ್‌ನಲ್ಲಿ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಅವರು ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಕ್ಲಬ್ ಹೌಸ್ ಪರಿಕಲ್ಪನೆ ಅದ್ಭುತವಾಗಿದೆ. ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬಹಳ ಅನಾನುಕೂಲವಿದೆ ಅವರ ಉನ್ನತ ವಿದ್ಯಾಭ್ಯಾಸಕ್ಕೆ ೧ ಸಾವಿರ ಕೋಟಿ ರು. ಸ್ಕಾಲರ್‌ಶಿಪ್ ನೀಡಲಾಗುವುದು, ಇದು ಈ ದೇಶದಲ್ಲೇ ಮೊದಲು. ರೈತರ ಮಕ್ಕಳು ಮುಂದೆ ಬರಬೇಕು.
ವಿದ್ಯಾವಂತನಾಗಬೇಕು ಎನ್ನುವ ಉದ್ದೇಶ, ಹಿರಿಯ ನಾಗರಿಕರಿಗೆ ಮಾಸಾಶನ ಸಾವಿರದಿಂದ ೧೨೦೦ ರು. ಹಾಗೂ ದಿವ್ಯಾಂಗರಿಗೆ ೬೦೦ ರಿಂದ ೮೦೦ ರು.
ಮಾಡುವುದಾಗಿ ಘೋಷಿಸಿದರು.